ಸಿಡ್ನಿ, ೨೫- ಬಿಜೆಪಿಯ ಓವರ್ಸೀಸ್ ಫ್ರೆಂಡ್ಸ (ಸಾಗರೋತ್ತರ ಸ್ನೇಹಿತರು) ನ ಆಸ್ಟ್ರೇಲಿಯಾ ವಿಭಾಗದ ಸಂಸ್ಥಾಪಕರಲ್ಲಿ ಒಬ್ಬ ಬಾಳೇಶ ಧನಕರ ಎಂಬಾತ ಐವರು ಮಹಿಳೆಯರಿಗೆ ಮಾದಕ ವಸ್ತು ನೀಡಿ ಅವರ ಮೇಲೆ ಅತ್ಯಾಚಾರ ಎಸಗಿದ್ದು ಸಾಬೀತಾಗಿದೆ. ಅತ್ಯಾಚಾರ ಮಾಡುವುದಷ್ಟೇ ಅಲ್ಲದೇ ಕ್ಯಾಮೆರಾ ಅದನ್ನೂ ವಿಡಿಯೋ ಸಹ ಮಾಡುತ್ತಿದ್ದ.
ಸೋಮವಾರ ಸಿಡ್ನಿಯ ಡೌನಿಂಗ್ ಸೆಂಟರ್ನಲ್ಲಿರುವ ಜಿಲ್ಲಾ ನ್ಯಾಯಾಲಯದ ತೀರ್ಪುಗಾರರು ಆತನ ವಿರುದ್ಧದ 39 ಆರೋಪಗಳಲ್ಲಿ ಪ್ರತಿಯೊಂದನ್ನು ತಪ್ಪಿತಸ್ಥರೆಂದು ಘೋಷಿಸಿದ್ದಾರೆ ಎಂದು ದಿ ಸಿಡ್ನಿ ಮಾರ್ನಿಂಗ್ ಹೆರಾಲ್ಡ ವರದಿ ಮಾಡಿದೆ.
ಆತ ಸುಳ್ಳು ಉದ್ಯೋಗ ಜಾಹೀರಾತುಗಳ ಮೂಲಕ ಭೇಟಿಯಾಗಿ 13 ಅತ್ಯಾಚಾರ ಪ್ರಕರಣಗಳು, 6 ಅತ್ಯಾಚಾರಕ್ಕೆ ಅನುಕೂಲವಾಗುವಂತೆ ಮಾದಕ ವಸ್ತುವನ್ನು ಉದ್ದೇಶಪೂರ್ವಕವಾಗಿ ಸೇವಿಸಿದ ಘಟನೆಗಳು, 17 ಸಂಬಂಧಿಸಿದ ವೀಡಿಯೊಗಳನ್ನು ಅನಧಿಕೃತವಾಗಿ ರೆಕಾರ್ಡ ಮಾಡಿದ ಘಟನೆಗಳು ಮತ್ತು 3 ಅಸಭ್ಯವಾಗಿ ಹಲ್ಲೆಯ ಘಟನೆಗಳಿಗೆ ಸಂಬಂಧಿಸಿದ ಆರೋಪಗಳನ್ನು ಎದುರಿಸಿದರು.
ಧಂಖರ್ ಮಹಿಳೆಯರಿಗೆ ವೈನ್ ಅಥವಾ ಐಸ್ ಕ್ರೀಂನಲ್ಲಿ ನಿದ್ರಾಮಾತ್ರೆ ಬೆರಸುತ್ತಿದ್ದನು. ಅವರು ಅದನ್ನು ಸೇವಿಸಿದ ಬಳಿಕ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದಾಗ ಅತ್ಯಾಚಾರ ಎಸಗಿದ್ದಾನೆ ಎಂದು ಪ್ರಾಸಿಕ್ಯೂಷನ್ ಹೇಳಿದೆ. ಅಲ್ಲದೇ ಅಲಾರಾಮ ಗಡಿಯಾರದ ಹಿಂದೆ ತನ್ನ ಫೋನ್ ಇಟ್ಟು, ತನ್ನ ಲೈಂಗಿಕ ಕ್ರಿಯೆಯ ವಿಡಿಯೋ ಚಿತ್ರಿಕರಿಸುತ್ತಿದ್ದನು.
ಪ್ರಕರಣದ ವಿಚಾರಣೆಯ ಸಮಯದಲ್ಲಿ, ತೀರ್ಪುಗಾರರು ಆತನ ಲೈಂಗಿಕ ದೌರ್ಜನ್ಯದ ರೆಕಾರ್ಡಿಂಗ್ಗಳನ್ನು ವೀಕ್ಷಿಸಿದ ನಂತರ ಅವರು ಆಘಾತಕ್ಕೊಳಗಾದರು ಎಂದು ಸಿಡ್ನಿ ಮಾರ್ನಿಂಗ್ ಹೆರಾಲ್ಡ್ ವರದಿ ಮಾಡಿದೆ. ಅಕ್ಟೋಬರ 2018 ರಲ್ಲಿ ಪೊಲೀಸರು ಧನಕರ ಸಿಬಿಡಿ ಅಪಾರ್ಟ್ಮೆಂಟ್ ಮೇಲೆ ದಾಳಿ ಮಾಡಿದಾಗ ಡಜನ್ಗಟ್ಟಲೇ ವಿಡಿಯೋಗಳು ಸಿಕ್ಕಿವೆ. ಆ ವಿಡಿಯೋಗಳಲ್ಲಿ ಪ್ರಜ್ಞಾಹೀನರಾಗಿರುವ ಅಥವಾ ಹೆಣಗಾಡುತ್ತಿರುವ ಮಹಿಳೆಯರ ಲೈಂಗಿಕ ದೌರ್ಜನ್ಯದ ದೃಶ್ಯಗಳಿದ್ದವು. ಆ ವಿಡಿಯೊಗಳನ್ನು ಫೋಲ್ಡರ್ಗಳಾಗಿ ವಿಂಗಡಿಸಲಾಗಿದೆ, ಪ್ರತಿಯೊಂದನ್ನು ಕೋರಿಯನ್ ಮಹಿಳೆಯ ಹೆಸರಿನಲ್ಲಿ ಸೇವ್ ಮಾಡಲಾಗಿದೆ.
ಈ ಮಧ್ಯೆ 2018 ರಲ್ಲಿ ಧಂಖರ ಅವರು ಸಂಘಟನೆಗೆ ರಾಜೀನಾಮೆ ನೀಡಿದ್ದಾರೆ ಎಂದು ಬಿಜೆಪಿಯ ಆಸ್ಟ್ರೇಲಿಯಾ ಘಟಕ ಹೇಳಿದೆ. ”ಬಾಳೇಶ ಧನಕರ ಅವರು ಜುಲೈ 2018 ರಲ್ಲಿ ಬಿಜೆಪಿ ಆಸ್ಟ್ರೇಲಿಯಾಕ್ಕೆ ರಾಜೀನಾಮೆ ನೀಡಿದ್ದಾರೆ. ನಾವು ಅವರ ಕ್ರಮಗಳನ್ನು ಬಲವಾಗಿ ಖಂಡಿಸುತ್ತೇವೆ ಮತ್ತು ಅವರು ಸಂಪೂರ್ಣ ಕಾನೂನು ಬಲವನ್ನು ಎದುರಿಸಬೇಕು” ಎಂದು ಸಂಘಟನೆ ಟ್ವೀಟ್ ಮಾಡಿದೆ.