ePaper
PoliticsBusinessEducationTechEntertainmentSportsEditorialHealthHealthTravelingBeauty TipsRecipes Tips

ಯುದ್ಧ ನಿಲ್ಲಿಸಿದ್ದು ನಾನೇ : ಟ್ರಂಪ್‌ ಪುನರುಚ್ಛಾರ

ವಾಷಿಂಗ್ಟನ್‌, ೧೪:  ಅಮೆರಿಕದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್ ಭಾರತ-ಪಾಕಿಸ್ತಾನ ನಡುವಿನ ಕದನ ವಿರಾಮದ ಕ್ರೆಡಿಟ್ ತೆಗೆದುಕೊಳ್ಳುವ ಕಾರ್ಯವನ್ನು ಮುಂದುವರಿಸಿದ್ದಾರೆ.

ಅಮೆರಿಕ-ಸೌದಿ ಹೂಡಿಕೆ ವೇದಿಕೆಯಲ್ಲಿ ಮಾತನಾಡಿದ ಟ್ರಂಪ್, “ಶಾಂತಿಪ್ರಿಯನಾಗುವುದು ಮತ್ತು ಒಗ್ಗೂಡಿಸುವವನಾಗುವುದು ನನ್ನ ದೊಡ್ಡ ಆಶಯ. ನನಗೆ ಯುದ್ಧ ಇಷ್ಟವಿಲ್ಲ. ಕೆಲವೇ ದಿನಗಳ ಹಿಂದೆ, ಭಾರತ ಮತ್ತು ಪಾಕಿಸ್ತಾನದ ನಡುವೆ ಹೆಚ್ಚುತ್ತಿರುವ ಹಿಂಸಾಚಾರವನ್ನು ನಿಲ್ಲಿಸಲು ನನ್ನ ಆಡಳಿತವು ಐತಿಹಾಸಿಕ ಕದನ ವಿರಾಮವನ್ನು ಯಶಸ್ವಿಯಾಗಿ ಮಧ್ಯಸ್ಥಿಕೆ ವಹಿಸಿತು ಎಂದು ಬಡಾಯಿ ಕೊಚ್ಚಿಕೊಂಡಿದ್ದಾರೆ.

"ನಮ್ಮ ಬಳಿ ವಿಶ್ವದ ಬಲಿಷ್ಠ ಸೇನೆ ಇದೆ. ಪ್ರಬಲ ಶಸ್ತ್ರಾಸ್ತ್ರಗಳಿವೆ. ಹೀಗಿದ್ದರೂ ನಾವು ಶಾಂತಿಯುತ ಆಡಳಿತಕ್ಕೆ ಹೆಚ್ಚು ಪ್ರಾಮುಖ್ಯತೆ ನೀಡುತ್ತೇವೆ," ಎಂದರು.

"ನಾನು ವ್ಯಾಪಾರವನ್ನು ದೊಡ್ಡ ಪ್ರಮಾಣದಲ್ಲಿ ಬಳಸಿಕೊಂಡೆ. ಒಪ್ಪಂದ ಮಾಡಿಕೊಳ್ಳೋಣ, ಸ್ವಲ್ಪ ವ್ಯಾಪಾರ ಮಾಡೋಣ ಎಂದು ನಾನು ಹೇಳಿದೆ. ಪರಮಾಣು ಕ್ಷಿಪಣಿಗಳನ್ನು ವ್ಯಾಪಾರ ಮಾಡಬೇಡಿ, ನೀವು ತುಂಬಾ ಸುಂದರವಾಗಿ ತಯಾರಿಸುವ ವಸ್ತುಗಳನ್ನು ವ್ಯಾಪಾರ ಮಾಡೋಣ,” ಎಂದು ಟ್ರಂಪ್ ಹೇಳಿದ್ದಾರೆ.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.