ePaper
PoliticsBusinessEducationTechEntertainmentSportsEditorialHealthHealthTravelingBeauty TipsRecipes Tips

ಸಂದರ್ಶನ ಮಾಡುತ್ತ ರಿಷಬ್ ಕಾಲಿಗೆ ಬಿದ್ದ ಆಂಕರ್

ಬೆಂಗಳೂರು, ೧೪- ಕಾಂತಾರ ಸಿನಿಮಾ ಇದೀಗ ಸೆನ್ಸೇಷನ್ ಕ್ರಿಯೇಟ್ ಮಾಡ್ತಾ ಇದೆ. ಕನ್ನಡ ಅಷ್ಟೆ ಅಲ್ಲದೆ ಬೇರೆ ಬೇರೆ ಭಾಷೆಗಳಲ್ಲೂ ಹಿಟ್ ಕೊಡಲು ರೆಡಿಯಾಗಿದೆ. ಈ ಮೂಲಕ ಕನ್ನಡ ಇಂಡಸ್ಟ್ರಿಯನ್ನು ಮೇಲ್ಮಟ್ಟಕ್ಕೆ ತೆಗೆದುಕೊಂಡು ಹೋದ ಒಂದು ಕೀರ್ತಿ ರಿಷಬ್ ಗೆ ಸಲ್ಲುತ್ತಿದೆ. ಇದೀಗ ಮತ್ತೊಂದು ವಿಶೇಷ ನಡೆದಿದೆ. ಆಂಕರ್‌ ಒಬ್ಬ ಸಂದರ್ಶನ ಮಾಡುತ್ತಾ ರಿಷಬ್ ಗೆ ಕಾಲಿಗೆ ಬಿದ್ದು ನಮಸ್ಕಾರ ಮಾಡಿದ್ದಾರೆ.

ಇತ್ತೀಚೆಗೆ ನಡೆದ ಒಂದು ಸಂದರ್ಶನ ಇದೀಗ ದೊಡ್ಡ ಸುದ್ದಿ ಮಾಡ್ತಾ ಇದೆ. ಜನಪ್ರಿಯ ಯೂಟ್ಯೂಬರ್​ ಸೂರಜ​ ಕುಮಾರ​ ಎಂಬುವರು ರಿಷಬ್ ಸಂದರ್ಶನ ನಡೆಸಿದ್ದಾರೆ.ಸಂದರ್ಶನದ ವೇಳೆ ಅವರು ರಿಷಬ್​ ಶೆಟ್ಟಿಯ ಕಾಲಿಗೆ ಬಿದ್ದಿದ್ದಾರೆ.

ಕಾಂತಾರ ಸಿನಿಮಾ ನೋಡಿ ಅವರು ಆ ಪರಿ ಭಾವುಕರಾಗಿದ್ದಾರೆ. ಸಂದರ್ಶನ ಶುರುಮಾಡುವುದಕ್ಕೂ ಮುನ್ನ ದಯವಿಟ್ಟು ನೀವು ಎದ್ದು ನಿಂತುಕೊಳ್ಳಿ ಸರ್​ ಎಂದು ರಿಷಬ್​ಗೆ ಸೂರಜ್​ ಹೇಳಿದರು. ನಂತರ ರಿಷಬ್​ ಶೆಟ್ಟಿಯನ್ನು ತಬ್ಬಿಕೊಂಡರು. ಅದೂ ಸಾಲದೆಂಬಂತೆ ಕಾಲಿಗೆ ಬಿದ್ದು ನಮಸ್ಕಾರ ಮಾಡಿದರು.

ನಾನು ತಮಾಷೆ ಮಾಡುತ್ತಿಲ್ಲ ಸರ್​. ಈ ರೀತಿ ನಾನು ಇದುವರೆಗೂ ಯಾರಿಗೂ ಮಾಡಿಲ್ಲ. ನಿಮ್ಮ ನಟನೆ ನೋಡಿ ನಾನು ಮೂಕ ವಿಸ್ಮಿತನಾದೆ. ನಾನು ತುಂಬಾ ಸಿನಿಮಾಗಳನ್ನು ನೋಡಿದ್ದೇನೆ. ಆದರೆ ಈ ಚಿತ್ರದ ಬಗ್ಗೆ ಹೇಳಲು ನನ್ನ ಬಳಿ ಪದಗಳೇ ಇಲ್ಲ. ನನ್ನ ಗರ್ಲ್​ಫ್ರೆಂಡ್​ಗಿಂತಲೂ ಹೆಚ್ಚಾಗಿ ನಿಮ್ಮನ್ನು ಪ್ರೀತಿಸುತ್ತೇನೆ ಎಂದು ಸೂರಜ​ ಕುಮಾರ​ ಹೇಳಿದ್ದಾರೆ.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.