ePaper
PoliticsBusinessEducationTechEntertainmentSportsEditorialHealthHealthTravelingBeauty TipsRecipes Tips

800 ಕೋಟಿ ತಲುಪಿದ ಜಗತ್ತಿನ ಜನಸಂಖ್ಯೆ 

ಹೊಸದಿಲ್ಲಿ : ಈ ವರ್ಷದ ವಿಶ್ವ ಜನಸಂಖ್ಯಾ ದಿನದಂದು ವಿಶ್ವಸಂಸ್ಥೆ ಬಿಡುಗಡೆ ಮಾಡಿದ ವರದಿಯಲ್ಲಿ ವಿಶ್ವದ ಜನಸಂಖ್ಯೆಯು ನವೆಂಬರ್ 15, 2022ರಂದು 8 ಶತಕೋಟಿ ತಲುಪಲಿದೆ.

ಈ ಪ್ರಕಾರ 2023ರಲ್ಲಿ ಭಾರತವು ಚೀನಾವನ್ನು ಹಿಂದಿಕ್ಕೆ ವಿಶ್ವದ ಅತಿ ಹೆಚ್ಚು ಜನ ಸಂಖ್ಯೆ ಹೊಂದಿರುವ ದೇಶವಾಗಲಿದೆ. ಇದು ಮಾನವ ಅಭಿವೃದ್ಧಿಯಲ್ಲಿ ಒಂದು ಮೈಲಿಗಲ್ಲು ಎಂದು ಪರಿಗಣಿಸುತ್ತದೆ.

ವಿಶ್ವಸಂಸ್ಥೆಯ ಪ್ರಕಾರ, ಜಾಗತಿಕ ಜನಸಂಖ್ಯೆಯು 2030 ರಲ್ಲಿ ಸುಮಾರು 8.5 ಶತಕೋಟಿ, 2050 ರಲ್ಲಿ 9.7 ಶತಕೋಟಿ ಮತ್ತು 2080 ರಲ್ಲಿ ಸುಮಾರು 10.4 ಶತಕೋಟಿ ಬೆಳೆಯಬಹುದು ಎಂದು ಅಂದಾಜಿಸಲಾಗಿದೆ.

ವಿಶ್ವ ಜನಸಂಖ್ಯಾ ದಿನದಂದು ಬಿಡುಗಡೆಯಾದ ವಾರ್ಷಿಕ ವಿಶ್ವ ಜನಸಂಖ್ಯೆಯ ಪ್ರಾಸ್ಪೆಕ್ಟ್ ವರದಿಯು ಜಾಗತಿಕ ಜನಸಂಖ್ಯೆಯು 1950 ರಲ್ಲಿ ಇದ್ದ 2.5 ಶತಕೋಟಿ ಜಾಗತಿಕ ಜನಸಂಖ್ಯೆಗಿಂತ ಮೂರು ಪಟ್ಟು ಹೆಚ್ಚು ಎಂದು ವಿಶ್ವಸಂಸ್ಥೆ ಅಂದಾಜಿಸಿದೆ.

1960 ರ ದಶಕದ ಆರಂಭದಲ್ಲಿ ಒಂದು ಉತ್ತುಂಗದ ನಂತರ, ವಿಶ್ವದ ಜನಸಂಖ್ಯೆ ಬೆಳವಣಿಗೆಯ ದರವು ದಿಢೀರ್ ಕಡಿಮೆಯಾಗಿದೆ. ವಾರ್ಷಿಕ ಜನಸಂಖ್ಯೆ ಬೆಳವಣಿಗೆ ದರ 1962 ರಿಂದ 1965ರ ವರೆಗೆ ಗರಿಷ್ಠ ಶೇ. 2.1 ಇತ್ತು. ಅದು 2020 ರಲ್ಲಿ ಶೇಕಡಾ 1 ಕ್ಕಿಂತ ಕಡಿಮೆಯಾಗಿದೆ.

2050ರ ವೇಳೆಗೆ ಆ ಅಂಕಿ ಅಂಶವು ಸುಮಾರು ಶೇ. 0.5ಕ್ಕೆ ಕುಸಿಯಬಹುದು. ಏಕೆಂದರೆ ಫಲವತ್ತತೆ ದರಗಳಲ್ಲಿನ ನಿರಂತರ ಕುಸಿತ ಜನಸಂಖ್ಯೆ ಬೆಳವಣಿಗೆ ದರ ಕಡಿಮೆಯಾಗಲು ಕಾರಣವಾಗಿದೆ.

2022 ರಲ್ಲಿ, ಎರಡು ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ಪ್ರದೇಶಗಳು ಏಷ್ಯಾದಲ್ಲಿವೆ. ಅವುಗಳೆಂದರೆ ಪೂರ್ವ ಮತ್ತು ಆಗ್ನೇಯ ಏಷ್ಯಾದಲ್ಲಿ 2.3 ಶತಕೋಟಿ ಜನರಿದ್ದು ಮಧ್ಯ ಮತ್ತು ದಕ್ಷಿಣ ಏಷ್ಯಾದಲ್ಲಿ 2.1 ಶತಕೋಟಿ ಜನರಿದ್ದಾರೆ. ಚೀನಾ ಮತ್ತು ಭಾರತ, ತಲಾ 1.4 ಶತಕೋಟಿಗಿಂತ ಹೆಚ್ಚು ಜನಸಂಖ್ಯೆಯನ್ನು ಹೊಂದಿವೆ.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.