ಲೇಹ್, ಆಗಸ್ಟ್ 13: ಲಡಾಖ್‌ನ ಲೇಹ್‌ನಲ್ಲಿ ಗುರುವಾರ ಮುಂಜಾನೆ 5.5 ತೀವ್ರತೆಯ ಭೂಕಂಪ ಸಂಭವಿಸಿದೆ ಎಂದು ರಾಷ್ಟ್ರೀಯ ಭೂಕಂಪನ ಕೇಂದ್ರ ತಿಳಿಸಿದೆ.
ಗುರುವಾರ ಬೆಳಿಗ್ಗೆ ಸುಮಾರು 6.05ಕ್ಕೆ ಭೂಮಿಯಿಂದ 10 ಕಿಲೋಮೀಟರ್ ಆಳದಲ್ಲಿ ಭೂಕಂಪನ ಸಂಭವಿಸಿದೆ. ಭೂಕಂಪನದ ಕೇಂದ್ರವು ಉತ್ತರ ಅಕ್ಷಾಂಶ 36.881 ಡಿಗ್ರಿ ಹಾಗೂ ಪೂರ್ವ ರೇಖಾಂಶ 74.402 ಡಿಗ್ರಿಯಲ್ಲಿ ದಾಖಲಾಗಿದೆ ಎಂದು ರಾಷ್ಟ್ರೀಯ ಭೂಕಂಪನ ಕೇಂದ್ರ ತಿಳಿಸಿದೆ.
ಭೂಕಂಪನದ ತೀವ್ರತೆ 5.5ರಷ್ಟಿದ್ದರೂ, ಸದ್ಯಕ್ಕೆ ಯಾವುದೇ ಸಾವುನೋವು ಅಥವಾ ಭಾರಿ ಪ್ರಮಾಣದ ಆಸ್ತಿಪಾಸ್ತಿ ಹಾನಿಯಾಗಿರುವ ಕುರಿತು ವರದಿಯಾಗಿಲ್ಲ.
ಭೂಕಂಪನದ ಹಿನ್ನೆಲೆಯಲ್ಲಿ ಸ್ಥಳೀಯ ಪರಿಸ್ಥಿತಿಯ ಕುರಿತು ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗುತ್ತಿದೆ.