ಬಾಗಲಕೋಟ: ಕಾರಿನ ಗ್ಲಾಸ್ ಒಡೆದು ಹಣ ಹಾಗೂ ವಸ್ತುಗಳನ್ನು ದೋಚಿದ ಘಟನೆ ಜಿಲ್ಲೆಯ ಇಳಕಲ್ ಪಟ್ಟಣದಲ್ಲಿ ನಡೆದಿದೆ.
ವಸತಿ ಗೃಹದ ಎದುರು ನಿಲ್ಲಿಸಿದ್ದ ಕಾರಿನಲ್ಲಿ ಹಾಡಹಗಲೇ ಕಳ್ಳತನ ಮಾಡಿ, ಹಣ ಹಾಗೂ ಇತರ ವಸ್ತುಗಳನ್ನು ದೋಚಿಕೊಂಡು ಪರಾರಿ ಆಗಿದ್ದಾರೆ.
ಕಾರಿನ ಮುಂಭಾಗದ ಗಾಜು ಒಡೆದು 1 ಲಕ್ಷ 59 ಸಾವಿರ 500 ರೂ. ನಗದು ಹಣ ಹಾಗೂ ನಾಲ್ಕು ಎಟಿಎಂ, ಎರಡು ಪ್ಯಾನ್ ಕಾರ್ಡ, ಸ್ಮಾರ್ಟ ಫೋನ್ ಇದ್ದ ಬ್ಯಾಗ್ ಕಳ್ಳತನ ಮಾಡಿದ್ದಾರೆ. ಮಹಾರಾಷ್ಟ್ರ ಮೂಲದ ವಾಹನ ಇದಾಗಿದ್ದು, ರತ್ನಗಿರಿ ಜಿಲ್ಲೆ ಕರವಂಚವಾಡಿ ಗ್ರಾಮದ ಬಜರಂಗ ಸುವಾಲಾಲ ರಾಚೋರಿ ಎನ್ನುವರಿಗೆ ಸೇರಿದ ವಾಹನ ಎಂದು ತಿಳಿದು ಬಂದಿದೆ.
ಕಳ್ಳ ಕಾರಿನ ಗಾಜು ಒಡೆಯುವುದು. ಬಳಿಕ ಹಣದ ಬ್ಯಾಗ್ ಎಗರಿಸಿಕೊಂಡು ಹೋಗುವ ದೃಶ್ಯ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಇಳಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.