LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureEditorialBeautyRecipes

ಬಿಜೆಪಿಯನ್ನು ಹಿಂದಿಕ್ಕಿದ ‘ಕಾಕ್ರೋಚ್ ಜನತಾ ಪಕ್ಷ’ ಖಾತೆ: ಸಾಮಾಜಿಕ ಜಾಲತಾಣದಲ್ಲಿ ಭಾರೀ ಸಂಚಲನ!

ಹೊಸದಿಲ್ಲಿ, ಮೇ 21 : ‘ಕಾಕ್ರೋಚ್ ಜನತಾ ಪಕ್ಷ’ (ಸಿಜೆಪಿ) ಹೆಸರಿನ ವಿಡಂಬನಾತ್ಮಕ ಆನ್‌ಲೈನ್ ಅಭಿಯಾನವು ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದ್ದು, ಆರಂಭವಾದ ಕೆಲವೇ ದಿನಗಳಲ್ಲಿ ಇನ್‌ಸ್ಟಾಗ್ರಾಮ್‌ನಲ್ಲಿ ಬಿಜೆಪಿಯ ಅಧಿಕೃತ ಖಾತೆಯನ್ನು ಫಾಲೋವರ್ ಸಂಖ್ಯೆಯಲ್ಲಿ ಹಿಂದಿಕ್ಕಿದೆ.

@cockroachjantaparty ಹೆಸರಿನ ಇನ್‌ಸ್ಟಾಗ್ರಾಮ್ ಖಾತೆಯು ಮೇ 21ರ ವೇಳೆಗೆ 12 ಮಿಲಿಯನ್‌ಗಿಂತ ಅಧಿಕ ಫಾಲೋವರ್‌ಗಳನ್ನು ಪಡೆದುಕೊಂಡಿದೆ. ಕೇವಲ 5 ದಿನಗಳಲ್ಲೇ ಈ ಪ್ರಮಾಣದ ಅನುಯಾಯಿಗಳನ್ನು ಸೆಳೆದಿರುವುದಾಗಿ ಖಾತೆಯಲ್ಲಿ ಗೋಚರಿಸುವ ಅಂಕಿಅಂಶಗಳು ಸೂಚಿಸಿವೆ.

ಇದಕ್ಕೆ ಹೋಲಿಸಿದರೆ ಬಿಜೆಪಿಯ ಅಧಿಕೃತ ಇನ್‌ಸ್ಟಾಗ್ರಾಮ್ ಖಾತೆ @bjp4india ಸುಮಾರು 8.7 ಮಿಲಿಯನ್ ಫಾಲೋವರ್‌ಗಳನ್ನು ಹೊಂದಿದೆ. ಕಾಂಗ್ರೆಸ್‌ನ @incindia ಖಾತೆಗೆ ಸುಮಾರು 13.2 ಮಿಲಿಯನ್ ಫಾಲೋವರ್‌ಗಳಿದ್ದರೆ, ಆಮ್ ಆದ್ಮಿ ಪಕ್ಷದ ಖಾತೆಗೆ ಸುಮಾರು 1.9 ಮಿಲಿಯನ್ ಫಾಲೋವರ್‌ಗಳಿದ್ದಾರೆ.

ನ್ಯಾಯಾಲಯದ ವಿಚಾರಣೆಯ ವೇಳೆ ಭಾರತದ ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್ ಅವರು ಮಾಡಿದ್ದಾರೆ ಎನ್ನಲಾದ ಹೇಳಿಕೆಗಳಿಗೆ ಪ್ರತಿಕ್ರಿಯೆಯಾಗಿ, ಯುವಜನರು ಆರಂಭಿಸಿದ ವಿಡಂಬನಾತ್ಮಕ ಚಳವಳಿಯಾಗಿ ಈ ಅಭಿಯಾನ ಮೇ 16ರಂದು ಮೊದಲ ಬಾರಿಗೆ ಕಾಣಿಸಿಕೊಂಡಿತ್ತು. ಬಳಿಕ ಎಕ್ಸ್‌ನಲ್ಲಿ ವ್ಯಾಪಕ ಗಮನ ಸೆಳೆದ ನಂತರ ಇದರ ಇನ್‌ಸ್ಟಾಗ್ರಾಮ್ ಖಾತೆ ಆರಂಭಿಸಲಾಯಿತು.

‘ಯುವಕರಿಂದ, ಯುವಕರಿಗಾಗಿ, ಯುವಕರ ರಾಜಕೀಯ ವೇದಿಕೆ’ ಎಂದು ತನ್ನನ್ನು ಪರಿಚಯಿಸಿಕೊಂಡಿರುವ ಈ ಖಾತೆ ನಿರುದ್ಯೋಗ, ರಾಜಕೀಯ ಹೊಣೆಗಾರಿಕೆ, ಪ್ರಶ್ನೆಪತ್ರಿಕೆ ಸೋರಿಕೆ ವಿವಾದ ಸೇರಿದಂತೆ ಹಲವು ವಿಚಾರಗಳನ್ನು ಪ್ರಮುಖವಾಗಿ ಪ್ರಸ್ತಾಪಿಸುತ್ತಿದೆ. ಈ ವಿಷಯಗಳು ಯುವ ಸಾಮಾಜಿಕ ಜಾಲತಾಣ ಬಳಕೆದಾರರಲ್ಲಿ ಹೆಚ್ಚಿನ ಪ್ರತಿಕ್ರಿಯೆ ಹುಟ್ಟುಹಾಕಿರುವಂತೆ ಕಾಣಿಸಿದೆ.

ಖಾತೆ ಆರಂಭವಾದ ಕೆಲವೇ ಸಮಯದಲ್ಲಿ ವೇಗವಾಗಿ ಜನಪ್ರಿಯತೆ ಪಡೆದಿದ್ದು, ಕೇವಲ 78 ಗಂಟೆಗಳಲ್ಲಿ 3 ಮಿಲಿಯನ್ ಫಾಲೋವರ್‌ಗಳನ್ನು ದಾಟಿ, 5 ದಿನಗಳಲ್ಲಿ 12 ಮಿಲಿಯನ್ ಗಡಿ ತಲುಪಿದೆ ಎಂದು ವರದಿಯಾಗಿದೆ.

ಇಲ್ಲಿಯವರೆಗೆ ಕೇವಲ 56 ಪೋಸ್ಟ್‌ಗಳನ್ನು ಮಾತ್ರ ಹಂಚಿಕೊಂಡಿದ್ದರೂ, ಫಾಲೋವರ್ ಸಂಖ್ಯೆಯಲ್ಲಿ ಹಲವು ರಾಜಕೀಯ ಪಕ್ಷಗಳ ಅಧಿಕೃತ ಖಾತೆಗಳನ್ನು ಮೀರಿಸಿದೆ. ಇನ್ನೊಂದೆಡೆ ಬಿಜೆಪಿಯ ಇನ್‌ಸ್ಟಾಗ್ರಾಮ್ ಪುಟದಲ್ಲಿ ಇದುವರೆಗೆ 18,000ಕ್ಕೂ ಹೆಚ್ಚು ಪೋಸ್ಟ್‌ಗಳು ಪ್ರಕಟಗೊಂಡಿವೆ.

ಬಿಜೆಪಿಯನ್ನು ಹಿಂದಿಕ್ಕಿದ ಬಳಿಕ ಖಾತೆ ಸಂಭ್ರಮ ವ್ಯಕ್ತಪಡಿಸಿ, ಯುವಕರ ಶಕ್ತಿಯನ್ನು ಕಡಿಮೆ ಅಂದಾಜು ಮಾಡಬೇಡಿ ಎಂದು ಪೋಸ್ಟ್ ಮಾಡಿದೆ. ಮತ್ತೊಂದು ಪೋಸ್ಟ್‌ನಲ್ಲಿ ವಿಶ್ವದ ಅತಿದೊಡ್ಡ ಪಕ್ಷ ಎಂದು ಅವರು ಹೇಳಿದ್ದರು ಎಂದು ಬರೆದು ಬಿಜೆಪಿ ಸಂಘಟನಾ ಬಲವನ್ನು ವ್ಯಂಗ್ಯವಾಡಲಾಗಿದೆ.

ಈ ಚಳವಳಿ ಇತರ ಸಾಮಾಜಿಕ ಜಾಲತಾಣಗಳಲ್ಲಿಯೂ ವೇಗವಾಗಿ ವಿಸ್ತರಿಸಿದ್ದು, ಆರಂಭದಲ್ಲಿ ತಮಾಷೆಯ ರೂಪದಲ್ಲಿ ಆರಂಭವಾದ ಎಕ್ಸ್ ಖಾತೆ ಮೇ 21ರ ವೇಳೆಗೆ 1.65 ಲಕ್ಷಕ್ಕೂ ಅಧಿಕ ಫಾಲೋವರ್‌ಗಳನ್ನು ಪಡೆದುಕೊಂಡಿದೆ.

Author
A B Dharwadkar
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
West Bengal | ಮದರಸಾಗಳಲ್ಲಿ ‘ವಂದೇ ಮಾತರಂ’ ಕಡ್ಡಾಯಬಿಜೆಪಿಯನ್ನು ಹಿಂದಿಕ್ಕಿದ ‘ಕಾಕ್ರೋಚ್ ಜನತಾ ಪಕ್ಷ’ ಖಾತೆ: ಸಾಮಾಜಿಕ ಜಾಲತಾಣದಲ್ಲಿ ಭಾರೀ ಸಂಚಲನ!ಪ್ರಿಯಕರನ ಜತೆ ಮಾತನಾಡಿದ ಪುತ್ರಿಯನ್ನು ಕೊಂದು ಹೂತು ಹಾಕಿದ ತಂದೆ!ಮೋದಿಗೆ ಪ್ರಶ್ನೆ ಕೇಳಲು ಯತ್ನಿಸಿದ ಪತ್ರಕರ್ತೆ ಹೆಲ್ಲೆ ಲಿಂಗ್ ಇನ್ಸ್ಟಾಗ್ರಾಮ್, ಫೇಸ್ಬುಕ್ ಖಾತೆಗಳು ಅಮಾನತು ಗ್ರೇಟ್‌ ನಿಕೋಬಾರ್‌ ಯೋಜನೆಯಿಂದ ಪರಿಸರಕ್ಕೆ ತೀವ್ರ ಅಪಾಯ : ಕಾಂಗ್ರೆಸ್‌ಇರಾನ್ ಯುದ್ಧದಲ್ಲಿ 42 ಯುದ್ಧ ವಿಮಾನ ಧ್ವಂಸ: ಅಮೆರಿಕಕ್ಕೆ ₹2.4 ಲಕ್ಷ ಕೋಟಿ ಹಾನಿಮೀನುಗಾರರಿಗೆ ಹವಾಮಾನ ಇಲಾಖೆ ಎಚ್ಚರಿಕೆ“25% ಉಸಿರಾಟ ಕಡಿಮೆ ಮಾಡಿ ದೇಶಭಕ್ತಿ ಪ್ರದರ್ಶಿಸಿ” : ನಟ ಕಿಶೋರ ಕುಮಾರ ವ್ಯಂಗ್ಯರಾಜ್ಯದಲ್ಲಿ ಇನ್ನೊಂದು ವಾರ ಮಳೆ ಮುನ್ಸೂಚನೆ ಸಾರಿಗೆ ನೌಕರರ ಮುಷ್ಕರಕ್ಕೆ ಹೈಕೋರ್ಟ ತಡೆಯಾಜ್ಞೆ