ಈಗಿನ ಕಾಲದಲ್ಲಿ ಉದ್ಯೋಗ, ಒತ್ತಡದ ಜೀವನದಲ್ಲಿ ಆರೋಗ್ಯವನ್ನು ಸಂಪೂರ್ಣವಾಗಿ ನಿರ್ಲಕ್ಷಿಸಲಾಗುತ್ತಿದೆ. ನಿಯಮಿತವಾಗಿ ವ್ಯಾಯಾಮ, ಹಿತ-ಮಿತವಾದ ಆಹಾರ ಸೇವನೆಯ ಕೊರತೆಯಿಂದಾಗಿ ಸಮಸ್ಯೆ ಉಲ್ಬಣಿಸುತ್ತಿದೆ.
ಉತ್ತಮ ಆರೋಗ್ಯ ಹೊಂದಲು ಕಷ್ಟಪಡಬೇಕಾಗಿಲ್ಲ. ನಿಯಮಿತವಾಗಿ ನೆಲ್ಲಿಕಾಯಿ ಹಾಗೂ ಜೇನುತುಪ್ಪ ಸೇವನೆ ಮಾಡಿದ್ರೆ ಸಾಕು. ಹೌದು, ನೆಲ್ಲಿಕಾಯಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಹಾಗಾಗಿ ರೋಗದಿಂದ ನಮ್ಮ ದೇಹ ದೂರವಿರುತ್ತದೆ.
ನೆಲ್ಲಿಕಾಯಿಯನ್ನು ಜೇನುತುಪ್ಪದ ಜೊತೆ ಬೆರೆಸಿ ಸೇವನೆ ಮಾಡುವುದರಿಂದ ಆರೋಗ್ಯ ವೃದ್ಧಿಯಾಗಲಿದೆ. ಪ್ರತಿದಿನ ಬೆಳಿಗ್ಗೆ ಇದ್ರ ಸೇವನೆ ಮಾಡುವುದು ಒಳ್ಳೆಯದು. ಮೊದಲು 7-8 ನೆಲ್ಲಿಕಾಯಿಯನ್ನು ನೀರಿನಲ್ಲಿ ಸ್ವಚ್ಛವಾಗಿ ತೊಳೆದುಕೊಳ್ಳಿ. ಈ ರಸ 15 ಮಿಲಿ ಲೀಟರ್ ಇರಲಿ. ಇದಕ್ಕೆ 15 ಗ್ರಾಂ ಜೇನುತುಪ್ಪ ಬೆರೆಸಿ ಸೇವನೆ ಮಾಡಿ. ಇದ್ರ ಸೇವನೆ ನಂತ್ರ 2-3 ಗಂಟೆ ಏನೂ ಆಹಾರ ಸೇವನೆ ಮಾಡಬೇಡಿ. ಬಿಸಿ ನೀರನ್ನು ಮಾತ್ರ ಕುಡಿಯಬಹುದು. ಇದನ್ನು ಕುಡಿಯುವ ಮೊದಲು ಚಿಕ್ಕಪುಟ್ಟ ವ್ಯಾಯಾಮ ಮಾಡಿದ್ದರೆ ಮತ್ತೂ ಒಳ್ಳೆಯದು. ಪ್ರತಿದಿನ ಈ ಜ್ಯೂಸ್ ಸೇವನೆ ಮಾಡುವುದರಿಂದ ನಿಮಗೆ ಪರಿಣಾಮ ತಿಳಿಯುತ್ತದೆ.
ನೆಲ್ಲಿಕಾಯಿ ಸೇವನೆಯಿಂದ ಕೀಲು ನೋವು ಕಡಿಮೆಯಾಗುತ್ತದೆ. ಎಲುಬುಗಳು ಪ್ರಬಲವಾಗಿ ಶಕ್ತಿ ಪಡೆಯುತ್ತವೆ.
ತಿಂಗಳ ಮೂರು ದಿನ ಮಹಿಳೆಯರು ಅನುಭವಿಸುವ ನೋವು ದೂರವಾಗುವ ಜೊತೆಗೆ ನಿಯಮಿತವಾಗಿ ಮುಟ್ಟಾಗುತ್ತದೆ.
ಚಯಾಪಚಯವನ್ನು ಸರಿಗೊಳಿಸಿ ತೂಕವನ್ನು ಕಡಿಮೆ ಮಾಡುತ್ತದೆ.
ಜೇನು ತುಪ್ಪದಲ್ಲಿ ಬೆರೆಸಿ ಸೇವನೆ ಮಾಡುವುದರಿಂದ ವಾಂತಿ ನಿಲ್ಲುತ್ತದೆ.
ಕಣ್ಣುಗಳಿಗೆ ಕೂಡ ನೆಲ್ಲಿಕಾಯಿ ಬಹಳ ಒಳ್ಳೆಯದು. ಇದು ಕಣ್ಣಿನ ಕಾಂತಿಯನ್ನು ಹೆಚ್ಚಿಸುತ್ತದೆ.