LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureEditorialBeautyRecipes

ಗುಜರಾತ ವಿಧಾನಸಭೆ ಚುನಾವಣೆಗೆ ದಿನಾಂಕ ಘೋಷಣೆ 

ಹೊಸದಿಲ್ಲಿ : ಬಹುನಿರೀಕ್ಷಿತ ಗುಜರಾತ​ ವಿಧಾನಸಭಾ ಚುನಾವಣೆಯ ವೇಳಾಪಟ್ಟಿಯನ್ನು ಚುನಾವಣಾ ಆಯೋಗ ಇಂದು ಪ್ರಕಟಿಸಿದೆ.



ಇಂದು ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದ, ಕೇಂದ್ರ ಚುನಾವಣಾ ಆಯುಕ್ತ ರಾಜೀವ​ ಕುಮಾರ, ಗುಜರಾತದಲ್ಲಿ ಡಿಸೆಂಬರ್​ 1 ಮತ್ತು 5ಕ್ಕೆ ಎರಡು ಹಂತಗಳಲ್ಲಿ ಮತದಾನ ನಡೆಯಲಿದ್ದು, ಡಿಸೆಂಬರ್ 8ಕ್ಕೆ ಫಲಿತಾಂಶ ಹೊರ ಬೀಳಲಿದೆ ಎಂದು ಹೇಳಿದರು.



ಗುಜರಾತ್ ವಿಧಾನಸಭೆಯ ಅವಧಿಯು ಮುಂದಿನ ವರ್ಷ ಫೆಬ್ರವರಿ 18ಕ್ಕೆ ಕೊನೆಗೊಳ್ಳುತ್ತದೆ. ಹಿಮಾಚಲ ಪ್ರದೇಶ ಸದನದ ಅವಧಿಯು 2023ರ ಜನವರಿ 8ಕ್ಕೆ ಮುಗಿಯಲಿದೆ. ಹಾಗಾಗಿ ಈ ಎರಡೂ ರಾಜ್ಯಗಳಿಗೆ ಒಂದೇ ಸಮಯದಲ್ಲಿ ಚುನಾವಣಾ ದಿನಾಂಕ ಘೋಷಣೆಯಾಗಲಿದೆ ಎಂದು ನಿರೀಕ್ಷಿಸಲಾಗಿತ್ತು. ಆದರೆ, ಕೇಂದ್ರ ಚುನಾವಣಾ ಆಯೋಗವು ಅಕ್ಟೋಬರ್ 14ರಂದು ಹಿಮಾಚಲ ಪ್ರದೇಶಕ್ಕೆ ಮಾತ್ರ ಚುನಾವಣೆ ದಿನಾಂಕ ಘೋಷಿಸಿತು. ಇದೀಗ ಗುಜರಾತ್​ ಚುನಾವಣೆ ದಿನಾಂಕವೂ ಘೋಷಣೆಯಾಗಿದೆ.



ಕಳೆದ ಅಕ್ಟೋಬರ 14ರಂದು ಚುನಾವಣಾ ಆಯೋಗ ಹಿಮಾಚಲ ಪ್ರದೇಶದ ವಿಧಾನಸಭಾ ಚುನಾವಣಾ ದಿನಾಂಕವನ್ನು ಘೋಷಿಸಿದೆ. ಹಿಮಾಚಲ ಪ್ರದೇಶದ 68 ಕ್ಷೇತ್ರಗಳಿಗೆ ಒಂದೇ ಹಂತದಲ್ಲಿ ನ.12ರಂದು ಮತದಾನ ನಡೆಯಲಿದೆ ಡಿ.8ರಂದು ಮತ ಎಣಿಕೆ ನಡೆಯಲಿದೆ.
Author
A B Dharwadkar
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಲಾಠಿಚಾರ್ಜ ವಿಡಿಯೋ ನೋಡಲು ಸಮಯವಿಲ್ಲ : ಸುಪ್ರೀಮ ಕೋರ್ಟರೈತ ಹುತಾತ್ಮರ ದಿನಾಚರಣೆಯಲ್ಲಿ ಕಳಸಾ–ಬಂಡೂರಿ ಯೋಜನೆಗೆ ವೇಗ ನೀಡುವಂತೆ ಆಗ್ರಹವಾಟ್ಸಪ್ ಮದುವೆ ಆಹ್ವಾನದ ಎಪಿಕೆ ಫೈಲ್ ಕ್ಲಿಕ್ ಮಾಡಿ ₹10 ಲಕ್ಷ ಕಳೆದುಕೊಂಡ ಅಧಿಕಾರಿಮುಖ್ಯಮಂತ್ರಿ ಪ್ರವಾಸದಲ್ಲಿ ವೈದ್ಯಕೀಯ ಭದ್ರತಾ ಲೋಪ: ಡಿಎಚ್ಒಗೆ ಶೋಕಾಸ್ ನೋಟಿಸ್ಗಡಿ ಕನ್ನಡ ಶಾಲೆಗಳ ದುಸ್ಥಿತಿಗೆ ತುರ್ತು ಸ್ಪಂದನೆ ಅಗತ್ಯ: ಸಮಿತಿ ಶಿಫಾರಸುಪ್ರಧಾನಿ ನಿವಾಸದ ಎದುರು ಕಾಂಗ್ರೆಸ್‌ ಧರಣಿ: ರಾಹುಲ್ ಸೇರಿ ವಿಪಕ್ಷ ನಾಯಕರು ಪೊಲೀಸ ವಶಕ್ಕೆಪ್ರತಿಭಟನಾಕಾರರಿಗೆ ಎಎಪಿ ನೆರವು: ಕಾನೂನು, ವೈದ್ಯಕೀಯ ಸಹಾಯಕ್ಕೆ ಸಹಾಯವಾಣಿ ಆರಂಭ112ಗೆ ಕರೆ ಬಂದರೆ ಠಾಣೆ ವ್ಯಾಪ್ತಿಯ ನೆಪ ಬೇಡವಿದ್ಯಾರ್ಥಿಗಳ ಥಳಿತ ಭಾರತೀಯ ಸಂಸ್ಕೃತಿಯಲ್ಲ: ಮೋದಿ, ಅಮಿತ ಶಾ ಕ್ಷಮೆಯಾಚಿಸಲಿಮೇದಾಂತ ಆಸ್ಪತ್ರೆಗೆ ಸೋನಮ್ ವಾಂಗ್ಚುಕ ಸ್ಥಳಾಂತರಕ್ಕೆ ಹೈಕೋರ್ಟ ಅನುಮತಿ