ತುಮಕೂರು: ಬೆಳಗಾವಿಯ ಯಾವುದೇ ಗಡಿ ಹಳ್ಳಿ ಮಹಾರಾಷ್ಟ್ರಕ್ಕೆ ಹೋಗುವುದಿಲ್ಲ. ಏನೇ ಆದರೂ ಬರೀ ಹೇಳಿಕೆ ಸಂಘರ್ಷಗಳು ಅಷ್ಟೇ ಎಂದು ಶಾಸಕ ಸತೀಶ ಜಾರಕಿಹೊಳಿ ಹೇಳಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಹಾರಾಷ್ಟ್ರ- ಕರ್ನಾಟಕ ಗಡಿ ಭಾಗದ ಸರ್ವೆ ನಂತರ ಮಹತ್ವದ ಬದಲಾವಣೆಯಾಗಿದೆ. ಮರಾಠಿಗರು ಜಾಸ್ತಿ ಇದ್ದ ಜಾಗದಲ್ಲಿ ಈಗ ಕನ್ನಡಿಗರು ಜಾಸ್ತಿಯಾಗಿದ್ದಾರೆ ಎಂದರು.
ಕರ್ನಾಟಕದಲ್ಲಿ ಗಡಿ ವಿಚಾರವಾಗಿ ಗಲಾಟೆ ಆದರೇ ಕೊಲ್ಹಾಪುರದಲ್ಲಿ ಸಮಸ್ಯೆ ಆಗಲಿದೆ. ಕೊಲ್ಹಾಪುರದಲ್ಲಿ ಗಲಾಟೆಯಾದ್ರೇ ಇಲ್ಲಿ ಸಮಸ್ಯೆ ಆಗುತ್ತದೆ. ಕರ್ನಾಟಕದ ಒಂದಿಂಚೂ ಭೂಮಿಯು ನಮ್ಮ ರಾಜ್ಯ ಬಿಟ್ಟು ಹೋಗುವುದಿಲ್ಲ ಎಂದಿದ್ದಾರೆ.
ಇನ್ನೂ ವಿಧಾನಸಭಾ ಚುನಾವಣೆಗೂ ಗಡಿ ಕ್ಯಾತೆಗೂ ಸಂಬಂಧವಿಲ್ಲ. ಗಡಿ ಕ್ಯಾತೆ ಬಗ್ಗೆ ಹೆಚ್ಚಿನ ಮಹತ್ವ ಕೊಡುವ ಅವಶ್ಯಕತೆ ಇಲ್ಲ ಎಂದು ಹೇಳಿದ್ದಾರೆ.