ಅಳ್ನಾವರ, ಎ. ೨೦: ಹುಬ್ಬಳ್ಳಿಯ ಭೂಮರೆಡ್ಡಿ ಕಾಲೇಜು ಆವರಣದಲ್ಲಿ ವಿದ್ಯಾರ್ಥಿನಿ ನೇಹಾ ಹಿರೇಮಠ ಅವರ ಭೀಕರ ಹತ್ಯೆ ತೀವ್ರ ಖಂಡನೀಯವಾಗಿದ್ದು ಹತ್ಯೆ ಮಾಡಿದ ಆರೋಪಿಗೆ ಗಲ್ಲು ಶಿಕ್ಷೆ ಆಗಬೇಕು ಎಂದು ಅಂಜುಮನ್ ಏ ಇಸ್ಲಾಮ ಸಂಸ್ಥೆಯ ಅಧ್ಯಕ್ಷ ಫಹೀಮ ಕಾಂಟ್ರ್ಯಾಕ್ಟರ್ ಒತ್ತಾಯಿಸಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟನೆ ನೀಡಿರುವ ಅವರು, ಶಿಕ್ಷಣ ಸಂಸ್ಥೆಯಲ್ಲಿ ಇಂತಹ ಹೇಯ ಕೃತ್ಯ ನಡೆಯಬಾರದಿತ್ತು. ಇಂತಹ ದುಷ್ಕೃತ್ಯ ಎಸಗಿದ ವಿಕೃತ ಮನೋಭಾವದ ವ್ಯಕ್ತಿತ್ವದ ಫಯಾಜನಿಗೆ ಕಾನೂನು ಗಲ್ಲು ಶಿಕ್ಷೆ ವಿಧಿಸಿ, ಮುಂದೆ ಇಂತಹ ಕೃತ್ಯಕ್ಕೆ ಯಾರೂ ಮುಂದಾಗಬಾರದಂತೆ ಎಚ್ಚರಿಸುವಂಥ ಕ್ರಮ ಕೈಗೊಳ್ಳಬೇಕೆಂದು ಫಹೀಮ ಕಾಂಟ್ರ್ಯಾಕ್ಟರ್ ಆಗ್ರಹಿಸಿದ್ದಾರೆ.