LIVE TV LocalCrimeNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes
Entertainment News

ಖ್ಯಾತ ಹಿರಿಯ ನಟಿ ತಬಸುಮ್ ಇನ್ನಿಲ್ಲ

ಮುಂಬೈ: ಹಿರಿಯ ಖ್ಯಾತ ಹಿಂದಿ ನಟಿ ತಬಸುಮ್ ಅವರು ಶನಿವಾರ ತೀವ್ರ ಹೃದಯಾಘಾತದಿಂದ ನಿಧನರಾಗಿದರು. ಅವರಿಗೆ 78 ವರ್ಷ ವಯಸ್ಸಾಗಿತ್ತು.



ಬಾಲ ಕಲಾವಿದೆಯಾಗಿ ಮತ್ತು ಜನಪ್ರಿಯ ದೂರದರ್ಶನ ಟಾಕ್ ಶೋ ಆಗಿದ್ದ ಫೂಲ್ ಖಿಲೇ ಹೈಂ ಗುಲ್ಶನ್ ಗುಲ್ಶನ್ ನಿರೂಪಕಿಯಾಗಿ ತಬಸುಮ್ ಹೆಸರುವಾಸಿಯಾಗಿದ್ದರು. ತಬಸುಮ್ ಅವರು  ಹೃದಯಾಘಾತದಿಂದ ನಿಧನರಾದರು ಎಂದು ಅವರ ಪುತ್ರ ಹೋಶಾಂಗ ಗೋವಿಲ್ ತಿಳಿಸಿದ್ದಾರೆ.



ಗ್ಯಾಸ್ಟ್ರೋ ಸಮಸ್ಯೆಯಿಂದ ತಪಾಸಣೆಗಾಗಿ ಆಸ್ಪತ್ರೆಗೆ ಹೋದಾಗ ಶುಕ್ರವಾರ ರಾತ್ರಿ 8.40 ಮತ್ತು 8.42 ಕ್ಕೆ  ಎರಡು ಬಾರಿ ಹೃದಯಾಘಾತದ ನಂತರ ಅವರು ಸಾವನ್ನಪ್ಪಿದರು ಎಂದು ಪುತ್ರ ಹೋಶಾಂಗ್ ಅವರು ಸುದ್ದಿಸಂಸ್ಥೆಯೊಂದಕ್ಕೆ ತಿಳಿಸಿದ್ದುದಾಗಿ ವರದಿಯಾಗಿದೆ.



ಬಾಲ ಕಲಾವಿದೆಯಾಗಿ ಬೇಬಿ ತಬಸುಮ್ ಎಂದು ಖ್ಯಾತರಾಗಿದ್ದರು. 1940 ರ ದಶಕದ ಉತ್ತರಾರ್ಧದಲ್ಲಿ ನರ್ಗೀಸ್, ಮೇರಾ ಸುಹಾಗ್, ಮಜಧರ್ ಮತ್ತು ಬಡಿ ಬೆಹೆನ್‌ ಆದಿ ಅವರು ಚಲನಚಿತ್ರಗಳಲ್ಲಿ ನಟಿಸಿದ್ದಾರೆ. ಅವರು ದೂರದರ್ಶನದಲ್ಲಿ 1972 ರಿಂದ 1993 ರವರೆಗೆ ಆಗಿನ ಜನಪ್ರಿಯ "ಫೂಲ್ ಖಿಲೇ ಹೈಂ ಗುಲ್ಶನ್ ಗುಲ್ಶನ್" ಎಂಬ ದೇಶದ ಪ್ರಪ್ರಥಮ ಟಾಕ್ ಶೋ ನಡೆಸಿದ್ದರು.

Author
Samadarshi News
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಗಣೇಶ ಮೆರವಣಿಗೆ ವೇಳೆ ಮಸೀದಿ, ಮದರಸಾ ಮೇಲೆ ಕಲ್ಲುತೂರಾಟ ಆರೋಪಯುಪಿಐ ಶುಲ್ಕಕ್ಕೆ ಅಖಿಲೇಶ ಯಾದವ ಆಕ್ರೋಶದೇಶದ ಇಂಧನ ಭದ್ರತೆ ಕಾಪಾಡಲು ಬದ್ಧಈಶ್ವರಪ್ಪ, ಯತ್ನಾಳ ಅವರನ್ನು ಬಿಜೆಪಿಗೆ ಮರಳಿ ಕರೆತರಬೇಕು: ನಿರಾಣಿ₹50 ಲಕ್ಷ ಲಂಚ ಪಡೆಯುವಾಗ ಲೋಕಾಯುಕ್ತ ಬಲೆಗೆ ಬಿದ್ದ ಧಾರವಾಡ ತಹಶೀಲ್ದಾರಜಾಗತಿಕ ಚಿಪ್ ಉತ್ಪಾದನೆಯ ವಿಶ್ವಾಸಾರ್ಹ ಕೇಂದ್ರವಾಗುತ್ತಿದೆ ಭಾರತ: ಮೋದಿಬರಪೀಡಿತ ಪಟ್ಟಿಗೆ ಮತ್ತೂ 23 ತಾಲೂಕು; ಒಟ್ಟು 124ಅಧಿಕಾರಿಯ ಮೇಜಿನ ಮೇಲೆ ಬೀದಿ ನಾಯಿಗಳನ್ನು ಬಿಟ್ಟ ಪ್ರತಿಭಟನಾಕಾರರುಗನ್ ತೋರಿಸಿ ಬೆದರಿಸಿ ವಿವಾಹಿತ ಮಹಿಳೆ ಮೇಲೆ ಸಾಮೂಹಿಕ ಅತ್ಯಾಚಾರ ಆರೋಪ: ಮಾಜಿ ಶಾಸಕ ಸೇರಿ ಇಬ್ಬರ ವಿರುದ್ಧ ಪ್ರಕರಣಸಮಾಜದ ಜಟಿಲ ಸಮಸ್ಯೆಗಳ ಪರಿಹಾರಕ್ಕೆ ಸಂಘಟನೆಗಳು ಮುಂದಾಗಲಿ: ಡಾ. ಅಲ್ಲಮಪ್ರಭು ಶ್ರೀ