ರಾಯಚೂರು: ಕಾಂಗ್ರೆಸ್ ಹಗರಣಗಳನ್ನು ಮುಂದಿನ ಅಧಿವೇಶನದಲ್ಲಿ ಬಯಲು ಮಾಡುತ್ತೇವೆ ಎಂದು ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರು ವಾಗ್ದಾಳಿ ನಡೆಸಿದ್ದಾರೆ.
ರಾಯಚೂರು ತಾಲೂಕಿನ ಗಿಲ್ಲೆಸುಗೂರಿನಲ್ಲಿ ನಡೆದ ಜನ ಸಂಕಲ್ಪ ಯಾತ್ರೆಯಲ್ಲಿ ಮಾತನಾಡಿದ ಅವರು, ತನಿಖೆ ಮಾಡಿಸಿ ನಿಮ್ಮನ್ನು ಎಲ್ಲಿ ನಿಲ್ಲಿಸಬೇಕೋ ಅಲ್ಲಿಯೇ ನಿಲ್ಲಿಸುತ್ತೇವೆ. ನ್ಯಾಷನಲ್ ಹೆರಾಲ್ಡ ಹಗರಣ ಗೊತ್ತಿಲ್ಲವೇ.. ಹಗರಣವನ್ನೇ ಮಾಡದ ಪ್ರಧಾನಿ ಮೋದಿ ಬಗ್ಗೆ ಮಾತನಾಡ್ತೀರಾ.. 25 ಲಕ್ಷ ಮೌಲ್ಯದ ಹ್ಯೂಬ್ಲೆಟ್ ವಾಚ್ ಕೊಟ್ಟಿದ್ಯಾರು ಗೊತ್ತಿಲ್ವಾ ಎಂದು ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ಮಾಡಿದರು.
ರಾಯಚೂರು ಜಿಲ್ಲೆಗೆ ಏಮ್ಸ ಕೊಡುವುದಾಗಿ ಘೋಷಣೆ ಮಾಡುತ್ತೇವೆ. ಏಮ್ಸ ಕೊಟ್ಟರೆ, ಐದು ಕ್ಷೇತ್ರ ಗೆಲ್ಲಿಸಿ ಕೊಡತಿವಿ ಅಂತ ಹೇಳಿದ್ದಿರಾ. ಹಾಗೇನೆ ಇಂದೇ ರಾಯಚೂರಿಗೆ ಏಮ್ಸ ಘೋಷಣೆ ಮಾಡುತ್ತೇವೆ. ಮುಖ್ಯಮಂತ್ರಿ ಬೊಮ್ಮಾಯಿ ಏಮ್ಸ ಘೋಷಣೆ ಮಾಡಲಿದ್ದಾರೆ. 150 ಸ್ಥಾನ ಗೆದ್ದು ಮತ್ತೆ ಅಧಿಕಾರಕ್ಕೆ ಬರುತ್ತೇವೆ ಎಂದರು.