ಮುಂಬಯಿ: ಶಾಕೂಕ ಖಾನ್ ನಟನೆಯ ʼಪಠಾಣʼ ಚಿತ್ರದ ʼಬೇಷರಂ ರಂಗ್ʼ ಹಾಡಿನ ಬಳಿಕ ಮತ್ತೊಂದು ಹಾಡು ಬಿಡುಗಡೆ ಮಾಡಲು ಚಿತ್ರ ತಂಡ ತಯಾರಾಗಿದೆ.
ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಅದರ ಚಿತ್ರ ಬಿಡುಗಡೆ ಮಾಡಿ, ಹಾಡಿನ ಬಿಡುಗಡೆ ದಿನಾಂಕ ತಿಳಿಸಿದೆ. ಶಾರೂಕ ಖಾನ್ ಉದ್ದ ಕೂದಲು ಬಿಟ್ಟುಕೊಂಡು, ಸನ್ ಗ್ಲಾಸ್ ಹಾಕಿಕೊಂಡು ರಫ್ – ಟಫ್ ಲುಕ್ ನಲ್ಲಿ ಕಾಣಿಸಿಕೊಂಡಿದ್ದಾರೆ. ದೀಪಿಕಾ ಪಡುಕೋಣೆ ಹಾಟ್ ಲುಕ್ ನಲ್ಲಿ ಶಾರೂಕ ಪಕ್ಕ ನಿಂತುಕೊಂಡಿರುವ ಪೋಸ್ಟರನ್ನು ಚಿತ್ರ ತಂಡ ಬಿಡುಗಡೆ ಮಾಡಿದೆ.
ʼಝೂಮ್ ಜೋ ಪಠಾಣʼ ಪಠಾಣ ಸಿನಿಮಾದ ಎರಡನೇ ಹಾಡು ಡಿ.22 ರಂದು ಬಿಡುಗಡೆ ಆಗಲಿದೆ ಎಂದು ಸೋಶಿಯಲ್ ಮೀಡಿಯಾದಲ್ಲಿ ಚಿತ್ರ ತಂಡ ಮಾಹಿತಿ ಹಂಚಿಕೊಂಡಿದೆ.
ಈ ಹಾಡು ನಾಯಕನ ಸುತ್ತ ಸಾಗುತ್ತದೆ ಎಂದು ನಿರ್ದೇಶಕ ಸಿದ್ಧಾರ್ಥ ಆನಂದ ಹೇಳಿದ್ದಾರೆ. ಹಿಂದಿ, ತಮಿಳು ಹಾಗೂ ತೆಲುಗು ಭಾಷೆಯಲ್ಲಿ 2023 ರ ಜನವರಿ 25 ರಂದು ಸಿನಿಮಾ ತೆರೆಗೆ ಬರಲಿದೆ. ಶಾರೂಕ, ದೀಪಿಕಾ, ಜಾನ್ ಅಬ್ರಹಾಂ ಸಿನಿಮಾದ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ.
ಇತ್ತೀಚೆಗೆ ʼಪಠಾಣʼ ಸಿನಿಮಾದ ʼಬೇಷರಂ ರಂಗ್ʼ ಹಾಡಿಗೆ ಭಾರೀ ವಿರೋಧ ವ್ಯಕ್ತವಾಗಿತ್ತು. ಕೇಸರಿ ಬಣ್ಣವನ್ನು ಹಾಡಿನಲ್ಲಿ ಅವಮಾನಿಸಲಾಗಿದೆ ಎಂದು ಆರೋಪ ಕೇಳಿ ಬಂದಿತ್ತು.
EXCLUSIVE: #JhoomeJoPathaan featuring #ShahRukhKhan & #DeepikaPadukone out on December 22. #SiddharthAnand says, “The song embodies the personality traits of this super spy #Pathaan who has irresistible swagger that is infectious.”https://t.co/tUjvGnpVq5
— Himesh (@HimeshMankad) December 20, 2022