ePaper
PoliticsBusinessEducationTechEntertainmentSportsEditorialHealthHealthTravelingBeauty TipsRecipes Tips

ಘಟಪ್ರಭಾ ಹಳೆ ಸೇತುವೆ ಕುಸಿತ, ವಾಹನ ಸಂಚಾರ ಬಂದ್

ಬೆಳಗಾವಿ: ಜಿಲ್ಲೆಯ ಘಟಪ್ರಭಾ ಪಟ್ಟಣದ ಹೊರವಲಯದಲ್ಲಿರುವ ಹಳೆಯ ಸೇತುವೆಯ ಆಧಾರ ಗೋಡೆಯ ಒಂದು ಪಾಶ್ವ ಕುಸಿದಿದ್ದು ವಾಹನ ಸಂಚಾರ ಬುಧವಾರದಿಂದ ಬಂದ್ ಮಾಡಲಾಗಿದೆ.

72 ವರ್ಷಗಳ ಹಳೆಯ ಸೇತುವೆ ಕುಸಿತಗೊಂಡಿದ್ದು, ವಾಹನ ಸವಾರರ ಹಿತದೃಷ್ಠಿಯಿಂದ ಸೇತುವೆ ಮೇಲೆ ಸಂಚಾರ ಸಂಪೂರ್ಣ ಬಂದ್ ಮಾಡಲಾಗಿದೆ. 1954ರಲ್ಲಿ ನಿರ್ಮಾಣಗೊಂಡ ಸೇತುವೆಯ ಆಧಾರದ ಗೋಡೆಯ ಒಂದು ಭಾಗ ಕುಸಿದಿದೆ. ಕುಸಿಯುವಾಗ ಯಾವುದೇ ವಾಹನ ಸಂಚಾರವಿರದ್ದರಿಂದ ಯಾವುದೇ ಅನಾಹುತ ಸಂಭವಿಸಿಲ್ಲ. ವಾಹನ ಸಂಚಾರ ಪ್ರಾರಂಭಿಸಿದರೆ ಸೇತುವೆ ಸಂಪೂರ್ಣವಾಗಿ ಕುಸಿಯುವ ಸಾಧ್ಯತೆಯಿರುವುದರಿಂದ ಸಂಚಾರ ನಿಲ್ಲಿಸಲಾಗಿದೆ. ಗೋಕಾಕ ಪಟ್ಟಣದಿಂದ ಘಟಪ್ರಭಾ ಪಟ್ಟಣಕ್ಕೆ  ಸಂಪರ್ಕ ಕಟ್ ಆಗಿದೆ.

ಘಟನಾ ಸ್ಥಳಕ್ಕೆ ಅಧಿಕಾರಿಗಳು  ಭೇಟಿ, ಪರಿಶೀಲನೆ  ನಡೆಸಿದ್ದಾರೆ. ಸಾರ್ವಜನಿಕರ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ಸೇತುವೆ ಸುತ್ತಲು ಬ್ಯಾರಿಕೇಡ್ ಅಳವಡಿಸಲಾಗಿದೆ.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.