ಹೊಸದಿಲ್ಲಿ, ಸೆ. 22 : ರೈಲಿನಲ್ಲಿ ಪ್ರಯಾಣಿಸುತ್ತಿದ್ದ ದಂಪತಿಯ ವರ್ತನೆಗೆ ಸಹ ಪ್ರಯಾಣಿಕ ಮಹಿಳೆಯೊಬ್ಬರು ತೀವ್ರ ಆಕ್ಷೇಪ ವ್ಯಕ್ತಪಡಿಸಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ವಿಡಿಯೋದಲ್ಲಿ ದಂಪತಿ ರೈಲಿನ ಆಸನದಲ್ಲಿ ಪರಸ್ಪರ ಒರಗಿಕೊಂಡು ಮಲಗಿರುವುದು ಕಂಡುಬರುತ್ತದೆ. ಇದನ್ನು ಗಮನಿಸಿದ ಮಹಿಳೆಯೊಬ್ಬರು ಅವರ ವರ್ತನೆಯನ್ನು ಪ್ರಶ್ನಿಸಿ, ಸಾರ್ವಜನಿಕ ಸ್ಥಳದಲ್ಲಿ ಇತರ ಪ್ರಯಾಣಿಕರಿಗೆ ಮುಜುಗರವಾಗುವ ರೀತಿಯಲ್ಲಿ ನಡೆದುಕೊಳ್ಳಬಾರದು ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ.
‘ರೈಲಿನಲ್ಲಿ ಮಕ್ಕಳು, ಮಹಿಳೆಯರು ಸೇರಿದಂತೆ ಹಲವು ಪ್ರಯಾಣಿಕರು ಇರುತ್ತಾರೆ. ಸಾರ್ವಜನಿಕ ಸ್ಥಳದ ಸಭ್ಯತೆಯನ್ನು ಕಾಪಾಡಬೇಕು’ ಎಂಬರ್ಥದಲ್ಲಿ ಮಹಿಳೆ ದಂಪತಿಗೆ ತಿಳಿಹೇಳುತ್ತಿರುವುದು ವಿಡಿಯೋದಲ್ಲಿ ಕಂಡುಬರುತ್ತದೆ. ಈ ವೇಳೆ ಹತ್ತಿರದಲ್ಲಿದ್ದ ಇತರ ಪ್ರಯಾಣಿಕರು ಘಟನೆಯನ್ನು ಗಮನಿಸುತ್ತಿರುವುದೂ ದಾಖಲಾಗಿದೆ.
ಘಟನೆ ನಡೆದ ರೈಲು, ಮಾರ್ಗ ಹಾಗೂ ದಂಪತಿಯ ಗುರುತಿನ ಕುರಿತು ಸ್ಪಷ್ಟ ಮಾಹಿತಿ ಲಭ್ಯವಾಗಿಲ್ಲ. ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ದಂಪತಿಯ ವರ್ತನೆ ಹಾಗೂ ಅದನ್ನು ಪ್ರಶ್ನಿಸಿದ ಮಹಿಳೆಯ ನಡೆ ಕುರಿತು ನೆಟ್ಟಿಗರಿಂದ ಪರ–ವಿರೋಧ ಪ್ರತಿಕ್ರಿಯೆಗಳು ವ್ಯಕ್ತವಾಗಿವೆ.