LIVE TV LocalCrimeNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes
National News

ಮಣಿಪುರದಲ್ಲಿ ದಿಗ್ಬಂಧನ: ಪೆಟ್ರೋಲ್ ₹230, ಅಡುಗೆ ಅನಿಲ ₹5,000

ಇಂಫಾಲ್, ಜೂನ್ 13 : ಮಣಿಪುರದ ಕುಕಿ ಪ್ರಾಬಲ್ಯದ ಕಾಂಗ್ಪೋಕ್ಪಿ ಜಿಲ್ಲೆಯಲ್ಲಿ ನಾಗಾ ಸಂಘಟನೆಗಳು ಹೇರಿರುವ ಆರ್ಥಿಕ ದಿಗ್ಬಂಧನದಿಂದ ಅಗತ್ಯ ವಸ್ತುಗಳ ಸರಬರಾಜು ತೀವ್ರವಾಗಿ ವ್ಯತ್ಯಯಗೊಂಡಿದ್ದು, ಪೆಟ್ರೋಲ್ ಬೆಲೆ ಲೀಟರ್‌ಗೆ 230 ರೂಪಾಯಿ ಹಾಗೂ ಎಲ್‌ಪಿಜಿ ಅಡುಗೆ ಅನಿಲ ಸಿಲಿಂಡರ್ ಬೆಲೆ 5,000 ರೂಪಾಯಿಗೆ ಏರಿಕೆಯಾಗಿದೆ.

ನಾಗಾಗಳ ಉನ್ನತ ಸಂಸ್ಥೆಯಾದ ಯುನೈಟೆಡ್ ನಾಗಾ ಕೌನ್ಸಿಲ್ ಮೇ 17ರಿಂದ ಅಂತರ ಜಿಲ್ಲಾ ಆರ್ಥಿಕ ದಿಗ್ಬಂಧನ ಹೇರಿದ್ದು, ಜಿಲ್ಲೆಯಲ್ಲಿ ಜನರ ದೈನಂದಿನ ಬದುಕು ದುಸ್ತರಗೊಳಿಸಿದೆ. ನಾಗಾ ಪ್ರಾಬಲ್ಯದ ಸೇನಾಪತಿ ಜಿಲ್ಲೆಯ ರಾಷ್ಟ್ರೀಯ ಹೆದ್ದಾರಿ-02 ರಸ್ತೆ ಕಾಂಗ್ಪೋಕ್ಪಿಯ ಗಡಿಯನ್ನು ಹಂಚಿಕೊಂಡಿದೆ. ಈ ರಸ್ತೆಯಲ್ಲಿ ಇಂಧನ ಮತ್ತು ಆಹಾರ ಪದಾರ್ಥಗಳನ್ನು ಹೊತ್ತೊಯ್ಯುವ ಲಾರಿಗಳು ಸಾಲುಗಟ್ಟಿ ನಿಂತಿವೆ.

ಸ್ಥಳೀಯರ ಪ್ರಕಾರ, ಕೆಲವೆಡೆ ಪೆಟ್ರೋಲ್ ಬೆಲೆ 350 ರೂಪಾಯಿವರೆಗೆ ತಲುಪಿದ್ದು, ಎಲ್‌ಪಿಜಿ ಸಿಲಿಂಡರ್ 5,000 ರೂಪಾಯಿಗೆ ಮಾರಾಟವಾಗುತ್ತಿದೆ. 50 ಕೆಜಿ ಅಕ್ಕಿಯ ಚೀಲದ ಬೆಲೆ 1,700 ರೂಪಾಯಿಯಿಂದ 3,000 ರೂಪಾಯಿಗೆ ಏರಿಕೆಯಾಗಿದೆ.

ಪ್ರಸ್ತುತ ಪೆಟ್ರೋಲ್ ಬೆಲೆ 230 ರೂಪಾಯಿ ಹಾಗೂ ಡೀಸೆಲ್ 190 ರೂಪಾಯಿಯಾಗಿದೆ. ಅಂಗಡಿಗಳಲ್ಲಿನ ದಾಸ್ತಾನು ಕಡಿಮೆಯಾಗುತ್ತಿದ್ದು, ಆಡಳಿತವು ದಿಗ್ಬಂಧನ ತೆರವುಗೊಳಿಸಲು ಮಧ್ಯಪ್ರವೇಶಿಸದಿದ್ದರೆ ಕಾಂಗ್ಪೋಕ್ಪಿ ಶೀಘ್ರದಲ್ಲೇ ಆಹಾರ ಕೊರತೆಯನ್ನು ಎದುರಿಸಲಿದೆ ಎಂದು ಸ್ಥಳೀಯರು ಆತಂಕ ವ್ಯಕ್ತಪಡಿಸಿದ್ದಾರೆ.

ಅಡುಗೆ ಅನಿಲದ ಕೊರತೆಯಿಂದ ಜನರು ಸೌದೆ ಮತ್ತು ಕಲ್ಲಿದ್ದಲನ್ನು ಬಳಸುತ್ತಿದ್ದಾರೆ. ಅನೇಕ ಆಹಾರ ಕೇಂದ್ರಗಳು ಬಾಗಿಲು ಮುಚ್ಚಿವೆ. 2023ರಿಂದ ಪರಿಹಾರ ಶಿಬಿರಗಳಲ್ಲಿ ಆಶ್ರಯ ಪಡೆದಿರುವ ಕುಕಿ ಸಮುದಾಯದವರು ಅಡುಗೆಗಾಗಿ ಕಲ್ಲಿದ್ದಲು ಮತ್ತು ಸೌದೆಯನ್ನು ಬಳಸುತ್ತಿದ್ದಾರೆ. ಕಾಂಗ್ಪೋಕ್ಪಿಗೆ ಪರ್ಯಾಯ ಮಾರ್ಗವಿಲ್ಲದಿರುವುದರಿಂದ ಜೀವನ ಮತ್ತಷ್ಟು ಸಂಕಷ್ಟಕರವಾಗಿದೆ ಎಂದು ಕುಕಿ ಸಮುದಾಯದ ಹಾವೊಕಿಪ್ ತಿಳಿಸಿದ್ದಾರೆ.

ಇದಕ್ಕೆ ಪ್ರತಿಕ್ರಿಯಿಸಿರುವ ನಾಗಾ ಸಮುದಾಯದ ಮುಖಂಡರೊಬ್ಬರು, ಕುಕಿಗಳು ಆರು ನಾಗಾಗಳನ್ನು ಬಿಡುಗಡೆ ಮಾಡಿದ್ದರೆ ದಿಗ್ಬಂಧನ ತೆರವುಗೊಳಿಸಲಾಗುತ್ತಿತ್ತು ಎಂದು ಹೇಳಿದ್ದಾರೆ.

ಆರು ನಾಗಾಗಳ ಅಪಹರಣ ಮತ್ತು ಹತ್ಯೆ ಪ್ರಕರಣದಲ್ಲಿ ಭಾಗಿಯಾಗಿರುವವರನ್ನು ತಕ್ಷಣ ಬಂಧಿಸಬೇಕು. ಕೆಎನ್‌ಎಫ್-ಪಿ ಸಂಘಟನೆಯನ್ನು ಭಯೋತ್ಪಾದಕ ಸಂಘಟನೆ ಎಂದು ಘೋಷಿಸಬೇಕು ಹಾಗೂ ಉಪ ಮುಖ್ಯಮಂತ್ರಿ ನೆಮ್ಚಾ ಕಿಪ್ಗೆನ್ ರಾಜೀನಾಮೆ ನೀಡಬೇಕು ಎಂದು ನಾಗಾ ಸಮುದಾಯ ಆಗ್ರಹಿಸಿದೆ.

Author
Samadarshi News
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಅನುಭವಿಗಳಿಂದ ಹೊಸ ಮುಖಗಳವರೆಗೆ: ಸಚಿವ ಸಂಪುಟ ಸೇರಿದ 19 ಶಾಸಕರ ರಾಜಕೀಯ ಪಯಣಮಳೆ ಅಬ್ಬರಕ್ಕೆ ರಾಜ್ಯ ತತ್ತರ : ಜಲಾಶಯಗಳು ಭರ್ತಿ, ನದಿ-ಹಳ್ಳಗಳು ಅಪಾಯದ ಮಟ್ಟಕ್ಕೆಸಂಪುಟ ವಿಸ್ತರಣೆಯಲ್ಲೇ ಕೊನೆ ಕ್ಷಣದ ಬದಲಾವಣೆ: 19 ಮಂದಿಗೆ ಮಾತ್ರ ಸ್ಥಾನಕಾಂಗ್ರೆಸ್ ಮೇಲಿನ ನಂಬಿಕೆ ಕುಸಿದಿದೆ : ತನ್ವೀರ ಸೇಠ್ಬಂಕಿಪುರದಲ್ಲಿ ಪ್ರಶಾಂತ್ ಕಿಶೋರ್‌ಗೆ ಮೊದಲ ರಾಜಕೀಯ ಗೆಲುವುಗೋವಾದಲ್ಲಿ ಹೊಸ ಕಟ್ಟುನಿಟ್ಟಿನ ನಿಯಮ: ಈ ತಪ್ಪು ಮಾಡಿದರೆ ₹1 ಲಕ್ಷದವರೆಗೆ ದಂಡಗರ್ಭಪಾತ ಜಾಲದ ಬೆಚ್ಚಿಬೀಳಿಸುವ ಸತ್ಯ: ‘ಗಂಡು ಮಗು’ ಔಷಧಿ ಹೆಸರಿನಲ್ಲಿ ವಂಚನೆ"ನಾನೂ ಸಚಿವ ಸ್ಥಾನದಿಂದ ವಂಚಿತನಾಗಿದ್ದೆ": ಅಸಮಾಧಾನಿತ ಶಾಸಕರಿಗೆ ಡಿ.ಕೆ.ಶಿವಕುಮಾರ ಸಮಾಧಾನಡಿ.ಕೆ. ಸಂಪುಟ ವಿಸ್ತರಣೆ : 19 ಸಚಿವರ ಪ್ರಮಾಣ ವಚನ, ಮಹಿಳೆಯರಿಗೆ ಸಿಗಲಿಲ್ಲ ಅವಕಾಶ ರಾಮಮಂದಿರ ದೇಣಿಗೆ ಕಳ್ಳತನ, ವಿದ್ಯಾರ್ಥಿಗಳ ಮೇಲಿನ ದೌರ್ಜನ್ಯ : ಸಂಸತ್ ಆವರಣದಲ್ಲಿ ವಿರೋಧ ಪಕ್ಷಗಳ ಪ್ರತಿಭಟನೆ