ಬೆಂಗಳೂರು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಭಾವಚಿತ್ರವಿರುವ ಪೇ ಸಿಎಂ ಎಂದು ಪೋಸ್ಟರ್ ತಯಾರಿಸಿ ಕಾಂಗ್ರೆಸ್ ಬೆಂಗಳೂರಿನ ಗೋಡೆಗಳಿಗೆ ಅಂಟಿಸಿದ್ದರು.
ಈಗ ಕಾಂಗ್ರೆಸ್ ಮುಂದುವರೆದು ಪೇ ಸಿಎಂ ತರಹ ಸಚಿವರಾದ ಅಶ್ವತ್ಥ ನಾರಾಯಣ, ಡಾ. ಕೆ ಸುಧಾಕರ, ಶಶಿಕಲಾ ಜೊಲ್ಲೆ ಮತ್ತು ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಅವರ ಕ್ಯೂಆರ್ ಕೋಡ್ ಬಿಡುಗಡೆ ಮಾಡಿದೆ. ಪೇ ಸಿಎಂ ಪೋಸ್ಟರ್ನಲ್ಲೇ ಸಚಿವರ ಭಾವಚಿತ್ರದ ಕ್ಯೂಆರ್ ಕೋಡ್ಗಳನ್ನು ಬಿಡುಗಡೆ ಮಾಡಿದೆ.
ಕಾಂಗ್ರೆಸ್ ಮತ್ತು ಬಿಜೆಪಿ ರಾಷ್ಟ್ರೀಯ ಪಕ್ಷಗಳು ಭ್ರಷ್ಟಾಚಾರ ವಿಚರವಾಗಿ ಕೆಸರೆಚಾಟ ಶುರುಹಚ್ಚಿಕೊಂಡಿವೆ. ಕಾಂಗ್ರೆಸ್ ಪೇಸಿಎಂ ಅಭಿಯಾನ ಪ್ರಾರಂಭಿಸಿದಾಗಿನಿಂದಲು ಬಿಜೆಪಿ ಸಂಕಟ ಶುರುವಾಗಿದೆ.