LIVE TV LocalCrimeNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes
Local News

ಐಎಚ್‌ಆರ್‌ಸಿ ಬೆಳಗಾವಿ ಜಿಲ್ಲಾ ಮಂಡಳಿ ಅಧ್ಯಕ್ಷರಾಗಿ ಅಬ್ದುಲ್ ಅಜೀಜ ಶೇಖ ನೇಮಕ

ಬೆಳಗಾವಿ, ಅ. 5 : (ಸಮದರ್ಶಿ ಸುದ್ದಿ) - ಅಂತರರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಐಎಚ್‌ಆರ್‌ಸಿ) ಬೆಳಗಾವಿ ಜಿಲ್ಲಾ ಮಂಡಳಿಯ ಅಧ್ಯಕ್ಷರಾಗಿ ಮಾನವ ಹಕ್ಕುಗಳ ಕಾರ್ಯಕರ್ತ ಅಬ್ದುಲ್ ಅಜೀಜ ಎಚ್. ಶೇಖ ಅವರನ್ನು ನೇಮಕ ಮಾಡಲಾಗಿದೆ.

ಐಎಚ್‌ಆರ್‌ಸಿ ಫೌಂಡೇಶನ್ ಬೋರ್ಡ್ ಈ ನೇಮಕ ಮಾಡಿದ್ದು, ಸಂಸ್ಥೆಯ ಅಧ್ಯಕ್ಷ ಡಾ. ಕಮ್ರಾನ ಖಾನ್ ಅವರು ಅ. 3ರಂದು ಅಧಿಕೃತ ನೇಮಕಾತಿ ಪತ್ರ ಹೊರಡಿಸಿದ್ದಾರೆ. ಅ. 3ರಿಂದ ಮುಂದಿನ ಆದೇಶದವರೆಗೆ ಶೇಖ ಅವರು ಬೆಳಗಾವಿ ಜಿಲ್ಲಾ ಮಂಡಳಿಯ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಲಿದ್ದಾರೆ ಎಂದು ನೇಮಕಾತಿ ಪತ್ರದಲ್ಲಿ ತಿಳಿಸಲಾಗಿದೆ.

ಮಾನವ ಹಕ್ಕುಗಳ ಕ್ಷೇತ್ರದಲ್ಲಿ ಶೇಖ ಅವರು ಸಲ್ಲಿಸುತ್ತಿರುವ ಸೇವೆ, ಯುವಜನರ ಪ್ರೋತ್ಸಾಹ ಮತ್ತು ಸಬಲೀಕರಣ ಹಾಗೂ ಸಾಮಾಜಿಕ ಮತ್ತು ಸಮುದಾಯ ಸೇವೆಗಳಲ್ಲಿ ಅವರ ಕಾರ್ಯವನ್ನು ಪರಿಗಣಿಸಿ ಈ ಜವಾಬ್ದಾರಿ ನೀಡಲಾಗಿದೆ ಎಂದು ಆಯೋಗ ತಿಳಿಸಿದೆ.bಮಾನವಕುಲದ ಒಳಿತು ಮತ್ತು ಶಾಂತಿಗಾಗಿ ಯುವ ನಾಯಕನಾಗಿ ಅವರು ನಡೆಸುತ್ತಿರುವ ಕಾರ್ಯಗಳನ್ನು ಶ್ಲಾಘಿಸಿರುವ ಆಯೋಗ, ತನ್ನ ಧ್ಯೇಯ ಮತ್ತು ಉದ್ದೇಶಗಳಿಗೆ ಅನುಗುಣವಾಗಿ ಬೆಳಗಾವಿ ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುವಂತೆ ಸೂಚಿಸಿದೆ.

Author
Samadarshi News
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಸಿಡಿಲು ಬಡಿದು ಎರಡು ಹಸು ಸಾವುಐಎಚ್‌ಆರ್‌ಸಿ ಬೆಳಗಾವಿ ಜಿಲ್ಲಾ ಮಂಡಳಿ ಅಧ್ಯಕ್ಷರಾಗಿ ಅಬ್ದುಲ್ ಅಜೀಜ ಶೇಖ ನೇಮಕಚುಳಕಿಯಲ್ಲಿ ಜಿಲ್ಲಾ ಮಟ್ಟದ ಕಬಡ್ಡಿ-ಖೋಖೋ ಕ್ರೀಡಾಕೂಟಕ್ಕೆ ಚಾಲನೆಮೊಬೈಲ್ ಟವರ್ ಆಮಿಷ, ಫೇಸ್‌ಬುಕ್ ಲಿಂಕ್: ಅಥಣಿಯ ಇಬ್ಬರು ರೈತರಿಗೆ ₹4.04 ಲಕ್ಷ ವಂಚನೆಅಥಣಿ ಲಾಡ್ಜನಲ್ಲಿ ವೇಶ್ಯಾವಾಟಿಕೆ ಆರೋಪ: ಮಹಿಳೆ ರಕ್ಷಣೆ, ಓರ್ವ ಬಂಧನಹಸುಗಳಿಗೆ ಮೇವು ಹಾಕುವ ವಿಚಾರಕ್ಕೆ ಜಗಳ: ಪತ್ನಿಯನ್ನು ಕುಡಗೋಲಿನಿಂದ ಕೊಚ್ಚಿ ಹತ್ಯೆಬಿಜೆಪಿ ಮುಖಂಡ ರವಿ ಪಾಟೀಲಗೆ ನಿರೀಕ್ಷಣಾ ಜಾಮೀನುಮೋದಿ-ಶಾ ಸೂಚನೆಯಂತೆ ಸಂವಿಧಾನ, ಪ್ರಜಾಪ್ರಭುತ್ವಕ್ಕೆ ದ್ರೋಹ: ಕಾಂಗ್ರೆಸ್ಮಹಿಳಾ ಪತ್ರಕರ್ತೆಯರ ಪೊಲೀಸರ ಲೈಂಗಿಕ ಕಿರುಕುಳ ; ಎಫ್‌ಐಆರ್‌ಗೆ ಒತ್ತಾಯಿಸಿದವರು ವಶಕ್ಕೆಇದು ಗುಜರಾತ್, ಯುಪಿ ಅಲ್ಲ; ಕಾನೂನು ಮುರಿದರೆ ಪರಿಣಾಮ ಎದುರಿಸಿ: ಪ್ರಿಯಾಂಕ್ ಖರ್ಗೆ