ePaper
PoliticsBusinessEducationTechEntertainmentSportsEditorialHealthHealthTravelingBeauty TipsRecipes Tips

ಕುಡಿದ ಅಮಲಿನಲ್ಲಿ ಪತಿ, ಪುತ್ರನಿಂದ ಕೊಲೆಗೀಡಾದ ದುರ್ದೈವಿ ಮಹಿಳೆ

ಕುಮಟಾ, ೮- ರಾಕ್ಷಸ ಪುತ್ರನೊಬ್ಬ ಕುಡಿದ ಅಮಲಿನಲ್ಲಿ ತಂದೆಯೊಂದಿಗೆ ಸೇರಿ ತನ್ನ ತಾಯಿಯನ್ನೇ ಕೊಂದು ಹಾಕಿದ ಆಘಾತಕಾರಿ ಘಟನೆ ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನಲ್ಲಿ ನಡೆದಿದೆ.

ಮೇಲಿನ ಕೂಜಳ್ಳಿಯ ಬಚ್ಕಂಡದ 64 ವರ್ಷದ ಗೀತಾ ವಿಶ್ವೇಶ್ವರ ಭಟ್ಟ ಎಂಬಾಕೆ ಪತಿ ಹಾಗು ಪುತ್ರನಿಂದ ಕೊಲೆಯಾದ ದುರ್ದೈವಿ ಮಹಿಳೆಯಾಗಿದ್ದು, ಇವರನ್ನು ಪತಿ ವಿಶ್ವೇಶ್ವರ ನಾರಾಯಣ ಭಟ್ಟ ಹಾಗೂ ಪುತ್ರ ಮಧುಕರ ವಿಶ್ವೇಶ್ವರ ಭಟ್ಟ ಹತ್ಯೆ ಮಾಡಿದ್ದಾರೆ.

ತಂದೆ – ಮಗ ಇಬ್ಬರೂ ಸಹ ವಿಪರೀತ ಮದ್ಯ ವ್ಯಸನಿಗಳಾಗಿದ್ದು, ಮಂಗಳವಾರ ರಾತ್ರಿ ಎಂದಿನಂತೆ ಮದ್ಯ ಸೇವಿಸಿಕೊಂಡು ಬಂದಿದ್ದಾರೆ. ಇದನ್ನು ಪ್ರಶ್ನಿಸಿದ ಗೀತಾ ಅವರ ಮೇಲೆ ಮರದ ಹಲಗೆಯಿಂದ ಹಲ್ಲೆ ಮಾಡಿ ಕೊಲೆ ಮಾಡಿದ್ದಾರೆ. ಇದೀಗ ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆದು ಮುಂದಿನ ಕ್ರಮ ಕೈಗೊಂಡಿದ್ದಾರೆ.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.