LIVE TV LocalCrimeNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes
Local News

ವೀರಯೋಧ ಕ್ಯಾಪ್ಟನ್ ರಾಮಪ್ಪ ಕೊಳ್ಳಿ‌ ನಿಧನ

ಸವದತ್ತಿ, 21- 1992 ರ ಆಪರೇಷನ್ ಬ್ಲೂ ಸ್ಟಾರ್ ಕಾರ್ಯಾಚರಣೆ ಮತ್ತು 1999 ಕಾರ್ಗಿಲ್ ಯುದ್ಧ ಸೇರಿದಂತೆ ದೇಶದ ಅನೇಕ ಸೈನಿಕ ಕಾರ್ಯಾಚರಣೆಗಳಲ್ಲಿ ಸಕ್ರಿಯವಾಗಿ ಭಾಗವಹಿಸಿ ಭಾರತೀಯ ಸೇನೆಯಲ್ಲಿ ಅಮೋಘ 30 ವರ್ಷಗಳ ಸೇವೆ ಸಲ್ಲಿಸಿದ್ದ ವೀರಯೋಧ ಕ್ಯಾಪ್ಟನ್ ರಾಮಪ್ಪ ಕೊಳ್ಳಿ‌ ನಿಧನರಾದರು.



ಇವರು ನಿವೃತ್ತಿ ನಂತರದ ಜೀವನವನ್ನು ಸ್ವಗ್ರಾಮ ಸವದತ್ತಿ ತಾಲೂಕಿನ ಹಿರೇಕುಂಬಿ ಗ್ರಾಮದಲ್ಲಿ ಕಳೆಯುತ್ತಿದ್ದರು. ಇಂದು ಅವರು ಕೊನೆಯುಸಿರೆಳೆದರು.



ರಾಮಪ್ಪ ಬಿ.ಕೊಳ್ಳಿಯವರ ಹುಟ್ಟೂರಾದ ಹಿರೇಕುಂಬಿಯಲ್ಲಿ ಅವರು ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ಪೂರೈಸಿ, ಭಾರತೀಯ ಸೇನೆಗೆ 1992 ಮಾರ್ಚ 28 ರಂದು ಸೇರಿ 30 ವರ್ಷಗಳ ಕಾಲ ಸೇವೆಗೈದು ಕಳೆದ ವರ್ಷ ಮಾರ್ಚ 31 ರಂದು ನಿವೃತ್ತರಾಗಿದ್ದರು.



ಪುಣೆ, ರಾಜಸ್ಥಾನ, ಡೆಹ್ರಾಡೂನ್, ಕಾರ್ಗಿಲ್ ಯುದ್ಧದ ಸಮಯದಲ್ಲಿ ಜಮ್ಮು ಮತ್ತು ಕಾಶ್ಮೀರದ ದ್ರಾಸ್ ವಲಯದಲ್ಲಿ , 2000-2010 ರವರೆಗೆ ಆಪರೇಷನ್ ಪರಾಕ್ರಮ, ಉತ್ತರ ಕಾಶ್ಮೀರದ ಅಮರನಾಥ ಸುರಕ್ಷತಾ ಕಾರ್ಯಾಚರಣೆ, ಸೋನಾಮಾರ್ಗ ಸುರಕ್ಷತೆ ಮತ್ತಿತರ ಪ್ರಮುಖ ಸೇವೆಗಳ ಸಂದರ್ಭದಲ್ಲಿ ವಿವಿಧ ಹುದ್ದೆಗಳಲ್ಲಿ ಅವರು ಸೇವೆಗೈದಿದ್ದಾರೆ‌. ಬೆಳಗಾವಿಯ ಇನ್‌ಫಂಟ್ರಿ ಕಮಾಂಡೋ ಶಾಲೆಯಲ್ಲಿಯೂ ಕ್ಯಾಪ್ಟನ್ ಆಗಿ ಅವರು ಸೇವೆಗೈದಿದ್ದಾರೆ.



ಸುದೀರ್ಘ 30 ವರ್ಷಗಳ ಕಾಲ ದೇಶಸೇವೆಗೈದು, ನಿವೃತ್ತಿ ನಂತರ ಗ್ರಾಮದಲ್ಲಿದ್ದವರನ್ನು ಕಳೆದುಕೊಂಡು ಹಿರೇಕುಂಬಿ ಗ್ರಾಮದ ಗ್ರಾಮಸ್ಥರು ಕಂಬನಿ ಮಿಡಿದಿದ್ದಾರೆ.



ಮೃತರು ಪತ್ನಿ, ಇಬ್ಬರು ಪುತ್ರಿಯರು, ಓರ್ವ ಪುತ್ರ, ಅಳಿಯ ಸೇರಿದಂತೆ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ. ಮೃತರ ಅಂತ್ಯಕ್ರಿಯೆಯು ಏಪ್ರಿಲ್ 21.04.2023 ಶುಕ್ರವಾರದಂದು ಸಂಜೆ 6 ಘಂಟೆಗೆ ಹಿರೇಕುಂಬಿ ಗ್ರಾಮದಲ್ಲಿ ಜರುಗಲಿದೆ.

Author
Samadarshi News
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಅಮಿತ ಶಾ ಭೇಟಿ : ಬೆಳಗಾವಿ ವಿಮಾನ ನಿಲ್ದಾಣದ ಸುತ್ತ 2 ಕಿ.ಮೀ. ‘ರೆಡ್ ಝೋನ್–ನೋ ಫ್ಲೈ ಝೋನ್’ಗಣೇಶ ಮೆರವಣಿಗೆ ವೇಳೆ ಮಸೀದಿ, ಮದರಸಾ ಮೇಲೆ ಕಲ್ಲುತೂರಾಟ ಆರೋಪಯುಪಿಐ ಶುಲ್ಕಕ್ಕೆ ಅಖಿಲೇಶ ಯಾದವ ಆಕ್ರೋಶದೇಶದ ಇಂಧನ ಭದ್ರತೆ ಕಾಪಾಡಲು ಬದ್ಧಈಶ್ವರಪ್ಪ, ಯತ್ನಾಳ ಅವರನ್ನು ಬಿಜೆಪಿಗೆ ಮರಳಿ ಕರೆತರಬೇಕು: ನಿರಾಣಿ₹50 ಲಕ್ಷ ಲಂಚ ಪಡೆಯುವಾಗ ಲೋಕಾಯುಕ್ತ ಬಲೆಗೆ ಬಿದ್ದ ಧಾರವಾಡ ತಹಶೀಲ್ದಾರಜಾಗತಿಕ ಚಿಪ್ ಉತ್ಪಾದನೆಯ ವಿಶ್ವಾಸಾರ್ಹ ಕೇಂದ್ರವಾಗುತ್ತಿದೆ ಭಾರತ: ಮೋದಿಬರಪೀಡಿತ ಪಟ್ಟಿಗೆ ಮತ್ತೂ 23 ತಾಲೂಕು; ಒಟ್ಟು 124ಅಧಿಕಾರಿಯ ಮೇಜಿನ ಮೇಲೆ ಬೀದಿ ನಾಯಿಗಳನ್ನು ಬಿಟ್ಟ ಪ್ರತಿಭಟನಾಕಾರರುಗನ್ ತೋರಿಸಿ ಬೆದರಿಸಿ ವಿವಾಹಿತ ಮಹಿಳೆ ಮೇಲೆ ಸಾಮೂಹಿಕ ಅತ್ಯಾಚಾರ ಆರೋಪ: ಮಾಜಿ ಶಾಸಕ ಸೇರಿ ಇಬ್ಬರ ವಿರುದ್ಧ ಪ್ರಕರಣ