LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureEditorialBeautyRecipes

ಜಂತರ್‌ ಮಂತರ್‌ ಹೋರಾಟಕ್ಕೆ ಸುಪ್ರೀಂ ಕೋರ್ಟ ವಕೀಲರ ಬೆಂಬಲ

ಹೊಸದಿಲ್ಲಿ, ಜುಲೈ 23: ಶಿಕ್ಷಣ ವ್ಯವಸ್ಥೆಯಲ್ಲಿ ಸುಧಾರಣೆ ಹಾಗೂ ಪರೀಕ್ಷಾ ಅಕ್ರಮಗಳ ವಿರುದ್ಧ ಕಾಕ್ರೋಚ್‌ ಜನತಾ ಪಕ್ಷ (ಸಿಜೆಪಿ) ನಡೆಸುತ್ತಿರುವ ವಿದ್ಯಾರ್ಥಿ ಹೋರಾಟಕ್ಕೆ ಬೆಂಬಲ ಸೂಚಿಸಿ ಸುಪ್ರೀಂ ಕೋರ್ಟ್‌ನ ವಕೀಲರು ಗುರುವಾರ ಸಂವಿಧಾನದ ಪ್ರಸ್ತಾವನೆಯನ್ನು ಓದಿ ಪ್ರತಿಭಟನೆ ನಡೆಸಿದರು.

‘ಪ್ರಜಾಪ್ರಭುತ್ವ ಉಳಿಸಿ, ಸಂವಿಧಾನ ರಕ್ಷಿಸಿ’ ಎಂಬ ಘೋಷವಾಕ್ಯದಡಿ ಸುಪ್ರೀಂ ಕೋರ್ಟ್‌ ಆವರಣದ ಉದ್ಯಾನದ ಬಳಿ ಸೇರಿದ್ದ ವಕೀಲರು ಸಂವಿಧಾನದ ಪ್ರಸ್ತಾವನೆಯನ್ನು ಸಾಮೂಹಿಕವಾಗಿ ಓದಿದ ಬಳಿಕ ರಾಷ್ಟ್ರಗೀತೆ ಹಾಡಿದರು. ವಿದ್ಯಾರ್ಥಿಗಳ ಬೇಡಿಕೆಗಳಿಗೆ ನ್ಯಾಯ ದೊರಕಬೇಕು ಎಂಬ ಆಗ್ರಹವನ್ನು ಅವರು ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಹಿರಿಯ ವಕೀಲೆ ಇಂದಿರಾ ಜಯಸಿಂಗ್‌, ವಿದ್ಯಾರ್ಥಿಗಳ ಪರವಾಗಿ ಧ್ವನಿ ಎತ್ತುವುದು ವಕೀಲರ ನೈತಿಕ ಹಾಗೂ ಸಾಂವಿಧಾನಿಕ ಹೊಣೆಗಾರಿಕೆ ಎಂದು ಹೇಳಿದರು. ವಿದ್ಯಾರ್ಥಿಗಳಿಗೆ ನ್ಯಾಯ ದೊರಕಬೇಕೆಂಬ ಉದ್ದೇಶದಿಂದಲೇ ತಾವು ನ್ಯಾಯಾಲಯದ ಮುಂದೆ ನಿಂತಿದ್ದು, ಇದು ವಕೀಲರ ಹಕ್ಕಿನ ಹೋರಾಟವಲ್ಲ; ವಿದ್ಯಾರ್ಥಿಗಳ ಹಕ್ಕುಗಳಿಗಾಗಿ ನಡೆಸುತ್ತಿರುವ ಬೆಂಬಲದ ಅಭಿಯಾನವಾಗಿದೆ ಎಂದು ತಿಳಿಸಿದರು.

ಮೇ 3ರಂದು ನಡೆದ ನೀಟ್‌ ಪರೀಕ್ಷೆಯ ಪ್ರಶ್ನೆಪತ್ರಿಕೆ ಸೋರಿಕೆ ದೇಶಾದ್ಯಂತ ಭಾರಿ ವಿವಾದಕ್ಕೆ ಕಾರಣವಾಗಿತ್ತು. ಬಳಿಕ ರಾಷ್ಟ್ರೀಯ ಪರೀಕ್ಷಾ ಏಜೆನ್ಸಿ (ಎನ್‌ಟಿಎ) ಜೂನ್‌ 21ರಂದು ಮರುಪರೀಕ್ಷೆ ನಡೆಸಿತ್ತು. ಆದರೆ ಮರುಪರೀಕ್ಷೆಯ ಕೀ ಉತ್ತರಗಳು ಮತ್ತು ಫಲಿತಾಂಶದಲ್ಲಿ ಪ್ರಕಟವಾದ ಅಂಕಗಳ ನಡುವೆ ವ್ಯತ್ಯಾಸವಿದೆ ಎಂಬ ಆರೋಪಗಳು ವಿದ್ಯಾರ್ಥಿಗಳಿಂದ ಕೇಳಿಬಂದಿವೆ.

ಪ್ರಶ್ನೆಪತ್ರಿಕೆ ಸೋರಿಕೆಯಿಂದ ಮನನೊಂದು ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿಗಳ ಕುಟುಂಬಗಳಿಗೆ ಪರಿಹಾರ ನೀಡಬೇಕು, ಪ್ರಕರಣದ ನೈತಿಕ ಹೊಣೆ ಹೊತ್ತು ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ ರಾಜೀನಾಮೆ ನೀಡಬೇಕು ಹಾಗೂ ಅಕ್ರಮದಲ್ಲಿ ಭಾಗಿಯಾದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ಸಿಜೆಪಿ ಜೂನ್‌ 20ರಿಂದ ಜಂತರ್‌ ಮಂತರ್‌ನಲ್ಲಿ ನಿರಂತರ ಪ್ರತಿಭಟನೆ ನಡೆಸುತ್ತಿದೆ.

Author
A B Dharwadkar
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ದೇಶದಲ್ಲಿ ಶುದ್ಧ ಪೆಟ್ರೋಲ್ ಮರುಪೂರೈಕೆ ಇಲ್ಲ; ಇ–20 ಮುಂದುವರಿಕೆನೀಟ್‌ ಅಕ್ರಮ ವಿರುದ್ಧ ಮಹಾರಾಷ್ಟ್ರ ಬಂದ್‌ಗೆ ವ್ಯಾಪಕ ಪ್ರತಿಕ್ರಿಯೆ; ಸಾವಿರಾರು ಕಾರ್ಯಕರ್ತರ ವಶ, ಹಲವು ಕಡೆ ಪ್ರತಿಭಟನೆಪ್ರಧಾನಿ ನಿವಾಸದ ಪ್ರತಿಭಟನೆ ಬದಲು ವಿದ್ಯಾರ್ಥಿಗಳ ಜೊತೆ ನಿಲ್ಲಬೇಕಿತ್ತು: ಕಾಂಗ್ರೆಸ್ ನಡೆ ಬಗ್ಗೆ ವಾಂಗಚುಕ್‌ ಪತ್ನಿ ಟೀಕೆಸಿಜೆಪಿ ಪ್ರತಿಭಟನೆಗೆ ಅಡ್ಡಿಪಡಿಸಲು ಬಿಜೆಪಿಯಿಂದ ‘ಗೂಂಡಾಗಳ’ ಬಳಕೆ: ಅಭಿಜೀತ ದೀಪ್ಕೆ ಆರೋಪನೀಟ್ ವಿವಾದಕ್ಕೆ ಉಭಯ ಸದನ ಕಲಾಪ ನಾಲ್ಕನೇ ದಿನವೂ ಮುಂದೂಡಿಕೆಮಳೆ ಹನಿಗಳೊಂದಿಗೆ ಅರಳಿದ ಅಳ್ನಾವರ: ಹಸಿರಿನ ಸೊಬಗು, ರೈತರ ಸಂಭ್ರಮಪ್ರಧಾನಿ ನಿವಾಸದ ಎದುರಿನ ಪ್ರತಿಭಟನೆ ಖಂಡಿಸಿ ಬಿಜೆಪಿಯಿಂದ ಮೆರವಣಿಗೆಕಾಮನ್‌ವೆಲ್ತ್ ಕ್ರೀಡಾಕೂಟಕ್ಕೆ ಬೆಳಗಾವಿಯ ಸ್ವಾತಿಕ್ ಪಾಟೀಲ ಆಯ್ಕೆನೀಟ್‌ ಅಕ್ರಮ ಖಂಡಿಸಿ ಬೆಳಗಾವಿಯಲ್ಲಿ ವಿದ್ಯಾರ್ಥಿಗಳ ಪ್ರತಿಭಟನೆ; ಪ್ರಧಾನ್‌ ರಾಜೀನಾಮೆಗೆ ಆಗ್ರಹವಿದ್ಯಾರ್ಥಿಗಳ ರಕ್ಷಣೆಗೆ ಪೊಲೀಸ್ ವ್ಯಾನ್‌ ತಡೆದ ಯುವತಿ; ರಿಯಾ ಅಹಿರ್‌ ಧೈರ್ಯಕ್ಕೆ ಮೆಚ್ಚುಗೆ