ಮುಂಬೈ, ೬- ಚಲಿಸುತ್ತಿದ್ದ ಬಸ್ಸಿನಲ್ಲಿ ಮಹಿಳಾ ಪೇದೆಯ ಜೊತೆ ಅನುಚಿತವಾಗಿ ಸ್ಪರ್ಶಿಸಿದ ಆರೋಪದ ಮೇಲೆ 50 ವರ್ಷದ ವ್ಯಕ್ತಿಗೆ ಮುಂಬೈನ ಬಲ್ಲಾರ್ಡ್ ಪಿಯರ್ ಮ್ಯಾಜಿಸ್ಟ್ರೇಟ್ ಕೋರ್ಟ ಶಿಕ್ಷೆ ವಿಧಿಸಿದೆ. ಆರೋಪಿ ಭೀಮರಾವ ಗಾಯಕವಾಡಗೆ ಶಿಕ್ಷೆಯ ಭಾಗವಾಗಿ ನ್ಯಾಯಾಲಯವು ಒಂದು ವರ್ಷದವರೆಗೆ ಕಠಿಣ ಶಿಕ್ಷೆ ಮತ್ತು ಪರಿಹಾರವಾಗಿ 1 ಸಾವಿರ ರೂಪಾಯಿ ಪರಿಹಾರ ಹಣ ಪಾವತಿಸುವಂತೆ ಸೂಚಿಸಿದೆ.
ವಿಚಾರಣೆ ವೇಳೆ ನ್ಯಾಯಾಲಯ, ಇತ್ತೀಚಿನ ದಿನಗಳಲ್ಲಿ ಮಹಿಳೆಯರ ಮೇಲಿನ ದೌರ್ಜನ್ಯಗಳು ಹೆಚ್ಚಾಗುತ್ತಿವೆ ಎಂದಿದೆ. ಅಪರಾಧದ ಸ್ವರೂಪ ಹಾಗೂ ದಾಖಲೆಯಲ್ಲಿರುವ ಸಾಕ್ಷ್ಯಗಳನ್ನು ಗಮನಿಸಿ ಈ ಶಿಕ್ಷೆ ನೀಡಲಾಗಿದೆ. ಸಂತ್ರಸ್ತ ಮಹಿಳೆ ಅಬಕಾರಿ ಇಲಾಖೆಯಲ್ಲಿ ಕೆಲಸ ಮಾಡುತ್ತಿರುವ ಮಹಿಳಾ ಪೇದೆ ಎಂದು ಹೇಳಲಾಗಿದೆ.
ಮ್ಯಾಜಿಸ್ಟ್ರೇಟ್ ಬಿವಿ ಬರವ್ಕರ್ ಅವರು ವಿಚಾರಣೆಯ ಸಮಯದಲ್ಲಿ ಆರೋಪಿ ಗಾಯಕ್ವಾಡ್ ಮದ್ಯದ ಅಮಲಿನಲ್ಲಿದ್ದ ಬಗ್ಗೆ ಯಾವುದೇ ಪ್ರತಿವಾದವನ್ನು ಎತ್ತದೇ, ಶಿಕ್ಷೆ ಪ್ರಕಟಣೆಯ ಸಮಯದಲ್ಲಿ ಮಾತ್ರ ಈ ಬಗ್ಗೆ ಹೇಳಿದ್ದಾರೆ. ಹೀಗಾಗಿ ಅವರ ವಾದವನ್ನು ನ್ಯಾಯಾಲಯ ತಿರಸ್ಕರಿಸಿದ್ದಾಗಿ ತಿಳಿಸಿದ್ದಾರೆ.