ಕಾಠಮಾಂಡು, ೨೪: ಇಬ್ಬರು ಸಹೋದರರು ಒಬ್ಬಳೇ ಮಹಿಳೆಯನ್ನು ಮದುವೆಯಾಗುತ್ತಾರೆ. ಅವರು ಯಾವುದೇ ಅಡೆತಡೆಗಳಿಲ್ಲದೇ ತಮ್ಮ ಜೀವನವನ್ನು ನಡೆಸುತ್ತಾರೆ. ಈ ಪದ್ಧತಿ ನೇಪಾಳದ ಬುಡಕಟ್ಟು ಸಮಾಜದಲ್ಲಿ ಚಾಲ್ತಿಯಲ್ಲಿದೆ.
ಪ್ರಪಂಚದ ಅತ್ಯಂತ ಹಳೆಯ ಪ್ರವೃತ್ತಿಗಳಲ್ಲಿ ಒಂದಾಗಿರುವ ಈ ವಿಚಿತ್ರ ಪದ್ಧತಿ ಪ್ರಾಚೀನ ಕಾಲದಿಂದಲೂ ಇದೆ. ಇಂದಿಗೂ, ಪ್ರಪಂಚದ ಕೆಲವು ಭಾಗಗಳ ಬುಡಕಟ್ಟು ಜನಾಂಗದವರು ಅದನ್ನು ಅನುಸರಿಸುತ್ತಾರೆ. ಇಂತಹ ವಿಚಿತ್ರ ಆಚರಣೆಗಳ ಬಗ್ಗೆ ಕೇಳಿದರೆ ಬೆಚ್ಚಿ ಬೀಳುವುದಂತೂ ನಿಜ.
ಸಾಮಾನ್ಯವಾಗಿ ಪ್ರತಿ ದೇಶದ ಲೈಂಗಿಕ ಜೀವನದಲ್ಲಿ ಹಲವಾರು ವ್ಯತ್ಯಾಸಗಳಿವೆ. ಕೆಲವು ದೇಶಗಳಲ್ಲಿ ನಿಮಗಿಂತ ಹಿರಿಯ ಮಹಿಳೆಯರೊಂದಿಗೆ ಸಂಬಂಧ ಹೊಂದುವುದು ತಪ್ಪಲ್ಲ. ಇದೆಲ್ಲವೂ ಮುಕ್ತವಾಗಿ ನಡೆಯುತ್ತದೆ… ಆದರೆ ಈ ಜನಾಂಗದ ಪದ್ಧತಿ ಇದೆಲ್ಲಕ್ಕಿಂತಲೂ ವಿಚಿತ್ರವಾಗಿದೆ..
ಗಂಡನಿಗೆ ಇಬ್ಬರು ಅಥವಾ ಮೂವರು ಹೆಂಡತಿಯರು ಇದ್ದರೆ ಅದು ದೊಡ್ಡ ವಿಷಯವಲ್ಲ. ಆದರೆ ಒಬ್ಬ ಹೆಂಡತಿಗೆ ಇಬ್ಬರು ಗಂಡಂದಿರಿದ್ದರೆ ಎಲ್ಲರೂ ಅದನ್ನು ವಿಚಿತ್ರವಾಗಿ ನೋಡುತ್ತಾರೆ. ಆದರೆ ಬದಲಾಗುತ್ತಿರುವ ಸಾಮಾಜಿಕ-ಆರ್ಥಿಕ ಪರಿಸ್ಥಿತಿಗಳ ಹೊರತಾಗಿಯೂ..ಕೆಲವು ಬುಡಕಟ್ಟುಗಳು ಇನ್ನೂ ಇಂತಹ ಆಚರಣೆಗಳನ್ನು ಆಚರಿಸುತ್ತಾರೆ.
ಮುಖ್ಯವಾಗಿ ಕೃಷಿಯನ್ನೇ ನಂಬಿ ಬದುಕುವ ಈ ಬುಡಕಟ್ಟು ಜನಾಂಗದವರು ಅವಿಭಕ್ತ ಕೃಷಿ ಮಾಡುವುದಷ್ಟೇ ಅಲ್ಲದೇ ಅವಿಭಕ್ತ ಕುಟುಂಬವನ್ನೂ ಹೊಂದಿರುತ್ತಾರೆ. ಸಹೋದರರು ಬೇರೆ ಬೇರೆ ಹುಡುಗಿಯರನ್ನು ಮದುವೆಯಾದರೆ ಸಮಸ್ಯೆಗಳು ಎದುರಾಗುತ್ತವೆ ಮತ್ತು ಕೃಷಿಯಿಂದ ಬರುವ ಆದಾಯದಲ್ಲಿ ವ್ಯತ್ಯಾಸವಾಗುತ್ತದೆ ಎಂಬುದು ಅವರ ಭಯ. ಅದಕ್ಕೇ ಅಣ್ಣ ತಮ್ಮಂದಿರೆಲ್ಲ ಕೂಡಿ ಒಂದೇ ಹುಡುಗಿಯನ್ನು ಮದುವೆಯಾಗುತ್ತಾರೆ.
ಕುಟುಂಬ ನಿರ್ವಹಣೆ ಮತ್ತು ಆಸ್ತಿ ವರ್ಗಾವಣೆಯಲ್ಲಿ ಘರ್ಷಣೆಗಳು ಉಂಟಾಗುತ್ತವೆ ಎಂಬ ಆತಂಕದಿಂದ ಅವರು ಇದನ್ನು ಸಂಪ್ರದಾಯದಂತೆ ಪಾಲಿಸುತ್ತಿದ್ದಾರೆ. ತಲೆಮಾರುಗಳಿಂದ ಬಂದಿರುವ ಈ ಸಂಪ್ರದಾಯವನ್ನು ಇಂದಿಗೂ ಆ ದೇಶದ ಬುಡಕಟ್ಟು ಜನರು ಮುಂದುವರಿಸಿಕೊಂಡು ಬರುತ್ತಿದ್ದಾರೆ.