LIVE TV LocalCrimeNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes
Crime News

ಸಂತೋಷ ಪದ್ಮಣ್ಣವರ ಕೊಲೆಯಲ್ಲಿ ಭಾಗಿಯಾದ ಇಬ್ಬರ ಬಂಧನ

ಬೆಳಗಾವಿ : ಇಲ್ಲಿನ ಆಂಜನೇಯ ನಗರದ ಉದ್ಯಮಿ ಸಂತೋಷ ಪದ್ಮಣ್ಣವರ ಕೊಲೆ ಪ್ರಕರಣದಲ್ಲಿ ಅವರ ಪತ್ನಿ ಉಮಾಗೆ ಸಹಾಯ ಮಾಡಿದ್ದ ಇಬ್ಬರೂ ವ್ಯಕ್ತಿಗಳನ್ನು ಬೆಳಗಾವಿ ಪೊಲೀಸರು ಬಂಧಿಸಿದ್ದಾರೆ.



ಮಂಗಳೂರು ಮೂಲದ ಶೋಬಿತ ಗೌಡಾ ಮತ್ತು ಇನ್ನೊಬ್ಬ ಆರೋಪಿಯನ್ನು ಹುಬ್ಬಳ್ಳಿಯಲ್ಲಿ ಬಂಧಿಸಿ ಬೆಳಗಾವಿಗೆ ಕರೆತಂದು ತೀವ್ರ ವಿಚಾರಣೆ ನಡೆಸುತ್ತಿದ್ದು ಅವರೂ ತಾವು ಕೊಲೆಯಲ್ಲಿ ಭಾಗಿಯಾಗಿರುವುದಾಗಿ ಒಪ್ಪಿಕೊಂಡಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.



ಉಮಾ ತಿಳಿಸಿದಂತೆ ತಾವು ನಿಗದಿತ ಸಮಯದಲ್ಲಿ ಅವರ ಮನೆ ಪ್ರವೇಶಿಸಿ, ಕೋಣೆಯೊಂದರಲ್ಲಿ ಅಡಗಿ ಕುಳಿತಿದ್ದು ಅವಳ ಸೂಚನೆಯಂತೆ ಹೊರಗೆ ಬಂದು ನಂತರ ಸಂತೋಷ ಮಲಗಿದ್ದಾಗ ತಲೆದಿಂಬಿನಿಂದ ಮುಖಕ್ಕೆ ಒತ್ತಿ ಹಿಡಿದು ಅವರನ್ನು ಕೊಲೆ ಮಾಡಿ ನಂತರ ಅವರು ಸತ್ತಿದ್ದು ಖಚಿತವಾದ ಮೇಲೆಯೇ ಮನೆಯಿಂದ ಹೊರಗೆ ತೆರಳಿದ್ದಾಗಿ ತಿಳಿಸಿದ್ದಾರೆ. ನಿಶ್ಚಯಿಸಿದಂತೆ ಉಮಾ ಪತಿಗೆ ಊಟದ ಜೊತೆಯಲ್ಲಿ ನೀಡಿದ್ದ ಕುಡಿಯುವ ನೀರಿನಲ್ಲಿ ಹೆಚ್ಚು ನಿದ್ರೆಯ ಮಾತ್ರೆ ನೀಡಿದ್ದರು. ಅದನ್ನು ಸೇವಿಸಿದ್ದ ಸಂತೋಷ ಗಾಢ ನಿದ್ರೆಗೆ ಜಾರಿದ್ದರು. ಆಗ ತಾವು ಹೊರಗೆ ಬಂದು ಸಂತೋಷ ಹತ್ಯೆ ಮಾಡಿದ್ದಾಗಿ ಇಬ್ಬರು ಹಂತಕರು ತಿಳಿಸಿದ್ದಾರೆ.



ಸಂತೋಷ ಹತ್ಯೆ ಪ್ರಕರಣದಲ್ಲಿ ಅವರ ಮಗಳು ಸಂಜನಾ ನೀಡಿದ ದೂರು ಹಂತಕರ ಪತ್ತೆಗೆ ಮುಖ್ಯ ಕಾರಣವಾಗಿದೆ. ಅಕ್ಟೋಬರ್ 9ರಂದು ಉದ್ಯಮಿ ಸಂತೋಷ ಪದ್ಮಣ್ಣವರ ಸಂಶಯಾಸ್ಪದವಾಗಿ ಮೃತಪಟ್ಟಿದ್ದರು. ಅವರ ಪತ್ನಿ ಉಮಾ ತನ್ನ ಪತಿ ಹೃದಯಘಾತದಿಂದ ಮೃತಪಟ್ಟಿದ್ದಾರೆ ಎಂದು ಹೇಳಿದ್ದರು. ಸ್ವತಃ ಪತ್ನಿಯೇ ಈ ರೀತಿ ಹೇಳಿದ್ದರಿಂದ ಎಲ್ಲರೂ ಸಂತೋಷ ಪದ್ಮಣ್ಣವರ ಹೃದಯಘಾತದಿಂದ ಮೃತಪಟ್ಟಿರಬಹುದು ಎಂದು ನಂಬಿದ್ದರು. ಆದರೆ ಬೆಂಗಳೂರಿನಿಂದ ಬಂದ ಮಗಳು ಸಂಜನಾ ತನ್ನ ತಂದೆಯ ಕೊನೆಯ ಕ್ಷಣಗಳನ್ನು ನೋಡಬೇಕು ಎಂದು ಬಯಸಿ ಸಿಸಿ ಟಿವಿ ಕ್ಯಾಮರಾಗಳನ್ನು ಪರಿಶೀಲಿಸಲು ಮುಂದಾಗಿದ್ದಾರೆ. ಆಗ ಅವರಿಗೆ ಗದರಿಸಿದ ತಾಯಿ ಉಮಾ, ಮೊದಲು ಸ್ನಾನ ಮಾಡಿಕೊಂಡು ಬಾ. ನಂತರ ಸಿಸಿಟಿವಿ ತೋರಿಸುತ್ತೇನೆ ಎಂದು ಕಳಿಸಿದ್ದರು. ಸಂಜನಾ ಆ ಕಡೆ ಹೋಗುತ್ತಿದ್ದಂತೆ ತಮ್ಮ ಇಬ್ಬರು ಪುತ್ರರನ್ನು ಕರೆದ ಉಮಾ, ಕೊಲೆ ನಡೆದ ಸಮಯದ ಸಿಸಿಟಿವಿ ದೃಶ್ಯಗಳನ್ನು ಡಿಲೀಟ್ ಮಾಡಿಸಿದರು. ಆದರೆ ನಂತರ ಇಬ್ಬರೂ ಬಾಲಕರು ತಮ್ಮ ಅಕ್ಕ ಸಂಜನಾಗಿ ವಿಷಯ ತಿಳಿಸಿದರು. ಆ ಕ್ಷಣದಿಂದಲೇ ಮಗಳಿಗೆ ಅನುಮಾನ ಆರಂಭವಾಯಿತು. ಆರೋಗ್ಯವಾಗಿದ್ದ ತಂದೆಯ ಸಾವು ಸಹಜ ಸಾವಲ್ಲ. ಕೊಲೆ ಎಂದು ಅನುಮಾನ ಪಟ್ಟು ಅಕ್ಟೋಬರ್ 15ರಂದು ಬೆಳಗಾವಿಯ ಮಾಳ ಮಾರುತಿ ಪೊಲೀಸ್ ಠಾಣೆಗೆ ದೂರು ನೀಡಿದ್ದರು.



ಬುಧವಾರ ಬೆಳಗಾವಿ ಪೊಲೀಸರು ಸಂತೋಷ ಪದ್ಮಣ್ಣವರ ಅವರ ಶವ ಹೊರತೆಗೆದು ಕೊನೆಗೂ ಪ್ರಕರಣವನ್ನು ಭೇದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಉಮಾಳ ಫೇಸಬುಕ್ ಸ್ನೇಹಿತ ಶೋಬಿತ ಗೌಡಗೆ ಅಕ್ಟೋಬರ್ 9ರಂದು ಉಮಾಗೆ ಮೊಬೈಲ್ ಕರೆ ಮಾಡಿ ಎಲ್ಲಾ ಕೆಲಸ ಮಾಡಿ ಮುಗಿಸಿದ್ದೇನೆ, ಆದರೂ ನನಗೆ ಧೈರ್ಯ ಸಾಲುತ್ತಿಲ್ಲ ಬನ್ನಿ ಎಂದು ಕರೆದಿದ್ದಳು. ನಂತರ ಅವರ ಸಹಾಯದಿಂದ ಉಮಾ ಸಂತೋಷನನ್ನು ಕೊಲೆ ಮಾಡಿರುವುದಾಗಿ ಈಗ ಬಂಧಿತರಾಗಿರುವ ಆರೋಪಿಗಳು ಪೊಲೀಸರ ಮುಂದೆ ತಪ್ಪೊಪಿಗೆ ನೀಡಿದ್ದಾರೆ.



ಇದೀಗ ಪೊಲೀಸರು ತನಿಖೆಯನ್ನು ಚುರುಕುಗೊಳಿಸಿದ್ದು ಪ್ರಕರಣದಲ್ಲಿ ಭಾಗಿಯಾದ ಎಲ್ಲರನ್ನೂ ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ.

Author
Samadarshi News
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಗಣೇಶ ಮೆರವಣಿಗೆ ವೇಳೆ ಮಸೀದಿ, ಮದರಸಾ ಮೇಲೆ ಕಲ್ಲುತೂರಾಟ ಆರೋಪಯುಪಿಐ ಶುಲ್ಕಕ್ಕೆ ಅಖಿಲೇಶ ಯಾದವ ಆಕ್ರೋಶದೇಶದ ಇಂಧನ ಭದ್ರತೆ ಕಾಪಾಡಲು ಬದ್ಧಈಶ್ವರಪ್ಪ, ಯತ್ನಾಳ ಅವರನ್ನು ಬಿಜೆಪಿಗೆ ಮರಳಿ ಕರೆತರಬೇಕು: ನಿರಾಣಿ₹50 ಲಕ್ಷ ಲಂಚ ಪಡೆಯುವಾಗ ಲೋಕಾಯುಕ್ತ ಬಲೆಗೆ ಬಿದ್ದ ಧಾರವಾಡ ತಹಶೀಲ್ದಾರಜಾಗತಿಕ ಚಿಪ್ ಉತ್ಪಾದನೆಯ ವಿಶ್ವಾಸಾರ್ಹ ಕೇಂದ್ರವಾಗುತ್ತಿದೆ ಭಾರತ: ಮೋದಿಬರಪೀಡಿತ ಪಟ್ಟಿಗೆ ಮತ್ತೂ 23 ತಾಲೂಕು; ಒಟ್ಟು 124ಅಧಿಕಾರಿಯ ಮೇಜಿನ ಮೇಲೆ ಬೀದಿ ನಾಯಿಗಳನ್ನು ಬಿಟ್ಟ ಪ್ರತಿಭಟನಾಕಾರರುಗನ್ ತೋರಿಸಿ ಬೆದರಿಸಿ ವಿವಾಹಿತ ಮಹಿಳೆ ಮೇಲೆ ಸಾಮೂಹಿಕ ಅತ್ಯಾಚಾರ ಆರೋಪ: ಮಾಜಿ ಶಾಸಕ ಸೇರಿ ಇಬ್ಬರ ವಿರುದ್ಧ ಪ್ರಕರಣಸಮಾಜದ ಜಟಿಲ ಸಮಸ್ಯೆಗಳ ಪರಿಹಾರಕ್ಕೆ ಸಂಘಟನೆಗಳು ಮುಂದಾಗಲಿ: ಡಾ. ಅಲ್ಲಮಪ್ರಭು ಶ್ರೀ