ePaper
PoliticsBusinessEducationTechEntertainmentSportsEditorialHealthHealthTravelingBeauty TipsRecipes Tips

ಶಿಕ್ಷಕರ ನೇಮಕಾತಿ ಹಗರಣ : 11 ಮಂದಿ ಪ್ರೌಢ ಶಾಲೆ ಶಿಕ್ಷಕರ ಬಂಧನ 

ಬೆಂಗಳೂರು : 2014-15 ರ ಕಾಂಗ್ರೆಸ್ ಆಡಳಿತದಲ್ಲಿ ನಡೆದಿದೆ ಎನ್ನಲಾದ ಶಿಕ್ಷಕರ ನೇಮಕಾತಿ ಹಗರಣ ಸಂಬಂಧ ಸುಳ್ಳು ದಾಖಲೆ ನೀಡಿ ನೇಮಕಗೊಂಡಿದ್ದ 11 ಮಂದಿ ಸರ್ಕಾರಿ ಪ್ರೌಢಶಾಲೆ ಶಿಕ್ಷಕರನ್ನು ಬಂಧಿಸಲಾಗಿದೆ.

ಶಿಕ್ಷಕರ ನೇಮಕ ಹಗರಣ ಸಂಬಂಧ ಸಿಐಡಿ ಕಾರ್ಯಾಚರಣೆ ನಡೆಸಿದ್ದು, ಕುಣಿಗಲ್ ತಾಲೂಕಿನ ಪ್ರೌಢ ಶಾಲೆಯ ಸಹ ಶಿಕ್ಷಕಿ ರಾಜೇಶ್ವರಿ, ತುಮಕೂರು ಜಿಲ್ಲೆಯ ಚಿಕ್ಕನಾಯಕನಹಳ್ಳಿ ತಾಲೂಕಿನ ಸರ್ಕಾರಿ ಪ್ರೌಢಶಾಲೆಯ ಸಹ ಶಿಕ್ಷಕಿ ಶಮೀನಾಜ ಬಾನು, ತುರುವೆಕೆರೆ ತಾಲೂಕಿನ ಹುಲಿಕಲ್ ಪ್ರೌಢಶಾಲೆಯ ಶಿಕ್ಷಕ ಬಿ. ಎನ್. ನವೀನ ಹನುಮನಗೌಡ, ಹುಲಿಕೆರೆ ಪ್ರೌಢಶಾಲೆಯ ಬಿ.ಎಂ.ಪ್ರಸನ್ನ, ಹೊಳಗೇರಿಪುರ ಪ್ರೌಢಶಾಲೆಯ ಆರ್.ಹರೀಶ, ನಾಗಸಂದ್ರ ಪ್ರೌಢಶಾಲೆಯ ನಾಗರತ್ನ, ಅಮೃತೂರು ಪ್ರೌಢಶಾಲೆಯ ಜಿ.ಎನ್. ನವೀನ ಕುಮಾರ, ತಿಪಟೂರು ತಾಲೂಕಿನ ಪ್ರೌಢಶಾಲೆಯ ಶಿಕ್ಷಕಿ ಕಮಲಾ, ಗುಪ್ಪಿ ತಾಲೂಕಿನ ಕೆ. ಮತ್ತಿಘಟ್ಟ ಸರ್ಕಾರಿ ಕಂಪೋಸಿಟ್ ಪ್ರೌಢಶಾಲೆ ಎಸ್. ದೇವೇಂದ್ರ ನಾಯ್ಕ ಹಾಗೂ ವಿಜಯಪುರ ಜಿಲ್ಲೆಯ ಚಡಚಣ ತಾಲೂಕಿನ ಸರ್ಕಾರಿ ಪ್ರೌಢಶಾಲೆ ಶಿಕ್ಷಕ ಮಹೇಶ ಶೀಮಂತ ಸೂಸಲಾಡಿ ಎಂಬುವರನ್ನು ಸಿಐಡಿ ಬಂಧಿಸಿದೆ.

 
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.