LIVE TV LocalCrimeNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes
Local News

ನಾಯಿ ಉಳಿಸಲು ಹೋಗಿ ತಾಯಿಯ ಸಾವು!

ಬೆಳಗಾವಿ, ಜೂ.18: ಬೀದಿ ನಾಯಿಯ ಜೀವ ಉಳಿಸಲು ಬೈಕ್‌ಗೆ ಬ್ರೇಕ್ ಹಾಕಿದ ವೇಳೆ ಹಿಂಬದಿಯಲ್ಲಿ ಕುಳಿತಿದ್ದ ತಾಯಿ ಕೆಳಗೆ ಬಿದ್ದು ಸ್ಥಳದಲ್ಲೇ ಮೃತಪಟ್ಟ ಘಟನೆ ಗುರುವಾರ ಬೆಳಗಾವಿ ತಾಲೂಕಿನ ಸಾಂಬ್ರಾ ಗ್ರಾಮದ ಸಮೀಪ ನಡೆದಿದೆ.

ಪಂತಬಾಳೇಕುಂದ್ರಿ ಗ್ರಾಮದಿಂದ ಮಹಾಂತೇಶ ನಗರಕ್ಕೆ ಬೈಕ್‌ನಲ್ಲಿ ಬರುತ್ತಿದ್ದ ಮಹಾಂತೇಶ ಕಲ್ಮಠ ಅವರು ತಮ್ಮ ತಾಯಿ ಶಾಂತವ್ವ ಕಲ್ಮಠ ಅವರನ್ನು ಹಿಂಬದಿಯಲ್ಲಿ ಕೂರಿಸಿಕೊಂಡು ಮನೆಗೆ ತೆರಳುತ್ತಿದ್ದರು. ಸಾಂಬ್ರಾ ಗ್ರಾಮದ ಬಳಿ ತಲುಪುತ್ತಿದ್ದಂತೆ ಏಕಾಏಕಿ ಬೀದಿ ನಾಯಿ ಬೈಕ್ ಮುಂದೆ ಅಡ್ಡ ಬಂದಿದೆ.

ಪ್ರಾಣಿಯ ಜೀವ ಉಳಿಸಬೇಕೆಂಬ ಮಾನವೀಯ ಕಾಳಜಿಯಿಂದ ಮಹಾಂತೇಶ ಅವರು ತಕ್ಷಣ ಬೈಕ್‌ಗೆ ಬ್ರೇಕ್ ಹಾಕಿದ್ದಾರೆ. ಆದರೆ ಏಕಾಏಕಿ ಬ್ರೇಕ್ ಹಾಕಿದ ಪರಿಣಾಮ ಹಿಂಬದಿಯಲ್ಲಿ ಕುಳಿತಿದ್ದ ಶಾಂತವ್ವ ಅವರು ಆಯತಪ್ಪಿ ರಸ್ತೆಗೆ ಬಿದ್ದಿದ್ದಾರೆ. ತಲೆಗೆ ತೀವ್ರ ಪೆಟ್ಟಾಗಿದ್ದರಿಂದ ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಕ್ಷಣಕಾಲದ ಹಿಂದೆ ಮಗನೊಂದಿಗೆ ಮಾತನಾಡುತ್ತಾ ಪ್ರಯಾಣಿಸುತ್ತಿದ್ದ ತಾಯಿ, ಮುಂದಿನ ಕ್ಷಣವೇ ದುರ್ಘಟನೆಯಲ್ಲಿ ಜೀವ ಕಳೆದುಕೊಂಡಿರುವುದು ಕುಟುಂಬದವರ ಆಕ್ರಂದನಕ್ಕೆ ಕಾರಣವಾಗಿದೆ.

ಘಟನೆ ಕುರಿತು ಮಾರಿಹಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Author
Samadarshi News
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಅನುಭವಿಗಳಿಂದ ಹೊಸ ಮುಖಗಳವರೆಗೆ: ಸಚಿವ ಸಂಪುಟ ಸೇರಿದ 19 ಶಾಸಕರ ರಾಜಕೀಯ ಪಯಣಮಳೆ ಅಬ್ಬರಕ್ಕೆ ರಾಜ್ಯ ತತ್ತರ : ಜಲಾಶಯಗಳು ಭರ್ತಿ, ನದಿ-ಹಳ್ಳಗಳು ಅಪಾಯದ ಮಟ್ಟಕ್ಕೆಸಂಪುಟ ವಿಸ್ತರಣೆಯಲ್ಲೇ ಕೊನೆ ಕ್ಷಣದ ಬದಲಾವಣೆ: 19 ಮಂದಿಗೆ ಮಾತ್ರ ಸ್ಥಾನಕಾಂಗ್ರೆಸ್ ಮೇಲಿನ ನಂಬಿಕೆ ಕುಸಿದಿದೆ : ತನ್ವೀರ ಸೇಠ್ಬಂಕಿಪುರದಲ್ಲಿ ಪ್ರಶಾಂತ್ ಕಿಶೋರ್‌ಗೆ ಮೊದಲ ರಾಜಕೀಯ ಗೆಲುವುಗೋವಾದಲ್ಲಿ ಹೊಸ ಕಟ್ಟುನಿಟ್ಟಿನ ನಿಯಮ: ಈ ತಪ್ಪು ಮಾಡಿದರೆ ₹1 ಲಕ್ಷದವರೆಗೆ ದಂಡಗರ್ಭಪಾತ ಜಾಲದ ಬೆಚ್ಚಿಬೀಳಿಸುವ ಸತ್ಯ: ‘ಗಂಡು ಮಗು’ ಔಷಧಿ ಹೆಸರಿನಲ್ಲಿ ವಂಚನೆ"ನಾನೂ ಸಚಿವ ಸ್ಥಾನದಿಂದ ವಂಚಿತನಾಗಿದ್ದೆ": ಅಸಮಾಧಾನಿತ ಶಾಸಕರಿಗೆ ಡಿ.ಕೆ.ಶಿವಕುಮಾರ ಸಮಾಧಾನಡಿ.ಕೆ. ಸಂಪುಟ ವಿಸ್ತರಣೆ : 19 ಸಚಿವರ ಪ್ರಮಾಣ ವಚನ, ಮಹಿಳೆಯರಿಗೆ ಸಿಗಲಿಲ್ಲ ಅವಕಾಶ ರಾಮಮಂದಿರ ದೇಣಿಗೆ ಕಳ್ಳತನ, ವಿದ್ಯಾರ್ಥಿಗಳ ಮೇಲಿನ ದೌರ್ಜನ್ಯ : ಸಂಸತ್ ಆವರಣದಲ್ಲಿ ವಿರೋಧ ಪಕ್ಷಗಳ ಪ್ರತಿಭಟನೆ