LIVE TV LocalCrimeNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes
National News

ಎನ್ ಡಿಟಿವಿ ಶೇರು ಖರೀದಿಗೆ ಅದಾನಿ ತಯಾರಿ

ಹೊಸದಿಲ್ಲಿ: ದೇಶದ ಜನರ ಸಮಸ್ಯೆಗಳಿಗೆ ಸ್ಪಂದಿಸುವ ಮತ್ತು ಸರ್ಕಾರಗಳು ಮಾಡುವ ತಪ್ಪುಗಳನ್ನು ದಿಟ್ಟವಾಗಿ ಎತ್ತಿ ತೋರಿಸುವ ದೇಶದ ಏಕೈಕ ಸುದ್ದಿ ಚಾನಲ್ ನ್ಯೂ ಡೆಲ್ಲಿ ಟೆಲಿವಿಷನ್ (ಎನ್ ಡಿ ಟಿವಿ) ಸಂಸ್ಥೆಯ ಶೇ. 29.18 ಷೇರು ಖರೀದಿಗೆ ಪ್ರಧಾನಿ ಮೋದಿ ಮತ್ತು ಗೃಹ ಸಚಿವ ಅಮಿತ ಷಾ ಆಪ್ತ ಎಂದೆನಿಕೊಳ್ಳುವ ಮತ್ತು ಕೆಲವೇ ವರ್ಷಗಳಲ್ಲಿ ಲಕ್ಷಾಂತರ ಕೋಟಿ ರೂ. ಆಸ್ತಿಯ ಮಾಲೀಕರಾಗಿರುವ ಗುಜರಾತ್ ಉದ್ಯಮಿ ಗೌತಮ  ಅದಾನಿ ಗ್ರೂಪ್ಸ್‌ನ ಅಂಗ ಸಂಸ್ಥೆಯಾದ ಎಎಂಜಿ ಮೀಡಿಯಾ ನೆಟ್‌ವರ್ಕ್ ಲಿಮಿಟೆಡ್ ಸಂಸ್ಥೆಯು ಪ್ರಸ್ತಾಪ ಇಟ್ಟಿದೆ.



ಅದಾನಿ ಸಮೂಹ ಸಂಸ್ಥೆಯು ಪರೋಕ್ಷವಾಗಿ ಎನ್‌ಡಿಟಿವಿ ಷೇರುಗಳ ಖರೀದಿಗೆ ಮುಂದಾಗಿದೆ. ವಿಶ್ವಪ್ರಧಾನ್ ಕಮರ್ಷಿಯಲ್ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯ ಹೆಸರಿನಲ್ಲಿ ಈ ಖರೀದಿ ಪ್ರಕ್ರಿಯೆ ನಡೆಸಲು ಅದಾನಿ ಗ್ರೂಪ್ ಮುಂದಾಗಿದೆ. ವಿಶ್ವಪ್ರಧಾನ್ ಕಮರ್ಷಿಯಲ್ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯು ಎಎಂಜಿ ಮೀಡಿಯಾ ನೆಟ್‌ವರ್ಕ್ಸ್‌ ಲಿಮಿಟೆಡ್ ಸಂಸ್ಥೆಯ ಅಧೀನದಲ್ಲಿ ಕಾರ್ಯನಿರ್ವಹಿಸುತ್ತದೆ. ಈ ಎಎಂಜಿ ಮೀಡಿಯಾ ನೆಟ್‌ವರ್ಕ್ಸ್‌ ಲಿಮಿಟೆಡ್ ಸಂಸ್ಥೆಯ ಮಾಲೀಕತ್ವವನ್ನು ಅದಾನಿ ಎಂಟ್ರ್‌ಪ್ರೈಸಸ್ ಲಿಮಿಟೆಡ್ ಹೊಂದಿದೆ.



 



ವಿಶ್ವಪ್ರಧಾನ ಕಮರ್ಷಿಯಲ್ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯು ಆರ್‌ಆರ್‌ಪಿಆರ್ ಹೋರ್ಡಿಂಗ್ಸ್ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯ ಶೇ. 99.5ರಷ್ಟು ಷೇರುಗಳನ್ನು ಖರೀದಿಸಲು ನಿರ್ಧರಿಸಿದೆ. ಆರ್‌ಆರ್‌ಪಿಆರ್ ಹೋರ್ಡಿಂಗ್ಸ್ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯು ಎನ್‌ಡಿಟಿವಿಯ ಶೇ. 29.18ರಷ್ಟು ಷೇರುಗಳನ್ನು ಹೊಂದಿದ್ದು, ಒಂದು ವೇಳೆ ಆರ್‌ಆರ್‌ಪಿಆರ್ ಹೋರ್ಡಿಂಗ್ಸ್ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯ ಷೇರು ವಿಶ್ವಪ್ರಧಾನ್ ಕಮರ್ಷಿಯಲ್ ಪ್ರೈವೇಟ್ ಲಿಮಿಟೆಡ್ ಸಂಸ್ಥೆ ಪಾಲಾದರೆ ಎನ್‌ಡಿಟಿವಿ ಸಂಸ್ಥೆಯು ಅದಾನಿ ಗ್ರೂಪ್‌ಗೆ ಮೇಲುಗೈ ಆಗಲಿದೆ.



ಏಕೆಂದರೆ, ಈ ಖರೀದಿ ಪ್ರಕ್ರಿಯೆ ಮುಗಿದ ಬಳಿಕ ಸೆಬಿ ನಿಯಮಾವಳಿಗ ಪ್ರಕಾರ ಹೆಚ್ಚುವರಿಯಾಗಿ ಎನ್‌ಡಿಟಿವಿಯ ಶೇ. 26 ರಷ್ಟು ಷೇರು ಖರೀದಿ ಮಾಡಲು ಹಾಗೂ ಈ ಮೂಲಕ ಎನ್‌ಡಿಟಿವಿ ಮೇಲೆ ಸಂಪೂರ್ಣ ನಿಯಂತ್ರಣ ಹೊಂದಲು ಅದಾನಿ ಗ್ರೂಪ್‌ಗೆ ಸಾಧ್ಯವಾಗಲಿದೆ.



ಈ ಕುರಿತು ಪ್ರತಿಕ್ರಿಯೆ ನೀಡಿರುವ ಎಎಂಜಿ ಮೀಡಿಯಾ ನೆಟ್‌ವರ್ಕ್ಸ್‌ ಲಿಮಿಟೆಡ್‌ನ ಸಿಇಒ ಸಂಜಯ ಪುಗಾಲಿಯಾ, ಈ ಖರೀದಿ ಪ್ರಕ್ರಿಯೆಯು ಸಂಸ್ಥೆಯ ಅತಿದೊಡ್ಡ ಮೈಲಿಗಲ್ಲು ಆಗಲಿದೆ ಎಂದು ಬಣ್ಣಿಸಿದರು. ಹೊಸ ತಲೆಮಾರಿನ ಮಾಧ್ಯಮ ವೇದಿಕೆಯಲ್ಲಿ ಸ್ಥಾನ ಪಡೆಯಬೇಕೆಂಬ ತಮ್ಮ ಸಂಸ್ಥೆಯ ಗುರಿ ಸಾಧನೆಗೆ ಈ ಖರೀದಿ ಪ್ರಕ್ರಿಯೆ ಪೂರಕವಾಗಿದೆ ಎಂದು ಅವರು ತಿಳಿಸಿದ್ದಾರೆ.



ಅದಾನಿ ಗ್ರೂಪ್ಸ್‌ ಮಾಲೀಕತ್ವದ ಎಎಂಜಿ ಮೀಡಿಯಾ ನೆಟ್‌ವರ್ಕ್ಸ್‌ ಲಿಮಿಟೆಡ್‌ ಸಂಸ್ಥೆಯು ಸುದ್ದಿ ಮಾಧ್ಯಮ ರಂಗದಲ್ಲಿ ಪ್ರಮುಖ ಸ್ಥಾನದಲ್ಲಿ ಗುರ್ತಿಸಿಕೊಳ್ಳಲು ಬಯಸುತ್ತಿದೆ ಎಂದು ಹೇಳಿರುವ ಸಂಜಯ್ ಪುಗಾಲಿಯಾ, ಭಾರತದ ವೈವಿಧ್ಯಮಯ ವೀಕ್ಷಕ ಬಳಗವನ್ನು ತಲುಪಲು ಸಹಕಾರಿ ಆಗಲಿದೆ ಎಂದು ಹೇಳಿದೆ.



ಎನ್‌ಡಿಟಿವಿ ಹಾಗೂ ಅದರ ಡಿಜಿಟಲ್ ವೇದಿಕೆಯು ನಮ್ಮ ಚಿಂತನೆಗೆ ಅನುಸಾರವಾಗಿ ಕಾರ್ಯನಿರ್ವಿಸಲು ಸೂಕ್ತವಾದದ್ದು ಎಂದು ಅದಾನಿ ಸಮೂಹದ ಅಂಗ ಸಂಸ್ಥೆ ಹೇಳಿಕೊಂಡಿದ್ದು, ಈ ಖರೀದಿ ಪ್ರಕ್ರಿಯೆ ಮೂಲಕ ಸುದ್ದಿ ಪ್ರಸಾರ ಮಾಧ್ಯಮ ರಂಗದಲ್ಲಿ ಎನ್‌ಡಿಟಿವಿಯ ನಾಯಕತ್ವವನ್ನು ಬಲಪಡಿಸಲು ಸಹಕಾರಿಯಾಗಲಿದೆ ಎಂದಿದ್ದಾರೆ.



ಎನ್‌ಡಿಟಿವಿ ಸಂಸ್ಥೆಯು ರಾಷ್ಟ್ರೀಯ ಮಟ್ಟದ ಮೂರು ಸುದ್ದಿ ವಾಹಿನಿಗಳನ್ನು ಹೊಂದಿದೆ. ಎನ್‌ಡಿಟಿವಿ 24x7, ಎನ್‌ಡಿಟಿವಿ ಇಂಡಿಯಾ ಹಾಗೂ ಎನ್‌ಡಿಟಿಇ ಪ್ರಾಫಿಟ್ ಚಾನಲ್‌ಗಳನ್ನು ನಡೆಸುತ್ತಿದೆ. 2022ರ ಆರ್ಥಿಕ ವರ್ಷದಲ್ಲಿ ಎನ್‌ಡಿಟಿವಿ ಒಟ್ಟು 421 ಕೋಟಿ ಆದಾಯ ಸಂಗ್ರಹಿಸಿತ್ತು. ಈ ಪೈಕಿ 85 ಕೋಟಿ ಲಾಭ ದಾಖಲಿಸಿತ್ತು

Author
Samadarshi News
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಅಮಿತ ಶಾ ಭೇಟಿ : ಬೆಳಗಾವಿ ವಿಮಾನ ನಿಲ್ದಾಣದ ಸುತ್ತ 2 ಕಿ.ಮೀ. ‘ರೆಡ್ ಝೋನ್–ನೋ ಫ್ಲೈ ಝೋನ್’ಗಣೇಶ ಮೆರವಣಿಗೆ ವೇಳೆ ಮಸೀದಿ, ಮದರಸಾ ಮೇಲೆ ಕಲ್ಲುತೂರಾಟ ಆರೋಪಯುಪಿಐ ಶುಲ್ಕಕ್ಕೆ ಅಖಿಲೇಶ ಯಾದವ ಆಕ್ರೋಶದೇಶದ ಇಂಧನ ಭದ್ರತೆ ಕಾಪಾಡಲು ಬದ್ಧಈಶ್ವರಪ್ಪ, ಯತ್ನಾಳ ಅವರನ್ನು ಬಿಜೆಪಿಗೆ ಮರಳಿ ಕರೆತರಬೇಕು: ನಿರಾಣಿ₹50 ಲಕ್ಷ ಲಂಚ ಪಡೆಯುವಾಗ ಲೋಕಾಯುಕ್ತ ಬಲೆಗೆ ಬಿದ್ದ ಧಾರವಾಡ ತಹಶೀಲ್ದಾರಜಾಗತಿಕ ಚಿಪ್ ಉತ್ಪಾದನೆಯ ವಿಶ್ವಾಸಾರ್ಹ ಕೇಂದ್ರವಾಗುತ್ತಿದೆ ಭಾರತ: ಮೋದಿಬರಪೀಡಿತ ಪಟ್ಟಿಗೆ ಮತ್ತೂ 23 ತಾಲೂಕು; ಒಟ್ಟು 124ಅಧಿಕಾರಿಯ ಮೇಜಿನ ಮೇಲೆ ಬೀದಿ ನಾಯಿಗಳನ್ನು ಬಿಟ್ಟ ಪ್ರತಿಭಟನಾಕಾರರುಗನ್ ತೋರಿಸಿ ಬೆದರಿಸಿ ವಿವಾಹಿತ ಮಹಿಳೆ ಮೇಲೆ ಸಾಮೂಹಿಕ ಅತ್ಯಾಚಾರ ಆರೋಪ: ಮಾಜಿ ಶಾಸಕ ಸೇರಿ ಇಬ್ಬರ ವಿರುದ್ಧ ಪ್ರಕರಣ