ePaper
PoliticsBusinessEducationTechEntertainmentSportsEditorialHealthHealthTravelingBeauty TipsRecipes Tips

ಹಗಲಿನಲ್ಲಿ ಕಳ್ಳತನ ಮಾಡುತ್ತಿದ್ದ ಕುಖ್ಯಾತ ಕಳ್ಳರ ಬಂಧಿಸಿದ ಬೆಳಗಾವಿ ಪೊಲೀಸರು

ಬೆಳಗಾವಿ: ಹಗಲು ಹೊತ್ತಿನಲ್ಲಿಯೇ ಮನೆಗಳ ಕಳ್ಳತನ ಮಾಡುತ್ತಿದ್ದ ಇಬ್ಬರು ಕುಖ್ಯಾತ ಅಂತರರಾಜ್ಯ ಮನೆಗಳ್ಳರನ್ನು ನಗರ ಪೊಲೀಸರು ಬಂಧಿಸಿದ್ದಾರೆ.

ಬಂಧಿತರಿಂದ ಸುಮಾರು 1 ಕೋಟಿ ರೂ. ಮೌಲ್ಯದ ಚಿನ್ನಾಭರಣಗಳನ್ನು ವಶಪಡಿಸಿಕೊಂಡಿದ್ದಾರೆ. ನಗರದ ವಡಗಾಂವಿ ನಿವಾಸಿ ಪ್ರಕಾಶ ಪಾಟೀಲ(37) ಹಾಗೂ ಮಹಾರಾಷ್ಟ್ರದ ವೈಭವವಾಡಿ ಗ್ರಾಮದ ಮಹೇಶ ಕಾಳಗಿನಕೊಪ್ಪ (37)ಬಂಧಿತ ಆರೋಪಿಗಳು.

ಬಂಧಿತರಿಬ್ಬರು ನಗರದಲ್ಲಿ ತಿರುಗಾಡಿ ಬೀಗ ಹಾಕಿದ ಮನೆಗಳನ್ನು ಗುರುತಿಸುತ್ತಿದ್ದರು. ಅದರಲ್ಲಿ ಪ್ರಕಾಶ​ ಬೀಗ ಮುರಿದು ಕಳ್ಳತನ ಮಾಡಲು ಮನೆಯ ಒಳಗಡೆ ಹೋದರೆ ಆತನ ಸಹಚರ ಮಹೇಶ ಮನೆಯ ಪಕ್ಕದಲ್ಲಿಯೇ ಬೈಕ್ ನಿಲ್ಲಿಸಿ ಹೊರಗಿನ ಮಾಹಿತಿಗಳನ್ನು ನೀಡುತ್ತಿದ್ದನು.

ಹೀಗೆ ಕಳ್ಳತನ ಮಾಡುತ್ತಿದ್ದ ಇಬ್ಬರು ಆರೋಪಿಗಳ ಮೇಲೆ ಬೆಳಗಾವಿ ಜಿಲ್ಲೆ, ನಗರ ಹಾಗೂ ಧಾರವಾಡ ಜಿಲ್ಲೆಯಲ್ಲಿ ಒಟ್ಟು 22 ಕಳ್ಳತನ ಪ್ರಕರಣಗಳು ಇರುವುದು ಪತ್ತೆಯಾಗಿದೆ. ಅದರಲ್ಲಿ 13 ಕಳ್ಳತನ ಪ್ರಕರಣಗಳು ಬೆಳಗಾವಿ ನಗರಕ್ಕೆ ಸಂಬಂಧಿಸಿವೆ. ಸದ್ಯ ಇಬ್ಬರು ಆರೋಪಿಗಳನ್ನು ಬಂಧಿಸಿದ ಪೊಲೀಸರು ಅಂದಾಜು 1ಕೋಟಿ ಮೌಲ್ಯದ ಚಿನ್ನಾಭರಣ ಹಾಗೂ ಬೆಳ್ಳಿಯ ಆಭರಣಗಳನ್ನು ಜಪ್ತಿ ಮಾಡಿಕೊಂಡಿದ್ದಾರೆ.

ಇನ್ನು ಕಳ್ಳತನ ಮಾಡಿದ್ದ 75 ಲಕ್ಷ ಮೌಲ್ಯದ 1.5 ಕೆಜಿ ಬಂಗಾರ, 3ಲಕ್ಷ ಮೌಲ್ಯದ 4ಕೆಜಿ ಬೆಳ್ಳಿ ಹಾಗೂ ಕೃತ್ಯಕ್ಕೆ ಬಳಸಿದ್ದ 1.80ಲಕ್ಷ ಮೌಲ್ಯದ 1ಬಜಾಜ್ ಡಾಮಿನರ್ ಬೈಕ್‍ನ್ನು ಜಪ್ತಿ ಮಾಡಿಕೊಂಡು ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಪೊಲೀಸರು ಒಪ್ಪಿಸಿದ್ದಾರೆ. ಆರೋಪಿಗಳನ್ನು ಬಂಧಿಸಿರುವ ಈ ವಿಶೇಷ ಅಪರಾಧ ಪತ್ತೆ ತಂಡಕ್ಕೆ ಹಿರಿಯ ಪೊಲೀಸ್​​ ಅಧಿಕಾರಿಗಳು ಅಭಿನಂದನೆ ಸಲ್ಲಿಸಿ ಬಹುಮಾನ ಘೋಷಿಸಿದ್ದಾರೆ.

 
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.