ಬೆಳಗಾವಿ, 1: ಬೆಳಗಾವಿ ತಾಲ್ಲೂಕಿನ ಸುಳಗಾ ಗ್ರಾಮದ ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿ ಏರಿಸಲಾಗಿದ್ದ ಕನ್ನಡ ಧ್ವಜವನ್ನು ಹೊಸ ವರ್ಷಾಚರಣೆಯ ಸಂದರ್ಭದಲ್ಲಿ ಸುಡಲಾಗಿದೆ.
ಬಾವುಟದ ಕೆಳಭಾಗದ ಕೆಂಪು ಬಣ್ಣದ ಭಾಗ ಸ್ವಲ್ಪ ಸುಟ್ಟಿದೆ. ನೂತನ ವರ್ಷಚರಣೆಯ ಸಂದರ್ಭ ಬಳಸಿಕೊಂಡು ದುಷ್ಕರ್ಮಿಗಳು ಈ ಕೆಲಸ ಮಾಡಿದ್ದಾರೆ.
ಬಾವುಟ ಸುಟ್ಟವರನ್ನು ಶೀಘ್ರವೇ ಬಂಧಿಸಿ ಕಠಿಣ ಶಿಕ್ಷೆ ನೀಡಿ ಗಡಿಪಾರು ಮಾಡಬೇಕೆಂದು ಕನ್ನಡ ಸಂಘಟನೆಗಳು ಬೆಳಗಾವಿ ಪೊಲೀಸ್ ಆಯುಕ್ತರನ್ನು ಆಗ್ರಹಿಸಿವೆ.