ಜಗತ್ತಿನಲ್ಲಿ ತಾಯಿಯ ಪ್ರೀತಿಗಿಂತ ದೊಡ್ಡದು ಯಾವುದೂ ಇಲ್ಲ ಎಂದು ಹೇಳಲಾಗುತ್ತದೆ. ತನಗೆ ಎಷ್ಟೇ ಕಷ್ಟವಾದರೂ ಮಕ್ಕಳಿಗೆ ಎಳ್ಳಷ್ಟು ಕಷ್ಟವಾಗಲು ತಾಯಿ ಬಿಡಳು. ಅಂಥದ್ದೇ ಒಂದು ಹೃದಯ ಮೆಚ್ಚುವ ವಿಡಿಯೋ ವೈರಲ್ ಆಗಿದ್ದು, ಈ ವಿಡಿಯೋ ನೋಡಿ ಎಲ್ಲರೂ ಭಾವುಕರಾಗುವಂತಾಗಿದೆ.
ಮಳೆಯಲ್ಲಿ ಮಹಿಳೆಯೊಬ್ಬರು ತನ್ನ ಮಗಳನ್ನು ಹೆಗಲ ಮೇಲೆ ಹೊತ್ತುಕೊಂಡು ಹೋಗುವ ಹೃದಯಸ್ಪರ್ಶಿ ವಿಡಿಯೋ ಇದಾಗಿದೆ. ಇದು ಹೊಸ ವಿಷಯವಲ್ಲದಿದ್ದರೂ ಹೆಗಲ ಮೇಲೆ ಮಗಳನ್ನು ಕುಳ್ಳರಿಸಿಕೊಂಡಿರುವ ಅಮ್ಮ, ಆಕೆ ಒದ್ದೆಯಾಗದಂತೆ ಕೊಡೆ ಹಿಡಿದಿರುವುದು ಎಲ್ಲರ ಮನ ಗೆದ್ದಿದೆ.
ಈ ಅದ್ಭುತ ವಿಡಿಯೋವನ್ನು Zindagi Gulzar Hai ಎಂಬ ಪುಟವು ಹಂಚಿಕೊಂಡಿದೆ, ಈ ವಿಡಿಯೋ ಇದಾಗಲೇ 37 ಸಾವಿರ ವೀಕ್ಷಣೆಗಳನ್ನು ಹೊಂದಿದೆ. 18 ಸೆಕೆಂಡ್ಗಳ ವಿಡಿಯೋ ಇದಾಗಿದೆ. ಮಗಳು ಮಳೆಯಲ್ಲಿ ನೆನೆಯಬಾರದೆಂದು ಒಂದು ಕೈಯಲ್ಲಿ ಕೊಡೆಯನ್ನೂ ಹಿಡಿದಿರುವುದು ಅದ್ಭುತ, ತಾಯಿಯ ಪ್ರೀತಿ ಎಂದರೆ ಇದೆ ಅಲ್ಲವೆ ಎಂದು ಹಲವರು ಕಮೆಂಟ್ನಲ್ಲಿ ಹೇಳಿದ್ದಾರೆ.
मां तो आखिर मां होती है ❤️🙏 pic.twitter.com/bpY7J8sJMK
— ज़िन्दगी गुलज़ार है ! (@Gulzar_sahab) November 26, 2022
Maa k baare me kya hi bola jaye. ❤️❤️❤️
— Imam Swagger (@SwaggerImam) November 27, 2022
😍💖💖💖
— 🌺🌺Anum🌺🌺 NO DM ❤️🔥 (@Anum76237871) November 26, 2022