ಅಹಮದಾಬಾದ, ೬- ಗುಜರಾತ್ ದೇವಸ್ಥಾನವೊಂದರಲ್ಲಿ ಸ್ಥಾಪಿಸಲಾದ ಆನೆಯ ಪ್ರತಿಮೆಯ ಅಡಿಯಲ್ಲಿ ವ್ಯಕ್ತಿಯೊಬ್ಬ ಸಿಲುಕಿಕೊಂಡ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡ್ತಿದೆ.
ಆನೆ ಪ್ರತಿಮೆಯ ಅಡಿಯಿಂದ ಹೊರ ಬರಲು ಮುಂದಾದ ವೇಳೆ ಸಿಲುಕಿಕೊಂಡು ಅದರಿಂದ ಹೊರಬರಲು ಒದ್ದಾಡಿದ್ದಾನೆ. ಆದರೆ ಇದು ಮೇಲ್ನೋಟಕ್ಕೆ ಧಾರ್ಮಿಕ ಆಚರಣೆಯಂತೆ ಗೋಚರಿಸುತ್ತದೆ. ಯಾಕೆಂದರೆ ವ್ಯಕ್ತಿಯೊಬ್ಬ ಆನೆ ಪ್ರತಿಮೆಯ ಅಡಿಯಿಂದ ಹೊರಬರಲು ಒದ್ದಾಡುತ್ತಿರುವಾಗ ದೇವಾಲಯದ ಅರ್ಚಕರು ಆತನಿಗೆ ಹೊರಬರಲು ಸಹಾಯ ಮಾಡುವುದನ್ನು ನೋಡಬಹುದು. ಜೊತೆಗೆ ದೇವಾಲಯಕ್ಕೆ ಭೇಟಿ ನೀಡಿದ ಇತರರೂ ಸಹ ಸಲಹೆಗಳನ್ನು ನೀಡಿದ್ದಾರೆ.
ಆದಾಗ್ಯೂ ಆತ ತನ್ನ ಪ್ರಯತ್ನದಲ್ಲಿ ಸಫಲನಾಗಿ ಆನೆ ಪ್ರತಿಮೆಯ ಅಡಿಯಿಂದ ಹೊರಬಂದನೇ ಎಂಬುದು ವಿಡಿಯೋದಲ್ಲಿ ಸಸ್ಪೆನ್ಸ್ ಆಗೇ ಉಳಿದಿದೆ.
ಭಾರತದಲ್ಲಿ ಹಲವು ಧಾರ್ಮಿಕ ಆಚರಣೆಗಳಿದ್ದು ಕೆಲವು ಕಡೆ ಆನೆಯ ವಿಗ್ರಹದ ಕೆಳಗೆ ತೂರಿ ಭಗವಂತನನ್ನು ಪ್ರಾರ್ಥಿಸುವುದನ್ನು ನೋಡಬಹುದು.
India, a portrait in one video. pic.twitter.com/1r3BFlRyX7
— churumuri (@churumuri) December 5, 2022