LIVE TV LocalCrimeNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes
Local News

ಬಿಜೆಪಿ ಮುಖಂಡ ರವಿ ಪಾಟೀಲಗೆ ನಿರೀಕ್ಷಣಾ ಜಾಮೀನು

ಬೆಳಗಾವಿ, ಅ. 5 : (ಸಮದರ್ಶಿ ಸುದ್ದಿ) - ಮತದಾರರ ಪಟ್ಟಿ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ಸಂದರ್ಭದಲ್ಲಿ ಮುಸ್ಲಿಂ ಸಮುದಾಯದ ಮತದಾರರ ಹೆಸರುಗಳನ್ನು ಪಟ್ಟಿಯಿಂದ ತೆಗೆದುಹಾಕುವ ಉದ್ದೇಶದಿಂದ ಸುಮಾರು 198 ನಕಲಿ ಫಾರಂ-7 ಅರ್ಜಿಗಳನ್ನು ಸಲ್ಲಿಸಿದ್ದಾರೆ ಎಂಬ ಆರೋಪ ಎದುರಿಸುತ್ತಿರುವ ಬಿಜೆಪಿ ಮುಖಂಡ ಡಾ. ರವಿ ಪಾಟೀಲ ಅವರಿಗೆ ಬೆಳಗಾವಿಯ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ.

ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಗಂಗಾಧರ ಕೆ.ಎನ್. ಅವರು ಅಕ್ಟೋಬರ್ 3ರಂದು ಆದೇಶ ನೀಡಿದ್ದು, ಫಾರಂ-7 ಸಲ್ಲಿಸಿದ ಮಾತ್ರಕ್ಕೆ ಚುನಾವಣಾ ಅಧಿಕಾರಿಗಳು ಮತದಾರರ ಹೆಸರನ್ನು ಸ್ವಯಂಚಾಲಿತವಾಗಿ ತೆಗೆದುಹಾಕುವುದಿಲ್ಲ. ಅರ್ಜಿಗಳ ಕುರಿತು ಸ್ವತಂತ್ರ ವಿಚಾರಣೆ ಮತ್ತು ಪರಿಶೀಲನೆ ನಡೆಸಿದ ನಂತರವೇ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಹೇಳಿದ್ದಾರೆ.

ರಾಜಕೀಯ ಪಕ್ಷವೊಂದರ ಬೂತ್ ಮಟ್ಟದ ಏಜೆಂಟ್ ಮೀರಾಸಾಬ ಸನದಿ ನೀಡಿದ ದೂರಿನ ಆಧಾರದಲ್ಲಿ ಬೆಳಗಾವಿ ಮಾರ್ಕೆಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಮತದಾರರು ಪಟ್ಟಿಯಲ್ಲಿರುವ ವಿಳಾಸಗಳಲ್ಲೇ ವಾಸಿಸುತ್ತಿದ್ದರೂ, ಮುಸ್ಲಿಂ ಸಮುದಾಯಕ್ಕೆ ಸೇರಿದ ಸುಮಾರು 198 ಮತದಾರರ ಹೆಸರುಗಳನ್ನು ತೆಗೆದುಹಾಕುವ ಉದ್ದೇಶದಿಂದ ನಕಲಿ ಫಾರಂ-7 ಸಲ್ಲಿಸಲಾಗಿದೆ ಎಂದು ದೂರಿನಲ್ಲಿ ಆರೋಪಿಸಲಾಗಿತ್ತು.

ಪ್ರಕರಣವು ಮುಖ್ಯವಾಗಿ ದಾಖಲೆಗಳನ್ನು ಆಧರಿಸಿದ್ದು, ನಕಲಿ ಎಂದು ಆರೋಪಿಸಲಾಗಿರುವ ಫಾರಂ-7ಗಳು ಈಗಾಗಲೇ ಬೆಳಗಾವಿ ಮಹಾನಗರ ಪಾಲಿಕೆಯ ಚುನಾವಣಾ ವಿಭಾಗಕ್ಕೆ ಸಂಬಂಧಿಸಿದ ಬೂತ್ ಮಟ್ಟದ ಅಧಿಕಾರಿಯ ಬಳಿ ಲಭ್ಯವಿವೆ ಎಂದು ನ್ಯಾಯಾಲಯ ಗಮನಿಸಿದೆ.

“ಫಾರಂ-7 ಸಲ್ಲಿಸಿದ ಮಾತ್ರಕ್ಕೆ ಚುನಾವಣಾ ಪ್ರಾಧಿಕಾರ ಸ್ವಯಂಚಾಲಿತವಾಗಿ ಕ್ರಮ ಕೈಗೊಳ್ಳುವುದಿಲ್ಲ. ತನ್ನದೇ ಆದ ವಿಚಾರಣೆ ಮತ್ತು ಪರಿಶೀಲನೆ ನಡೆಸುತ್ತದೆ” ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ. ವಿವಾದಿತ ದಾಖಲೆಗಳ ಸತ್ಯಾಸತ್ಯತೆಯನ್ನು ನಿರ್ಧರಿಸಬೇಕಿರುವುದು ಚುನಾವಣಾ ಪ್ರಾಧಿಕಾರವೇ ಹೊರತು ನಿರ್ದಿಷ್ಟ ರಾಜಕೀಯ ಪಕ್ಷದ ವ್ಯಕ್ತಿಗಳಲ್ಲ ಎಂದೂ ಹೇಳಿದೆ.

ರವಿ ಪಾಟೀಲ ವಿರುದ್ಧದ ಆರೋಪಗಳು ಜಾಮೀನುರಹಿತ ಸ್ವರೂಪದ್ದಾಗಿದ್ದರೂ, ಅವುಗಳಲ್ಲಿ ಯಾವುದಕ್ಕೂ ಮರಣದಂಡನೆ ಅಥವಾ ಜೀವಾವಧಿ ಶಿಕ್ಷೆ ಇಲ್ಲ. ಹೀಗಾಗಿ ನಿರೀಕ್ಷಣಾ ಜಾಮೀನು ನೀಡಲು ಮೇಲ್ನೋಟಕ್ಕೆ ಸೂಕ್ತ ಪ್ರಕರಣವಿದೆ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.

ರವಿ ಪಾಟೀಲ ಅವರನ್ನು ಬಂಧಿಸುವ ಸಂದರ್ಭ ಎದುರಾದರೆ ₹50 ಸಾವಿರ ವೈಯಕ್ತಿಕ ಬಾಂಡ್ ಹಾಗೂ ಅಷ್ಟೇ ಮೊತ್ತದ ಒಬ್ಬರ ಭದ್ರತೆ ಪಡೆದು ಬಿಡುಗಡೆ ಮಾಡಬೇಕು ಎಂದು ನ್ಯಾಯಾಲಯ ಆದೇಶಿಸಿದೆ. ರವಿ ಪಾಟೀಲ ಪರ ವಕೀಲ ಆರ್.ಜಿ. ಪಾಟೀಲ ವಾದ ಮಂಡಿಸಿದರು.

Author
Samadarshi News
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಸಿಡಿಲು ಬಡಿದು ಎರಡು ಹಸು ಸಾವುಐಎಚ್‌ಆರ್‌ಸಿ ಬೆಳಗಾವಿ ಜಿಲ್ಲಾ ಮಂಡಳಿ ಅಧ್ಯಕ್ಷರಾಗಿ ಅಬ್ದುಲ್ ಅಜೀಜ ಶೇಖ ನೇಮಕಚುಳಕಿಯಲ್ಲಿ ಜಿಲ್ಲಾ ಮಟ್ಟದ ಕಬಡ್ಡಿ-ಖೋಖೋ ಕ್ರೀಡಾಕೂಟಕ್ಕೆ ಚಾಲನೆಮೊಬೈಲ್ ಟವರ್ ಆಮಿಷ, ಫೇಸ್‌ಬುಕ್ ಲಿಂಕ್: ಅಥಣಿಯ ಇಬ್ಬರು ರೈತರಿಗೆ ₹4.04 ಲಕ್ಷ ವಂಚನೆಅಥಣಿ ಲಾಡ್ಜನಲ್ಲಿ ವೇಶ್ಯಾವಾಟಿಕೆ ಆರೋಪ: ಮಹಿಳೆ ರಕ್ಷಣೆ, ಓರ್ವ ಬಂಧನಹಸುಗಳಿಗೆ ಮೇವು ಹಾಕುವ ವಿಚಾರಕ್ಕೆ ಜಗಳ: ಪತ್ನಿಯನ್ನು ಕುಡಗೋಲಿನಿಂದ ಕೊಚ್ಚಿ ಹತ್ಯೆಬಿಜೆಪಿ ಮುಖಂಡ ರವಿ ಪಾಟೀಲಗೆ ನಿರೀಕ್ಷಣಾ ಜಾಮೀನುಮೋದಿ-ಶಾ ಸೂಚನೆಯಂತೆ ಸಂವಿಧಾನ, ಪ್ರಜಾಪ್ರಭುತ್ವಕ್ಕೆ ದ್ರೋಹ: ಕಾಂಗ್ರೆಸ್ಮಹಿಳಾ ಪತ್ರಕರ್ತೆಯರ ಪೊಲೀಸರ ಲೈಂಗಿಕ ಕಿರುಕುಳ ; ಎಫ್‌ಐಆರ್‌ಗೆ ಒತ್ತಾಯಿಸಿದವರು ವಶಕ್ಕೆಇದು ಗುಜರಾತ್, ಯುಪಿ ಅಲ್ಲ; ಕಾನೂನು ಮುರಿದರೆ ಪರಿಣಾಮ ಎದುರಿಸಿ: ಪ್ರಿಯಾಂಕ್ ಖರ್ಗೆ