ePaper
PoliticsBusinessEducationTechEntertainmentSportsEditorialHealthHealthTravelingBeauty TipsRecipes Tips

ಬೈಕ್,ಲಾರಿ ಮುಖಾಮುಖಿ ಡಿಕ್ಕಿ : ರಾಮದುರ್ಗದ ಇಬ್ಬರ ಸಾವು 

ರಾಮದುರ್ಗ : ಲಾರಿ ಮತ್ತು ಬೈಕ್ ನಡುವೆ ಡಿಕ್ಕಿ ಸಂಭವಿಸಿ ಬೈಕ್​ನಲ್ಲಿದ್ದ ಇಬ್ಬರು ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಜಿಲ್ಲೆಯ ರಾಮದುರ್ಗ ತಾಲೂಕಿನ ಹಲಗತ್ತಿ ಸಮೀಪ ನಡೆದಿದೆ.

ಮೃತರನ್ನು ಹಣಮಾಪುರ ನಿವಾಸಿ ಅರ್ಜುನ ತಿಮ್ಮಣ್ಣ ಬಂಡಿವಡ್ಡರ (44), ಓಬಳಾಪುರದ ಸುವರ್ಣಾ ಬಸಪ್ಪ ಹೊಳೆಯನ್ನರ (35) ಎಂದು ಗುರುತಿಸಲಾಗಿದೆ.

ರಾಮದುರ್ಗದಿಂದ ಮುದಕವಿ ಕಡೆಗೆ ಹೋಗುತ್ತಿದ್ದ ಲಾರಿ, ಮುದಕವಿಯಿಂದ ರಾಮದುರ್ಗದ ಕಡೆ ಬರುತ್ತಿದ್ದ ಬೈಕ್​ ಗೆ ಡಿಕ್ಕಿ ಹೊಡೆದಿದೆ.

ಈ ವೇಳೆ ಲಾರಿಯ ಚಕ್ರ ಬೈಕ್​ನಲ್ಲಿದ್ದವರ ಮೇಲೆ ಹರಿದ ಪರಿಣಾಮ ಇಬ್ಬರೂ ಸ್ಥಳದಲ್ಲೇ ಸಾವನ್ನಪ್ಪಿರುವುದಾಗಿ ತಿಳಿದು ಬಂದಿದೆ. ರಾಮದುರ್ಗ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.