ePaper
PoliticsBusinessEducationTechEntertainmentSportsEditorialHealthHealthTravelingBeauty TipsRecipes Tips

ಜಿಯೋದಿಂದ ದೀಪಾವಳಿ ಹಬ್ಬಕ್ಕೆ 5ಜಿ ಸೇವೆ

ಹೊಸದಿಲ್ಲಿ : ದೇಶದ ಜನರಿಗೆ 2022 ರ ದೀಪಾವಳಿಯಲ್ಲಿ, ಜಿಯೋ 5 ಜಿ ಅನ್ನು ಭಾರತದ ಮೆಟ್ರೋ ನಗರಗಳಲ್ಲಿ ಪ್ರಾರಂಭಿಸಲಾಗುವುದು ಎಂದು ಆರ್ಐಎಲ್ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಮುಕೇಶ ಅಂಬಾನಿ ಹೇಳಿದ್ದಾರೆ.

ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ನ 45 ನೇ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಮಾತನಾಡಿದ ಅವರು, 5ಜಿಯನ್ನು ಬಳಸಿಕೊಂಡು, ನಾವು ಉನ್ನತ ಗುಣಮಟ್ಟದ, ಹೆಚ್ಚು ಕೈಗೆಟುಕುವ ಸ್ಥಿರ ಬ್ರಾಡಬ್ಯಾಂಡ ಸೇವೆಗಳನ್ನು ತ್ವರಿತಗೊಳಿಸಬಹುದು ಎಂದು ಮುಕೇಶ ಅಂಬಾನಿ ಹೇಳಿದರು. ಜಿಯೋ 5 ಜಿ ವಿಶ್ವದ ಅತ್ಯಂತ ಸುಧಾರಿತ 5 ಜಿ ಆಗಿದೆ ಎಂದು ಅವರು ಹೇಳಿದರು.

ನಮ್ಮ ಕಂಪನಿಯು ವಾರ್ಷಿಕ ಆದಾಯದಲ್ಲಿ 100 ಬಿಲಿಯನ್ ಡಾಲರ್ ದಾಟಿದ ಭಾರತದ ಮೊದಲ ಕಾರ್ಪೊರೇಟ್ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ ಎಂದರು.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.