ಬೆಳಗಾವಿ, ೨೮: ಕೊಲೆ ಪ್ರಕರಣವೊಂದರ ಆರೋಪಿಗೆ ಜಾಮೀನು ಕೊಡಿಸುವ ನೆಪದಲ್ಲಿ ಆತನ ತಾಯಿ ಮೇಲೆ ಕಳೆದ ಒಂದು ತಿಂಗಳಿನಿಂದ ಕೀಚಕನೊಬ್ಬ ನಿರಂತರ ಅತ್ಯಾಚಾರ ಎಸಗಿರುವ ಆರೋಪ ಕೇಳಿ ಬಂದಿದೆ.
ಕೊಲೆ ಪ್ರಕರಣದಲ್ಲಿ ಬಂಧಿತನಾಗಿರುವ ತನ್ನ ಮಗನನ್ನು ಬಿಡಿಸಿಕೊಂಡು ಬರುತ್ತೇನೆ ಎಂದು ತನ್ನನ್ನು ದೈಹಿಕವಾಗಿ ತನ್ನ ಇಚ್ಛೆಗೆ ವಿರುದ್ಧವಾಗಿ ತಿಂಗಳುಗಟ್ಟಲೇ ಬಳಸಿಕೊಂಡ ಎನ್ನುತ್ತಿರುವ ಮಹಿಳೆ, ದೈಹಿಕ ಸಂಪರ್ಕದ ದೃಶ್ಯಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಫೋಟೋ ಮತ್ತು ವಿಡಿಯೋ ಹರಿಯಬಿಟ್ಟು ಆರೋಪಿ ವಿಕೃತಿ ಮೆರೆದಿದ್ದಾನೆ ಎಂದು ಮಹಿಳೆ ಆರೋಪಿಸಿದ್ದಾರೆ.
ಅಷ್ಟೇ ಅಲ್ಲದೆ ಮಹಿಳೆಯ ಮಗಳನ್ನು ಸಹ ಆರೋಪಿ ಕಿಡ್ನಾಪ್ ಮಾಡಿದ್ದು, ಸದ್ಯ ನ್ಯಾಯಕ್ಕಾಗಿ ಸಂತ್ರಸ್ತ ಮಹಿಳೆ ಜಿಲ್ಲಾ ಪೊಲೀಸ ವರಿಷ್ಠರ ಕಚೇರಿ ಮೆಟ್ಟಿಲೇರಿದ್ದಾರೆ. ನ್ಯಾಯ ಕೊಡಿಸಿ ಎಂದು ಮಹಿಳೆ ಅಳಲು ತೋಡಿಕೊಂಡಿದ್ದಾಳೆ. ಈ ಮಹಿಳೆಯ ಸಹಾಯಕ್ಕೆ ಎನ್ ಜಿ ಓ ಬಂದು ನೇರವಾಗಿ ಪ್ರಕರಣ ಸಹ ದಾಖಲಾಗಿದೆ.
ಎನ್ ಜಿ ಓ ಮುಖ್ಯಸ್ಥೆ ಪ್ರಮೀದಾ ಹಜಾರೆ ಮಾತನಾಡಿ, ‘ಆ ನೊಂದ ಮಹಿಳೆ ನಮ್ಮ ಕಚೇರಿಗೆ ಬಂದು ತಮ್ಮ ಸಮಸ್ಯೆ ಹೇಳಿಕೊಂಡರು. ತನ್ನ ಎರಡನೇ ಮಗ 2023ರ ಡಿಸೆಂಬರ್ ತಿಂಗಳಲ್ಲಿ ಕೊಲೆ ಆರೋಪದಡಿ ಆರೋಪಿಯಾಗಿದ್ದಾನೆ. ಆತ ನ್ಯಾಯಾಂಗ ಬಂಧನದಲ್ಲಿದ್ದು, ಬಿಡಿಸಿಕೊಂಡು ಬರಲು ಜಾಮೀನುದಾರ ಬೇಕಾಗುತ್ತಾರೆ. ಯಾರೂ ಕೂಡ ಸಹಾಯಕ್ಕೆ ಬರದೇ ಇದ್ದಾಗ ಪರಿಚಿತ ಮುಂದ ಬಂದ’ ಎಂದು ಸಂತ್ರಸ್ತೆ ಹೇಳಿಕೊಂಡರು ಎಂದು ಹೇಳಿದರು.
ಮಹಿಳೆಯನ್ನು ಬಳಸಿಕೊಂಡ ವ್ಯಕ್ತಿ “ನಿಮ್ಮ ಪುತ್ರನಿಗೆ ಜಾಮೀನು ನೀಡ್ತಿನಿ, ಆದ್ರೆ ನೀನು ನನ್ನ ಜೊತೆಗೆ ಅನೈತಿಕ ಸಂಬಂಧ ಇಟ್ಟುಕೊಳ್ಳಬೇಕು. ಇಲ್ಲವಾದರೇ ನಾನು ಜಾಮೀನು ಆಗೊಲ್ಲ” ಎಂದಿದ್ದ. ಮಹಿಳೆ ಬೇರೆ ಮಾರ್ಗ ಕಾಣದೇ ತನ್ನ ಮಗನನ್ನು ಬಿಡಿಸಿಕೊಳ್ಳಲು ಆತ ಹೇಳಿದ ಮಾತಿಗೆ ಸಮ್ಮತಿ ಸೂಚಿಸಿದ್ದಳು. ಬಳಿಕ ಮಗ ಜಾಮೀನು ಪಡೆದು ಹೊರ ಬಂದ ಬಳಿಕ ತನ್ನ ಅನೈತಿಕ ಸಂಬಂಧದ ತಪ್ಪಿನ ಅರಿವಾಗಿ ಆರೋಪಿಯೊಂದಿಗಿನ ಸಂಪರ್ಕ ಕಡಿತಗೊಳಿಸಿದ್ದಳು. ಇದರಿಂದ ರೊಚ್ಚಿಗೆದ್ದ ಆರೋಪಿಯು ಮಹಿಳೆ ಜೊತೆಗೆ ಇದ್ದ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಮಾಡಿದ್ದಾನೆ. ಅಲ್ಲದೇ ತನಗೆ 50 ಸಾವಿರ ರೂಪಾಯಿ ನೀಡಬೇಕು ಎಂದು ಬೇಡಿಕೆ ಇಟ್ಟಿದ್ದು, ಈಗ ಮಗಳನ್ನೂ ಕಿಡ್ನಾಪ್ ಮಾಡಿದ್ದಾನೆ ಎಂದು ಸಂತ್ರಸ್ತೆ ಅಳಲು ತೋಡಿಕೊಂಡಿದ್ದಾಳೆ. ಆತನಿಗೆ ಶಿಕ್ಷೆ ಆಗಬೇಕು’ ಎಂದು ಎನ್ ಜಿ ಓ ಮುಖ್ಯಸ್ಥೆ ಪ್ರಮೀದಾ ಹಜಾರೆ ಅವರು ಆಗ್ರಹಿಸಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಭೀಮಪ್ಪ ಗುಳೇದ ಅವರನ್ನು ಸಂಪರ್ಕಿಸಿದಾಗ, ಈ ಸಂಬಂಧ ಪ್ರಕರಣ ದಾಖಲಾಗಿದ್ದು, ಆರೋಪಿಯನ್ನು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಲಾಗುವುದು. ಸಾಮಾಜಿಕ ಜಾಲತಾಣಗಳಲ್ಲಿ ಆರೋಪಿ ಹರಿಯಬಿಟ್ಟಿರುವ ವಿಡಿಯೋಗಳನ್ನು ಪರಿಶೀಲಿಸಲಾಗುವುದು. ಹೆಚ್ಚಿನ ತನಿಖೆ ಕೈಗೊಳ್ಳಲಾಗುವುದು ಎಂದು ತಿಳಿಸಿದರು.