LIVE TV LocalCrimeNationalInternationalPoliticsFinancialEducationTechnologyEntertainmentSportsHealthFeatureTravelingBeautyRecipes
National News

ಗ್ಯಾನೇಶ ಕುಮಾರ ರಾಜೀನಾಮೆ ನೀಡಿದರೂ ಹೋರಾಟ ನಿಲ್ಲದು: ಅ.10ಕ್ಕೆ ದೆಹಲಿಯಲ್ಲಿ ಬೃಹತ್ ಪ್ರತಿಭಟನೆ

ಹೊಸದಿಲ್ಲಿ: ಮುಖ್ಯ ಚುನಾವಣಾ ಆಯುಕ್ತ ಗ್ಯಾನೇಶ ಕುಮಾರ ರಾಜೀನಾಮೆ ನೀಡಿದರೂ ಚುನಾವಣಾ ವ್ಯವಸ್ಥೆಯಲ್ಲಿ ಸಮಗ್ರ ಸುಧಾರಣೆ ಆಗುವವರೆಗೆ ಹೋರಾಟ ನಿಲ್ಲಿಸುವುದಿಲ್ಲ ಎಂದು ಕಾಕ್ರೋಚ್ ಜನತಾ ಪಾರ್ಟಿ (ಸಿಜೆಪಿ) ಹಾಗೂ ವಿವಿಧ ವಿದ್ಯಾರ್ಥಿ ಸಂಘಟನೆಗಳು ಘೋಷಿಸಿವೆ. ಅಕ್ಟೋಬರ್ 10ರಂದು ದೆಹಲಿಯ ಜಂತರ್ ಮಂತರ್‌ನಲ್ಲಿ ನಡೆಯಲಿರುವ ಪ್ರತಿಭಟನೆಯನ್ನು ರಾಷ್ಟ್ರಮಟ್ಟದ ಜನಾಂದೋಲನವನ್ನಾಗಿ ರೂಪಿಸಲು ಕರೆ ನೀಡಿವೆ.

ಬುಧವಾರ ನಡೆದ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಸಿಜೆಪಿ ಸಹ ಸಂಚಾಲಕ ಸೌರವ್ ದಾಸ್, ‘ಗ್ಯಾನೇಶ ಕುಮಾರ ರಾಜೀನಾಮೆ ನೀಡಿದರೂ ನಾವು ಹಿಂದೆ ಸರಿಯುವುದಿಲ್ಲ. ಚುನಾವಣಾ ಆಯೋಗದಲ್ಲಿ ಸೂಕ್ತ ಸುಧಾರಣೆಗಳಾಗಬೇಕು. ಇದು ದೀರ್ಘ ಹೋರಾಟವಾಗಲಿದೆ’ ಎಂದು ಹೇಳಿದರು. ದೇಶದ ವಿವಿಧ ಭಾಗಗಳಿಂದ ಜನರು ರೈಲು ಹಾಗೂ ವಿಮಾನ ಟಿಕೆಟ್ ಕಾಯ್ದಿರಿಸಿಕೊಂಡು ದೆಹಲಿಗೆ ಬರಬೇಕು ಎಂದೂ ಕರೆ ನೀಡಿದರು.

ಅಖಿಲ ಭಾರತ ವಿದ್ಯಾರ್ಥಿ ಸಂಘಟನೆ (ಎಐಎಸ್‌ಎ), ಅಖಿಲ ಭಾರತ ವಿದ್ಯಾರ್ಥಿ ಒಕ್ಕೂಟ (ಎಐಎಸ್‌ಎಫ್), ಭಾರತೀಯ ವಿದ್ಯಾರ್ಥಿ ಒಕ್ಕೂಟ (ಎಸ್‌ಎಫ್‌ಐ) ಹಾಗೂ ಆಮ್ ಆದ್ಮಿ ಪಕ್ಷದ ವಿದ್ಯಾರ್ಥಿ ವಿಭಾಗ ಎಎಸ್‌ಎಪಿ ಪ್ರತಿನಿಧಿಗಳು ಪತ್ರಿಕಾಗೋಷ್ಠಿಯಲ್ಲಿ ಪಾಲ್ಗೊಂಡಿದ್ದರು. ಎಸ್‌ಎಫ್‌ಐ, ಎಐಎಸ್‌ಎಫ್‌, ಎಐಎಸ್‌ಎ ಸೇರಿದಂತೆ ಐದು ಎಡ ವಿದ್ಯಾರ್ಥಿ ಸಂಘಟನೆಗಳೂ ಅ.10ರ ಪ್ರತಿಭಟನೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವುದಾಗಿ ಪ್ರತ್ಯೇಕವಾಗಿ ಘೋಷಿಸಿವೆ.

ಸಿಜೆಪಿ ಮೂರು ಪ್ರಮುಖ ಬೇಡಿಕೆಗಳನ್ನು ಮುಂದಿಟ್ಟಿದೆ. ಗ್ಯಾನೇಶ ಕುಮಾರ ರಾಜೀನಾಮೆ ಮತ್ತು ಅವರ ವಿರುದ್ಧ ಕ್ರಿಮಿನಲ್ ಕ್ರಮ; ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ಸ್ಥಗಿತ, ಮುಂಬರುವ ಚುನಾವಣೆಗಳನ್ನು ತಡೆಹಿಡಿದು 2025ರ ಜನವರಿಯ ಮತದಾರರ ಪಟ್ಟಿಯನ್ನು ಮರುಸ್ಥಾಪಿಸುವುದು ಹಾಗೂ ಸ್ವತಂತ್ರ ತನಿಖೆ; ಚುನಾವಣಾ ಆಯುಕ್ತರ ನೇಮಕಕ್ಕೆ ಸಂಬಂಧಿಸಿದ 2023ರ ಕಾನೂನನ್ನು ರದ್ದುಗೊಳಿಸಿ ಸ್ವತಂತ್ರ ಮತ್ತು ವಿಶ್ವಾಸಾರ್ಹ ಆಯ್ಕೆ ವ್ಯವಸ್ಥೆ ರೂಪಿಸುವುದು ಸಂಘಟನೆಯ ಬೇಡಿಕೆಗಳಾಗಿವೆ.

ಅಕ್ಟೋಬರ್ 6ರಂದು ಚುನಾವಣಾ ಆಯೋಗದ ಕಚೇರಿಯತ್ತ ಇಂಡಿಯಾ ಒಕ್ಕೂಟದ ಸಂಸದರು ನಡೆಸಿದ ಪ್ರತಿಭಟನಾ ಮೆರವಣಿಗೆಗೂ ವಿದ್ಯಾರ್ಥಿ ಸಂಘಟನೆಗಳು ಬೆಂಬಲ ಸೂಚಿಸಿವೆ. ವಿದ್ಯಾರ್ಥಿಗಳ ನೇತೃತ್ವದ ಪ್ರತಿಭಟನೆ ಮತ್ತು ಪ್ರತಿಪಕ್ಷಗಳ ಹೋರಾಟದ ನಡುವೆ ಭಿನ್ನತೆ ಇಲ್ಲ ಎಂದು ಎಐಎಸ್‌ಎ ಅಧ್ಯಕ್ಷೆ ನೇಹಾ ಬೋರಾ ಹೇಳಿದ್ದಾರೆ. ಜನರ ಸಮಸ್ಯೆಗಳನ್ನು ಸಂಸತ್ತಿನ ಹೊರಗೂ ಎತ್ತಿಹಿಡಿಯುವುದು ಚುನಾಯಿತ ಪ್ರತಿನಿಧಿಗಳ ಕರ್ತವ್ಯ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಸಿಜೆಪಿ ಹಾಗೂ ಕಾಂಗ್ರೆಸ್ ಪರ ಸಂಘಟನೆಗಳ ನಡುವೆ ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ಕಾಣಿಸಿಕೊಂಡಿದ್ದ ಭಿನ್ನಾಭಿಪ್ರಾಯಗಳ ಕುರಿತು ಪ್ರತಿಕ್ರಿಯಿಸಿದ ಸೌರವ್ ದಾಸ್, ರಾಜಕೀಯ ಸಂಬಂಧ ಮತ್ತು ಸಿದ್ಧಾಂತಗಳಲ್ಲಿ ವ್ಯತ್ಯಾಸವಿದ್ದರೂ ಚುನಾವಣಾ ವ್ಯವಸ್ಥೆಯ ಸುಧಾರಣೆಗಾಗಿ ನಡೆಯುತ್ತಿರುವ ಹೋರಾಟದಲ್ಲಿ ಒಟ್ಟಾಗಿ ಮುಂದುವರಿಯುವುದಾಗಿ ಹೇಳಿದರು.

ಅ.10ರ ಪ್ರತಿಭಟನೆ ಕುರಿತು ಸಂಘಟಕರು ಬುಧವಾರ ಪಾರ್ಲಿಮೆಂಟ್ ಸ್ಟ್ರೀಟ್ ಪೊಲೀಸ್ ಠಾಣೆಗೆ ಔಪಚಾರಿಕ ಮಾಹಿತಿ ಸಲ್ಲಿಸಿದ್ದಾರೆ. ಸಂಚಾರ ಮತ್ತು ಕಾನೂನು ಸುವ್ಯವಸ್ಥೆಗೆ ಅಗತ್ಯ ವ್ಯವಸ್ಥೆ ಮಾಡುವಂತೆಯೂ ಕೋರಿದ್ದಾರೆ. ಆದರೆ ಪ್ರತಿಭಟನೆಗೆ ‘ಅನುಮತಿ’ ಪಡೆಯಲಾಗಿದೆ ಎಂಬುದನ್ನು ಸೌರವ್ ದಾಸ್ ತಳ್ಳಿಹಾಕಿದ್ದು, ಪ್ರತಿಭಟನೆ ಕುರಿತು ಪೊಲೀಸರಿಗೆ ಮಾಹಿತಿ ನೀಡಿದ್ದೇವೆ ಎಂದಿದ್ದಾರೆ. ವರದಿಗಳ ಪ್ರಕಾರ ದೆಹಲಿ ಪೊಲೀಸರು ಪ್ರತಿಭಟನೆಗೆ ಅನುಮತಿ ನಿರಾಕರಿಸಿದ್ದಾರೆ.

ಎಸ್‌ಎಫ್‌ಐ ಪ್ರತಿನಿಧಿ ಆದರ್ಶ್ ಶಾಜಿ ಕೂಡ ಗ್ಯಾನೇಶ ಕುಮಾರ ವಿರುದ್ಧ ಆರೋಪಗಳನ್ನು ಮಾಡಿದ್ದು, ಚುನಾವಣಾ ಆಯೋಗದ ಕಾರ್ಯವೈಖರಿ ಮತ್ತು ಎಸ್‌ಐಆರ್‌ ವಿರುದ್ಧ ಹೋರಾಟ ಮುಂದುವರಿಸುವುದಾಗಿ ಹೇಳಿದ್ದಾರೆ. ಮತ್ತೊಂದೆಡೆ, ಚುನಾವಣಾ ಆಯೋಗವು ಮತದಾರರ ಪಟ್ಟಿ ಪರಿಷ್ಕರಣೆಯು ಅನರ್ಹ ಹಾಗೂ ನಕಲಿ ನಮೂದುಗಳನ್ನು ತೆಗೆದುಹಾಕುವ ಪ್ರಕ್ರಿಯೆ ಎಂದು ಸಮರ್ಥಿಸಿಕೊಂಡಿದೆ; ಪ್ರತಿಭಟನಾಕಾರರು ಮತ್ತು ಪ್ರತಿಪಕ್ಷಗಳು ಈ ಪ್ರಕ್ರಿಯೆಯಿಂದ ಅರ್ಹ ಮತದಾರರು ಹೊರಗುಳಿದಿದ್ದಾರೆ ಎಂದು ಆರೋಪಿಸುತ್ತಿವೆ.

ಹೀಗಾಗಿ ಗ್ಯಾನೇಶ ಕುಮಾರ ರಾಜೀನಾಮೆಯೊಂದಕ್ಕೇ ಸೀಮಿತವಾಗದೆ, ಎಸ್‌ಐಆರ್‌, ಮತದಾರರ ಪಟ್ಟಿಯ ವಿಶ್ವಾಸಾರ್ಹತೆ ಹಾಗೂ ಚುನಾವಣಾ ಆಯುಕ್ತರ ನೇಮಕಾತಿ ವ್ಯವಸ್ಥೆಯ ಸುಧಾರಣೆಗಳನ್ನು ಮುಂದಿಟ್ಟುಕೊಂಡು ಆಂದೋಲನವನ್ನು ದೀರ್ಘಾವಧಿಗೆ ವಿಸ್ತರಿಸಲು ಸಂಘಟನೆಗಳು ಮುಂದಾಗಿವೆ. ಅಕ್ಟೋಬರ್ 10ರ ದೆಹಲಿ ಪ್ರತಿಭಟನೆ ಅದರ ಮುಂದಿನ ಪ್ರಮುಖ ಹಂತವಾಗಲಿದೆ.

Author
Samadarshi News
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಗ್ಯಾನೇಶ ಕುಮಾರ ರಾಜೀನಾಮೆ ನೀಡಿದರೂ ಹೋರಾಟ ನಿಲ್ಲದು: ಅ.10ಕ್ಕೆ ದೆಹಲಿಯಲ್ಲಿ ಬೃಹತ್ ಪ್ರತಿಭಟನೆ4 ತಿಂಗಳಲ್ಲಿ 4ನೇ ಬಾರಿ ಅಕ್ಕಿ ದರ ಏರಿಕೆರಾಜ್ಯದಲ್ಲಿ ಶೇ.90ರಷ್ಟು ಬೆಳೆ ಹಾನಿ : ಪರಮೇಶ್ವರದೆಹಲಿಯಲ್ಲಿ ಪ್ರತಿಭಟನೆ ತೀವ್ರ: ರಾಹುಲ್‌, ಪ್ರಿಯಾಂಕಾ ಮತ್ತೆ ಪೊಲೀಸ್ ವಶಕ್ಕೆಮೋದಿ ನಾಯಕತ್ವದಲ್ಲಿ ಭಾರತ ಬಲಾಢ್ಯ ರಾಷ್ಟ್ರ: ಜಗದೀಶ ಶೆಟ್ಟರ್ಅಣುಗಳ ‘ಕನ್ನಡಿ ರಹಸ್ಯ’ ಭೇದಿಸಿದ ವಿಜ್ಞಾನಿಗಳಿಗೆ ನೊಬೆಲ್‌ಗರ್ಭಿಣಿಯ ರೀತಿ ಎಸಿ ರಹಸ್ಯ ಕಾರ್ಯಾಚರಣೆ; ಅಂತರರಾಜ್ಯ ಭ್ರೂಣಲಿಂಗ ಪತ್ತೆ ಜಾಲ ಬಯಲು‘ಸ್ಟಿಂಗ್ ಆಪರೇಷನ್’ ಪ್ರಯತ್ನ: ಐವರು ಸಚಿವರಿಗೆ ಡಿ.ಕೆ. ಶಿವಕುಮಾರ ಎಚ್ಚರಿಕೆ‘ಮತ ಕಳ್ಳತನ’ ಆರೋಪದಲ್ಲಿ ಹುರುಳಿಲ್ಲ : ಕುಮಾರಸ್ವಾಮಿSIR ಅಕ್ರಮ ಬಯಲಾಗುವ ಭೀತಿಯಿಂದ ರಾಜಪಾಲರ ಮೊರೆ: ಬಿಜೆಪಿ–ಜೆಡಿಎಸ್ ವಿರುದ್ಧ ಡಿ.ಕೆ. ಶಿವಕುಮಾರ ವಾಗ್ದಾಳಿ