LIVE TV LocalCrimeNationalInternationalPoliticsFinancialEducationTechnologyEntertainmentSportsHealthFeatureTravelingBeautyRecipes
National News

ಡಿಲೀಟ್ ಆದ 13.3 ಕೋಟಿ ಮತದಾರರ ಪತ್ತೆಗೆ ಕಾಂಗ್ರೆಸ್‌ನ ‘ಮತ ರಕ್ಷಕ’ ಪಡೆ

ಹೊಸದಿಲ್ಲಿ, ಅ. 7: ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ವೇಳೆ ಕೈಬಿಡಲಾಗಿರುವ ಸುಮಾರು 13.3 ಕೋಟಿ ಮತದಾರರನ್ನು ಗುರುತಿಸಿ, ಅರ್ಹರನ್ನು ಮತ್ತೆ ಮತದಾರರ ಪಟ್ಟಿಗೆ ಸೇರಿಸಲು ನೆರವಾಗುವ ಉದ್ದೇಶದಿಂದ ‘ಮತ ರಕ್ಷಕ’ (ವೋಟ್‌ ರಕ್ಷಕ್‌)ರನ್ನು ನೇಮಿಸಲು ಕಾಂಗ್ರೆಸ್ ಮುಂದಾಗಿದೆ.

ಅ.25ರಿಂದ ನ.25ರವರೆಗೆ ಒಂದು ತಿಂಗಳು ದೇಶಾದ್ಯಂತ ಈ ಅಭಿಯಾನ ನಡೆಯಲಿದೆ. ಮತದಾರರ ಪಟ್ಟಿಯಿಂದ ಅಕ್ರಮವಾಗಿ ಹೆಸರು ಕೈಬಿಡಲಾಗಿದೆ ಎಂದು ಹೇಳಲಾಗುತ್ತಿರುವವರನ್ನು ಸಂಪರ್ಕಿಸಿ, ಅವರ ಹೇಳಿಕೆಗಳನ್ನು ದಾಖಲಿಸಿಕೊಳ್ಳುವುದು ಹಾಗೂ ಅರ್ಹರು ಮರುನೋಂದಣಿ ಮಾಡಿಕೊಳ್ಳಲು ನೆರವಾಗುವುದು ಅಭಿಯಾನದ ಉದ್ದೇಶ ಎಂದು ಪಕ್ಷದ ಮೂಲಗಳು ತಿಳಿಸಿವೆ.

ಎಸ್‌ಐಆರ್‌ಗೂ ಮೊದಲು ಮತ್ತು ನಂತರದ ಮತದಾರರ ಪಟ್ಟಿಗಳನ್ನು ಪರಿಶೀಲಿಸಿ, ಪ್ರತಿ ಬೂತ್‌ನಲ್ಲಿ ಡಿಲೀಟ್ ಆಗಿರುವ ಮತದಾರರ ಪಟ್ಟಿಯನ್ನು ಸಿದ್ಧಪಡಿಸಲಾಗುತ್ತದೆ. ಅದನ್ನು ‘ಮತ ರಕ್ಷಕರು’ ಮತ್ತು ಬೂತ್ ಮಟ್ಟದ ಏಜೆಂಟ್‌ಗಳಿಗೆ (ಬಿಎಲ್‌ಎ) ನೀಡಲಾಗುತ್ತದೆ. ಅವರು ಸಂಬಂಧಪಟ್ಟ ಮತದಾರರ ಮನೆಗಳಿಗೆ ತೆರಳಿ ಹೆಸರು ಕೈಬಿಟ್ಟಿರುವುದಕ್ಕೆ ಕಾರಣವೇನು, ಆ ಕ್ರಮ ಸಮರ್ಪಕವಾಗಿದೆಯೇ ಎಂಬುದನ್ನು ಪರಿಶೀಲಿಸಿ ಮಾಹಿತಿ ದಾಖಲಿಸಲಿದ್ದಾರೆ.

ಅರ್ಹ ಮತದಾರರ ಹೆಸರು ಮತ್ತೆ ಪಟ್ಟಿಗೆ ಸೇರಿಸಲು ಅಗತ್ಯವಿರುವ ಫಾರ್ಮ್‌–6 ಭರ್ತಿ ಮಾಡಿ ಸಲ್ಲಿಸುವುದಕ್ಕೂ ‘ಮತ ರಕ್ಷಕರು’ ನೆರವು ನೀಡಲಿದ್ದಾರೆ. ಈ ಕಾರ್ಯವನ್ನು ಒಂದು ತಿಂಗಳಲ್ಲಿ ಪೂರ್ಣಗೊಳಿಸಲು ಕಾಂಗ್ರೆಸ್‌ನ ‘ಕನೆಕ್ಟ್ ಸೆಂಟರ್’ ಅಗತ್ಯ ದಾಖಲೆಗಳನ್ನು ಒದಗಿಸುವುದರೊಂದಿಗೆ ಅಭಿಯಾನದ ಮೇಲ್ವಿಚಾರಣೆ ನಡೆಸಲಿದೆ.

ಇದೇ ಮಾದರಿಯ ಕಾರ್ಯವನ್ನು ತೆಲಂಗಾಣದ ಆರು ಕ್ಷೇತ್ರಗಳಲ್ಲಿ ಪ್ರಾಯೋಗಿಕವಾಗಿ ನಡೆಸಲಾಗಿದೆ. ಸದ್ಯ ಕಾಂಗ್ರೆಸ್ ಬಳಿ ಎಂಟು ರಾಜ್ಯಗಳ ದತ್ತಾಂಶವಿದ್ದು, ಕೆಲವೇ ದಿನಗಳಲ್ಲಿ ಉಳಿದ ರಾಜ್ಯಗಳ ಮಾಹಿತಿಯನ್ನೂ ಸಂಗ್ರಹಿಸಲಾಗುವುದು ಎಂದು ಮೂಲಗಳು ತಿಳಿಸಿವೆ.

13.3 ಕೋಟಿ ಮತದಾರರನ್ನು ಸಂಪರ್ಕಿಸುವ ನಿರ್ಧಾರವನ್ನು ಕಳೆದ ತಿಂಗಳು ನಡೆದ ಕಾಂಗ್ರೆಸ್ ಕಾರ್ಯಕಾರಿ ಸಮಿತಿ (ಸಿಡಬ್ಲ್ಯುಸಿ) ಸಭೆಯಲ್ಲಿ ಕೈಗೊಳ್ಳಲಾಗಿತ್ತು. ಅ.5ರಂದು ನಡೆದ ಪಕ್ಷದ ಪ್ರಧಾನ ಕಾರ್ಯದರ್ಶಿಗಳು ಮತ್ತು ರಾಜ್ಯ ಉಸ್ತುವಾರಿಗಳ ಸಭೆಯಲ್ಲಿ ಅಭಿಯಾನದ ರೂಪುರೇಷೆ ಸಿದ್ಧಪಡಿಸಲಾಗಿದೆ.

ಇದರ ಜತೆಗೆ, ಅ.10ರಿಂದ 20ರವರೆಗೆ ದೇಶಾದ್ಯಂತ ಬೂತ್ ಮಟ್ಟದಲ್ಲಿ ಬೈಕ್ ರ‍್ಯಾಲಿ ಅಥವಾ ಪಾದಯಾತ್ರೆ ನಡೆಸಿ, ಮುಖ್ಯ ಚುನಾವಣಾ ಆಯುಕ್ತರ ಪ್ರತಿಕೃತಿ ದಹಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲು ನಿರ್ಧರಿಸಲಾಗಿದೆ. ನವರಾತ್ರಿ ಸಂಭ್ರಮಾಚರಣೆ ನಡೆಯುವ ಪ್ರದೇಶಗಳಲ್ಲಿ ಕಾಂಗ್ರೆಸ್ ಆರೋಪಿಸುತ್ತಿರುವ ‘ಮತಗಳ್ಳತನ’ದ ಕುರಿತು ಕರಪತ್ರಗಳನ್ನು ಹಂಚಿ ಜನಜಾಗೃತಿ ಮೂಡಿಸುವ ಯೋಜನೆಯೂ ಇದೆ.

ಮುಂದಿನ ಹಂತದಲ್ಲಿ ವಿರೋಧ ಪಕ್ಷಗಳ ‘ಇಂಡಿಯಾ’ ಒಕ್ಕೂಟದ ವತಿಯಿಂದ ನ.1ರಂದು ದೆಹಲಿಯ ರಾಮಲೀಲಾ ಮೈದಾನದಲ್ಲಿ ಸಮಾವೇಶ ನಡೆಸಲು ಉದ್ದೇಶಿಸಲಾಗಿದೆ. ನ.25 ಮತ್ತು 26ರಂದು ರಾಷ್ಟ್ರ ರಾಜಧಾನಿಯ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಯಾತ್ರೆಗಳನ್ನು ಆಯೋಜಿಸಲು ಕಾಂಗ್ರೆಸ್ ಯೋಜಿಸಿದೆ.

Author
Samadarshi News
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಗ್ಯಾನೇಶ ಕುಮಾರ ರಾಜೀನಾಮೆ ನೀಡಿದರೂ ಹೋರಾಟ ನಿಲ್ಲದು: ಅ.10ಕ್ಕೆ ದೆಹಲಿಯಲ್ಲಿ ಬೃಹತ್ ಪ್ರತಿಭಟನೆ4 ತಿಂಗಳಲ್ಲಿ 4ನೇ ಬಾರಿ ಅಕ್ಕಿ ದರ ಏರಿಕೆರಾಜ್ಯದಲ್ಲಿ ಶೇ.90ರಷ್ಟು ಬೆಳೆ ಹಾನಿ : ಪರಮೇಶ್ವರದೆಹಲಿಯಲ್ಲಿ ಪ್ರತಿಭಟನೆ ತೀವ್ರ: ರಾಹುಲ್‌, ಪ್ರಿಯಾಂಕಾ ಮತ್ತೆ ಪೊಲೀಸ್ ವಶಕ್ಕೆಮೋದಿ ನಾಯಕತ್ವದಲ್ಲಿ ಭಾರತ ಬಲಾಢ್ಯ ರಾಷ್ಟ್ರ: ಜಗದೀಶ ಶೆಟ್ಟರ್ಅಣುಗಳ ‘ಕನ್ನಡಿ ರಹಸ್ಯ’ ಭೇದಿಸಿದ ವಿಜ್ಞಾನಿಗಳಿಗೆ ನೊಬೆಲ್‌ಗರ್ಭಿಣಿಯ ರೀತಿ ಎಸಿ ರಹಸ್ಯ ಕಾರ್ಯಾಚರಣೆ; ಅಂತರರಾಜ್ಯ ಭ್ರೂಣಲಿಂಗ ಪತ್ತೆ ಜಾಲ ಬಯಲು‘ಸ್ಟಿಂಗ್ ಆಪರೇಷನ್’ ಪ್ರಯತ್ನ: ಐವರು ಸಚಿವರಿಗೆ ಡಿ.ಕೆ. ಶಿವಕುಮಾರ ಎಚ್ಚರಿಕೆ‘ಮತ ಕಳ್ಳತನ’ ಆರೋಪದಲ್ಲಿ ಹುರುಳಿಲ್ಲ : ಕುಮಾರಸ್ವಾಮಿSIR ಅಕ್ರಮ ಬಯಲಾಗುವ ಭೀತಿಯಿಂದ ರಾಜಪಾಲರ ಮೊರೆ: ಬಿಜೆಪಿ–ಜೆಡಿಎಸ್ ವಿರುದ್ಧ ಡಿ.ಕೆ. ಶಿವಕುಮಾರ ವಾಗ್ದಾಳಿ