LIVE TV LocalCrimeNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes
Crime News

ರಾಜ್ಯದಾದ್ಯಂತ ಪಿಎಫ್ಐ ಕಾರ್ಯಕರ್ತರ ಮೇಲೆ ದಾಳಿ; 40 ಕಾರ್ಯಕರ್ತರು ವಶಕ್ಕೆ

ಬೆಂಗಳೂರು: ಕಳೆದ ವಾರ ರಾಷ್ಟ್ರೀಯ ತನಿಖಾ ದಳವು ರಾಜ್ಯದ ಹಲವು ಭಾಗಗಳಲ್ಲಿ ದಾಳಿ ನಡೆಸಿ ಪಾಪ್ಯುಲರ್‌ ಫ್ರಂಟ್‌ ಆಫ್‌ ಇಂಡಿಯಾ ನಾಯಕರನ್ನು ಬಂಧಿಸಿದ ನಂತರ ಮಂಗಳವಾರ ಬೆಳ್ಳಂಬೆಳಿಗ್ಗೆ ರಾಜ್ಯಾದ್ಯಂತ ಪೊಲೀಸರು ಪಿಎಫ್‌ಐಗೆ ಮತ್ತೊಂದು ಶಾಕ್‌ ನೀಡಿದ್ದಾರೆ.



ರಾಜ್ಯಾದ್ಯಂತ ದಾಳಿ ನಡೆದಿದ್ದು ರಾಜ್ಯದ ವಿವಿಧೆಡೆ ಪಿಎಫ್​ಐ ಮುಖಂಡರು ಹಾಗೂ ಕಾರ್ಯಕರ್ತರ ಮನೆಗಳ ಮೇಲೆ ದಾಳಿ ನಡೆಸಿ 40 ಕ್ಕೂ ಅಧಿಕ ಮಂದಿಯನ್ನು ವಶಕ್ಕೆ ಪಡೆದು ಅವರನ್ನು ಸ್ಥಳೀಯ ತಹಸೀಲ್ದಾರ ಮುಂದೆ ಹಾಜರುಪಡಿಸಲಾಗುತ್ತದೆ ಮತ್ತು ನ್ಯಾಯಾಂಗ ಬಂಧನವನ್ನು ಕೋರಲಾಗುವುದು.



ದಕ್ಷಿಣ ಕನ್ನಡ, ಉಡುಪಿ, ಶಿವಮೊಗ್ಗ, ಬೆಳಗಾವಿ, ಬಾಗಲಕೋಟ, ಬೀದರ, ಕೊಪ್ಪಳ, ಬಳ್ಳಾರಿ, ಬೆಂಗಳೂರು ಗ್ರಾಮೀಣ, ರಾಮನಗರ, ಕೋಲಾರ, ಮೈಸೂರು, ಚಾಮರಾಜನಗರ ಮೊದಲಾದೆಡೆ ದಾಳಿ ನಡೆದಿದೆ. ಕಾನೂನು ಸುವ್ಯವಸ್ಥೆ ಎಡಿಜಿಪಿ ಅಲೋಕ ಕುಮಾರ ಮತ್ತು ಆಯಾ ಜಿಲ್ಲೆಗಳ ಎಸ್‌ಪಿ ಹಾಗೂ ಪೊಲೀಸ್‌ ಆಯುಕ್ತರ ನೇತೃತ್ವದಲ್ಲಿ ಈ ಕಾರ್ಯಾಚರಣೆ ನಡೆದಿದೆ.



ವಶಕ್ಕೆ ಪಡೆದವರು ಪಿಎಫ್ಐ ಪ್ರತಿಭಟನೆ ಹಾಗೂ ಪಿಎಫ್ಐಗೆ ಸೇರಿದ ಕಾರ್ಯಕ್ರಮದಲ್ಲಿ ಸಕ್ರಿಯವಾಗಿದ್ದರು. ಇದರ ಜೊತೆ ಇವರು ಫಂಡಿಂಗ್ ಮಾಡುತ್ತಿದ್ದ ಆರೋಪ ಕೇಳಿ ಬಂದ ಹಿನ್ನೆಲೆಯಲ್ಲಿ ದಾಳಿ ನಡೆಸಲಾಗಿದೆ.



ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ, ದೇವನಹಳ್ಳಿಯಲ್ಲಿಯೂ ದಾಳಿ ಮಾಡಲಾಗಿದೆ. ದೊಡ್ಡಬಳ್ಳಾಪುರದ ಇಸ್ಲಾಮಪುರದಲ್ಲಿ ಮೂವರು, ದೇವನಹಳ್ಳಿಯ ವಿಜಯಪುರದ ಇಬ್ಬರು ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ ಎಂದು ವರದಿಯಾಗಿದೆ.



ರಾಯಚೂರು ನಗರದಲ್ಲಿ ದಾಳಿ ನಡೆಸಿದ ಪೊಲೀಸರು, ಪಿಎಫ್ಐ ಮಾಜಿ ಅಧ್ಯಕ್ಷ ಹಾಗೂ ಕಾರ್ಯದರ್ಶಿಯನ್ನು ವಶಕ್ಕೆ ಪಡೆದಿದ್ದಾರೆ ಎಂದು ವರದಿಯಾಗಿದೆ. ರಾಯಚೂರು ಉಪ ವಿಭಾಗದ ಡಿಎಸ್ ಪಿ ವೆಂಕಟೇಶ ನೇತೃತ್ವದ ತಂಡ ಬೆಳಗಿನ ಜಾವ ಐದು ಗಂಟೆಗೆ ವಶಕ್ಕೆ ಪಡೆದು ಕರೆದೊಯ್ದಿದ್ದು, ಗುಪ್ತ ಸ್ಥಳದಲ್ಲಿ ವಿಚಾರಣೆ ನಡೆಸಲಾಗುತ್ತಿದೆ.



ರಾಮನಗರದಲ್ಲೂ ಪಿಎಫ್ಐ ಕಾರ್ಯಕರ್ತರ ಮನೆ ಮೇಲೆ ಪೊಲೀಸರು ದಾಳಿ ಮಾಡಿದ್ದಾರೆ. ತಡರಾತ್ರಿ ಏಕಾಏಕಿ ಕಾರ್ಯಾಚರಣೆ ಮಾಡಿರುವ ರಾಮನಗರ ಪೊಲೀಸರು, ಐಜೂರು ಠಾಣಾ ವ್ಯಾಪ್ತಿಯಲ್ಲಿ ಕಾರ್ಯಕರ್ತರ ಮನೆ ಮೇಲೆ ದಾಳಿ ಮಾಡಿದ್ದು, 10 ಮಂದಿಯನ್ನು ವಶಕ್ಕೆ ಪಡೆದಿದ್ದಾರೆ.



ಚಾಮರಾಜನಗರದಲ್ಲಿ ಬೆಳ್ಳಂಬೆಳಗ್ಗೆ ಪೊಲೀಸರು ಕಾರ್ಯಾಚರಣೆ ನಡೆಸಿದ್ದು, ಇಬ್ಬರು ಪಿಎಫ್ಐ ಮುಖಂಡರನ್ನು ಬಂಧಿಸಿದ್ದಾರೆ. ಮಂಗಳೂರಿನಲ್ಲಿ ಎಂಟು ಕಾರ್ಯಕರ್ತರನ್ನು ಬೀದರಿನಲ್ಲಿ ಪಿಎಫ್ಐ ಮತ್ತು ಎಸ್ಡಿಪಿಐ ಸಂಘಟನೆ ಮುಖಂಡರ ಮನೆ ಮೇಲೆ ಮಂಗಳವಾರ ಬೆಳಗಿನ ಜಾವ ಪೊಲೀಸ್ ಅಧಿಕಾರಿಗಳು ದಾಳಿ ನಡೆಸಿ ಇಬ್ಬರನ್ನು ಬಂಧಿಸಿದ್ದಾರೆ.



ಪಿಎಫ್ಐ ಸಂಘಟನೆಯ ಜಿಲ್ಲಾಧ್ಯಕ್ಷ ಹಾಗೂ ಎಸ್ ಡಿಪಿಐ ಸಂಘಟನೆಯ ಕಾರ್ಯದರ್ಶಿ ಅವರನ್ನು ಪೊಲೀಸ್ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ ಎನ್ನಲಾಗಿದೆ. ಮಂಗಳವಾರ ಬೆಳಗಿನ ಜಾವ ಸುಮಾರು 4 ಗಂಟೆಗೆ ಎಪೊಲೀಸರು ಏಕಕಾಲಕ್ಕೆ ಮನೆಗಳ ಮೇಲೆ ದಾಳಿ ನಡೆಸಿ ವಶಕ್ಕೆ ಪಡೆದಿದ್ದಾರೆ.



ಬೆಳಗಾವಿಯಲ್ಲಿ ಏಳು, ಕಲಬುರಗಿಯಲ್ಲೂ ಪಿಎಫ್ಐ, ಎಸ್‌ಡಿಪಿಐ ಸಂಘಟನೆಯ ಇಬ್ಬರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಮತ್ತೊಬ್ಬ ಪರಾರಿಯಾಗಿದ್ದು, ಪೊಲೀಸರು ಹುಡುಕಾಟ ತೀವ್ರಗೊಳಿಸಿದ್ದಾರೆ ಎಂದು ಹೇಳಲಾಗಿದೆ.

Author
Samadarshi News
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ನಿವೃತ್ತ ಶಿಕ್ಷಕ ಶ್ರೀ ಎಸ್. ಎ. ಕೊತವಾಲ್ ನಿಧನನೀಟ್ ಪ್ರಶ್ನೆಪತ್ರಿಕೆ ಸೋರಿಕೆ: ಎನ್‌ಟಿಎ ವಿಷಯ ತಜ್ಞರೇ ರೂವಾರಿಗಳುಇಂಡಿಯಲ್ಲಿ ಬೀದಿ ನಾಯಿಗಳ ದಾಳಿ: ಇಬ್ಬರು ಮಕ್ಕಳಿಗೆ ಗಂಭೀರ ಗಾಯಬ್ರಹ್ಮಾಂಡ ಭ್ರಷ್ಟಾಚಾರ : ಸಿಬಿಐ ತನಿಖೆ ನಡುವೆಯೂ ಪಿಎನ್‌ಸಿ ಇನ್‌ಫ್ರಾಟೆಕ್‌ಗೆ 3,483 ಕೋಟಿ ರೂ. ಹೆದ್ದಾರಿ ಗುತ್ತಿಗೆಗದ್ದಲದಲ್ಲೇ ಸಾಗಿದ ಸಂಸತ್; ಚರ್ಚೆಯಿಲ್ಲದೆ ತೆರಿಗೆ ತಿದ್ದುಪಡಿ ಮಸೂದೆಗೆ ಒಪ್ಪಿಗೆ'ಮೋದಿ ಸರ್ವಾಧಿಕಾರಿಯಾಗಿದ್ದರೆ ಚೆನ್ನಾಗಿತ್ತು' ಎಂದ ರೂಪಾಲಿ ಗಂಗೂಲಿ; ಸಾಮಾಜಿಕ ಜಾಲತಾಣದಲ್ಲಿ ತೀವ್ರ ಆಕ್ರೋಶಧರಣಿಯಲ್ಲಿ ಮೊಳಗಿದ ಏಕತೆಯ ಸಂದೇಶ: ಜಾತಿ–ಧರ್ಮ ಮೀರಿ ವಿದ್ಯಾರ್ಥಿಗಳಿಗೆ ನೆರವುಬೈಕ್–ಬಸ್ ಮುಖಾಮುಖಿ ಡಿಕ್ಕಿ: ತಂದೆ, ಮಗಳು ಸೇರಿ ಮೂವರು ಸ್ಥಳದಲ್ಲೇ ಮೃತ್ಯು'ತೆಹೆಲ್ಕಾ' ಪತ್ರಿಕೆ ಮಾಜಿ ಪ್ರಧಾನ ಸಂಪಾದಕ ತರುಣ ತೇಜ್‌ಪಾಲಗೆ 10 ವರ್ಷ ಜೈಲು ಶಿಕ್ಷೆರೈಲು ಹಳಿ ಮಧ್ಯೆ ಕೆಟ್ಟು ನಿಂತ ಶಾಲಾ ವಾಹನ; ಗ್ರಾಮಸ್ಥರ ಸಮಯಪ್ರಜ್ಞೆಗೆ ತಪ್ಪಿದ ಭಾರೀ ದುರಂತ