LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureEditorialBeautyRecipes

ಕಾಮನ್‌ವೆಲ್ತ್ ಕ್ರೀಡಾಕೂಟಕ್ಕೆ ಬೆಳಗಾವಿಯ ಸ್ವಾತಿಕ್ ಪಾಟೀಲ ಆಯ್ಕೆ

ಬೆಳಗಾವಿ, ಜುಲೈ 23: ನಗರದ ಸ್ವಿಮ್ಮರ್ಸ್ ಕ್ಲಬ್‌ನ ಪ್ರತಿಭಾವಂತ ಈಜುಪಟು ಸ್ವಾತಿಕ್ ಪಾಟೀಲ ಅವರು ಸ್ಕಾಟ್ಲೆಂಡ್‌ನ ಗ್ಲಾಸ್ಗೋದಲ್ಲಿ ಜುಲೈ 23ರಿಂದ ಆಗಸ್ಟ್ 2ರವರೆಗೆ ನಡೆಯಲಿರುವ 2026ರ ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ಭಾರತವನ್ನು ಪ್ರತಿನಿಧಿಸುವ ಗೌರವಕ್ಕೆ ಪಾತ್ರರಾಗಿದ್ದಾರೆ.

ಪುರುಷರ 100 ಮೀಟರ್ ಬ್ರೆಸ್ಟ್‌ಸ್ಟ್ರೋಕ್ ಎಸ್‌ಬಿ–9 ವಿಭಾಗದಲ್ಲಿ ಸ್ವಾತಿಕ್ ಅರ್ಹತೆ ಪಡೆದಿದ್ದು, ದೇಶದ ಪರವಾಗಿ ಸ್ಪರ್ಧಿಸಲಿದ್ದಾರೆ.

ಬೆಳಗಾವಿ ತಾಲೂಕಿನ ಮುತಗಾ ಗ್ರಾಮದ ಮೂಲದ ಸ್ವಾತಿಕ್ ಪಾಟೀಲ ಅವರು ಅಲಹಾಬಾದ್‌ನ ರಾಷ್ಟ್ರೀಯ ತಂತ್ರಜ್ಞಾನ ಸಂಸ್ಥೆ (ಎನ್‌ಐಟಿ)ಯಿಂದ ಪದವಿ ಪಡೆದಿದ್ದಾರೆ. ಪ್ರಸ್ತುತ ಅವರು ಝೋಪಿಂಗ್ ಸಂಸ್ಥೆಯಲ್ಲಿ ಸಾಫ್ಟ್‌ವೇರ್ ಡೆವಲಪರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ.

 ಸ್ವಾತಿಕ್ ಅವರಿಗೆ ಉಮೇಶ ಕಲಘಟಗಿ ಹಾಗೂ ಅಂಕುಶ ಕಣಬರಕರ ಅವರು ತರಬೇತಿ ನೀಡಿದ್ದು, ಅವರ ಸಾಧನೆಗೆ ಕ್ರೀಡಾಭಿಮಾನಿಗಳು ಹಾಗೂ ಈಜು ಸಮುದಾಯದಿಂದ ಅಭಿನಂದನೆಗಳು ವ್ಯಕ್ತವಾಗಿವೆ.

Author
A B Dharwadkar
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ದೇಶದಲ್ಲಿ ಶುದ್ಧ ಪೆಟ್ರೋಲ್ ಮರುಪೂರೈಕೆ ಇಲ್ಲ; ಇ–20 ಮುಂದುವರಿಕೆನೀಟ್‌ ಅಕ್ರಮ ವಿರುದ್ಧ ಮಹಾರಾಷ್ಟ್ರ ಬಂದ್‌ಗೆ ವ್ಯಾಪಕ ಪ್ರತಿಕ್ರಿಯೆ; ಸಾವಿರಾರು ಕಾರ್ಯಕರ್ತರ ವಶ, ಹಲವು ಕಡೆ ಪ್ರತಿಭಟನೆಪ್ರಧಾನಿ ನಿವಾಸದ ಪ್ರತಿಭಟನೆ ಬದಲು ವಿದ್ಯಾರ್ಥಿಗಳ ಜೊತೆ ನಿಲ್ಲಬೇಕಿತ್ತು: ಕಾಂಗ್ರೆಸ್ ನಡೆ ಬಗ್ಗೆ ವಾಂಗಚುಕ್‌ ಪತ್ನಿ ಟೀಕೆಸಿಜೆಪಿ ಪ್ರತಿಭಟನೆಗೆ ಅಡ್ಡಿಪಡಿಸಲು ಬಿಜೆಪಿಯಿಂದ ‘ಗೂಂಡಾಗಳ’ ಬಳಕೆ: ಅಭಿಜೀತ ದೀಪ್ಕೆ ಆರೋಪನೀಟ್ ವಿವಾದಕ್ಕೆ ಉಭಯ ಸದನ ಕಲಾಪ ನಾಲ್ಕನೇ ದಿನವೂ ಮುಂದೂಡಿಕೆಮಳೆ ಹನಿಗಳೊಂದಿಗೆ ಅರಳಿದ ಅಳ್ನಾವರ: ಹಸಿರಿನ ಸೊಬಗು, ರೈತರ ಸಂಭ್ರಮಪ್ರಧಾನಿ ನಿವಾಸದ ಎದುರಿನ ಪ್ರತಿಭಟನೆ ಖಂಡಿಸಿ ಬಿಜೆಪಿಯಿಂದ ಮೆರವಣಿಗೆಕಾಮನ್‌ವೆಲ್ತ್ ಕ್ರೀಡಾಕೂಟಕ್ಕೆ ಬೆಳಗಾವಿಯ ಸ್ವಾತಿಕ್ ಪಾಟೀಲ ಆಯ್ಕೆನೀಟ್‌ ಅಕ್ರಮ ಖಂಡಿಸಿ ಬೆಳಗಾವಿಯಲ್ಲಿ ವಿದ್ಯಾರ್ಥಿಗಳ ಪ್ರತಿಭಟನೆ; ಪ್ರಧಾನ್‌ ರಾಜೀನಾಮೆಗೆ ಆಗ್ರಹವಿದ್ಯಾರ್ಥಿಗಳ ರಕ್ಷಣೆಗೆ ಪೊಲೀಸ್ ವ್ಯಾನ್‌ ತಡೆದ ಯುವತಿ; ರಿಯಾ ಅಹಿರ್‌ ಧೈರ್ಯಕ್ಕೆ ಮೆಚ್ಚುಗೆ