LIVE TV LocalCrimeNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes
National News

ಎಸ್‌ಐಆರ್‌ ನಿರ್ಧಾರಗಳಲ್ಲಿ ಭಿನ್ನಮತ ಇಲ್ಲ : ಚುನಾವಣಾ ಆಯೋಗ

ಹೊಸದಿಲ್ಲಿ, ಸೆ. 23 : (ಸಮದರ್ಶಿ ಸುದ್ದಿ) - ಮತದಾರರ ಪಟ್ಟಿ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ಸೇರಿದಂತೆ ಹಲವು ವಿಷಯಗಳಲ್ಲಿ ಇಬ್ಬರು ಚುನಾವಣಾ ಆಯುಕ್ತರು ಆಕ್ಷೇಪ ವ್ಯಕ್ತಪಡಿಸಿದ್ದಾರೆ ಎಂಬ ವರದಿಗಳ ಬೆನ್ನಲ್ಲೇ, ಭಾರತ ಚುನಾವಣಾ ಆಯೋಗ ತನ್ನ ಕಾರ್ಯವೈಖರಿಯನ್ನು ಸಮರ್ಥಿಸಿಕೊಂಡಿದೆ. ಆಯೋಗದೊಳಗೆ ವಿಭಿನ್ನ ಅಭಿಪ್ರಾಯಗಳು ವ್ಯಕ್ತವಾಗುವುದು ಸಹಜವಾಗಿದ್ದು, ಅಂತಿಮ ನಿರ್ಧಾರಗಳನ್ನು ಸರ್ವಾನುಮತದಿಂದ ಕೈಗೊಳ್ಳಲಾಗಿದೆ ಎಂದು ಸ್ಪಷ್ಟಪಡಿಸಿದೆ.

ಚುನಾವಣಾ ಆಯುಕ್ತರಾದ ಸುಖಬೀರ ಸಿಂಗ್ ಸಂಧು ಮತ್ತು ವಿವೇಕ ಜೋಶಿ ಕಳೆದ 10 ತಿಂಗಳಲ್ಲಿ ಕನಿಷ್ಠ 14 ಬಾರಿ ವಿವಿಧ ವಿಷಯಗಳ ಕುರಿತು ಲಿಖಿತ ಆಕ್ಷೇಪ ದಾಖಲಿಸಿದ್ದಾರೆ ಎಂಬ ವರದಿ ಪ್ರಕಟವಾಗಿತ್ತು. ಇದಕ್ಕೆ ಪ್ರತಿಕ್ರಿಯಿಸಿರುವ ಆಯೋಗ, ಅಂತಿಮ ನಿರ್ಧಾರಕ್ಕೂ ಮುನ್ನ ಸದಸ್ಯರು ಪ್ರಶ್ನೆಗಳನ್ನು ಎತ್ತುವುದು, ಸಲಹೆ ನೀಡುವುದು ಮತ್ತು ವಿಭಿನ್ನ ಅಭಿಪ್ರಾಯ ದಾಖಲಿಸುವುದು ಬಹುಸದಸ್ಯ ಸಂಸ್ಥೆಯ ಸಾಮಾನ್ಯ ಪ್ರಕ್ರಿಯೆ ಎಂದು ಹೇಳಿದೆ.

ಕಳೆದ ಒಂದು ವರ್ಷದಲ್ಲಿ ಎಸ್‌ಐಆರ್‌ ಸೇರಿದಂತೆ ಸುಮಾರು 40 ಹೊಸ ಉಪಕ್ರಮಗಳು ಮತ್ತು ಚುನಾವಣಾ ಸುಧಾರಣೆಗಳನ್ನು ಪೂರ್ಣ ಆಯೋಗ ಸರ್ವಾನುಮತದಿಂದ ಜಾರಿಗೆ ತಂದಿದೆ ಎಂದು ಆಯೋಗ ತಿಳಿಸಿದೆ.

ಮತದಾರರ ದತ್ತಾಂಶದ ಭದ್ರತೆ ಕುರಿತ ಆತಂಕಗಳನ್ನೂ ತಳ್ಳಿಹಾಕಿರುವ ಆಯೋಗ, ಇಸಿಐನೆಟ್‌ ಸೇರಿದಂತೆ ತನ್ನ ಡಿಜಿಟಲ್ ವ್ಯವಸ್ಥೆಗಳು ಕಟ್ಟುನಿಟ್ಟಿನ ಭದ್ರತಾ ನಿಯಂತ್ರಣದಡಿ ಕಾರ್ಯನಿರ್ವಹಿಸುತ್ತಿವೆ ಎಂದು ಹೇಳಿದೆ. ಮತದಾರರ ಹೆಸರು ಸೇರ್ಪಡೆ ಮತ್ತು ತೆಗೆದುಹಾಕುವ ಕುರಿತು ಚುನಾವಣಾ ನೋಂದಣಾಧಿಕಾರಿಗಳು ಕಾನೂನಿನಡಿ ತಮ್ಮ ಅಧಿಕಾರ ಚಲಾಯಿಸುತ್ತಾರೆ ಎಂದೂ ಸ್ಪಷ್ಟಪಡಿಸಿದೆ.

“ಆಂತರಿಕವಾಗಿ ವಿಭಿನ್ನ ಅಭಿಪ್ರಾಯಗಳು ವ್ಯಕ್ತವಾಗುವುದು ಸಹಜ. ಆದರೆ ಅಂತಿಮ ನಿರ್ಧಾರಗಳು ಸರ್ವಾನುಮತದಿಂದ ಕೈಗೊಳ್ಳಲಾಗಿದೆ” ಎಂಬುದು ಚುನಾವಣಾ ಆಯೋಗದ ನಿಲುವಾಗಿದೆ.

Author
Samadarshi News
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
‘ಡಿಜಿಟಲ್ ಅರೆಸ್ಟ್’ ಹೆಸರಿನಲ್ಲಿ 66 ವರ್ಷದ ಮಹಿಳೆಗೆ ₹16 ಲಕ್ಷ ವಂಚನೆಆಂಧ್ರದಲ್ಲಿ ರೈಲು ಢಿಕ್ಕಿ: ನಾಲ್ವರು ವಿದ್ಯಾರ್ಥಿಗಳ ಸಾವು, ಓರ್ವನ ಸ್ಥಿತಿ ಗಂಭೀರವಿಟಿಯು 26ನೇ ಘಟಿಕೋತ್ಸವ : 52,025 ವಿದ್ಯಾರ್ಥಿಗಳಿಗೆ ಪದವಿ, ಮೂವರಿಗೆ ಗೌರವ ಡಾಕ್ಟರೇಟ್ಅನುಭವ ಮಂಟಪ ಖಾಸಗಿ ಸಂಸ್ಥೆ, ಮಠಗಳಿಗೆ ನೀಡಬೇಡಿ: ಎಸ್.ಎಂ.ಜಾಮದಾರಜ್ಞಾನೇಶ ಕುಮಾರ ವಿರುದ್ಧ ರಾಷ್ಟ್ರಪತಿ ಕ್ರಮ ಕೈಗೊಳ್ಳಲಿ, ಇಲ್ಲದಿದ್ದರೆ ಸೇನೆ ಮುಂದೆ ಬರಲಿ: ಸಂಜಯ ರಾವತ್ಶಾಸಕ ಸ್ಥಾನಕ್ಕೆ ಯಶವಂತರಾಯಗೌಡ ಪಾಟೀಲ ರಾಜೀನಾಮೆಡಿಜೆ ಸದ್ದಿನ ವೇಳೆ ತರಗತಿಯಲ್ಲಿ ಕುಸಿದು 2ನೇ ತರಗತಿ ಬಾಲಕಿ ಸಾವುಎಸ್‌ಐಆರ್‌ ನಿರ್ಧಾರಗಳಲ್ಲಿ ಭಿನ್ನಮತ ಇಲ್ಲ : ಚುನಾವಣಾ ಆಯೋಗಜ್ಞಾನೇಶ ಕುಮಾರ ಅವರನ್ನು ಪದಚ್ಯುತಗೊಳಿಸಿ, ತನಿಖೆಗೆ ಆದೇಶಿಸಿ: ರಾಷ್ಟ್ರಪತಿಗೆ ಸಿದ್ದರಾಮಯ್ಯ ಆಗ್ರಹಎಸ್‌ಐಆರ್‌ ಪ್ರಕ್ರಿಯೆಯ ಕಾನೂನುಬದ್ಧತೆ ಬಗ್ಗೆ ಮಾಜಿ ಚುನಾವಣಾ ಆಯುಕ್ತ ಅಶೋಕ ಲವಾಸಾ ಪ್ರಶ್ನೆ