LIVE TV LocalCrimeNationalInternationalPoliticsFinancialEducationTechnologyEntertainmentSportsHealthFeatureTravelingBeautyRecipes
Local News

ಮೋದಿ ನಾಯಕತ್ವದಲ್ಲಿ ಭಾರತ ಬಲಾಢ್ಯ ರಾಷ್ಟ್ರ: ಜಗದೀಶ ಶೆಟ್ಟರ್

ಬೆಳಗಾವಿ: ನರೇಂದ್ರ ಮೋದಿ ಅವರು 13 ವರ್ಷ ಗುಜರಾತ್ ಮುಖ್ಯಮಂತ್ರಿಯಾಗಿ ಹಾಗೂ ಕಳೆದ 12 ವರ್ಷಗಳಿಂದ ಪ್ರಧಾನಿಯಾಗಿ ಕಾರ್ಯನಿರ್ವಹಿಸಿದ್ದು, ಅವರ ನಾಯಕತ್ವದಲ್ಲಿ ಭಾರತ ಬಲಿಷ್ಠ ರಾಷ್ಟ್ರವಾಗಿ ಹೊರಹೊಮ್ಮಿದೆ ಎಂದು ಸಂಸದ ಜಗದೀಶ ಶೆಟ್ಟರ್ ಹೇಳಿದರು.

ನಗರದ ವ್ಯಾಕ್ಸಿನ್ ಡಿಪೊ ಮೈದಾನದಲ್ಲಿ ಬುಧವಾರ ನಡೆದ ‘ವಿಕಸಿತ ಭಾರತ ಸೇವಾ ಸಂಕಲ್ಪ ಯಾತ್ರೆ’ಯಲ್ಲಿ ಅವರು ಮಾತನಾಡಿದರು. ‘ಮೋದಿ ನೇತೃತ್ವದ ಜನಪರ ಆಡಳಿತದಿಂದ ಭಾರತಕ್ಕೆ ಜಾಗತಿಕ ಮಟ್ಟದಲ್ಲಿ ಗೌರವ ಹೆಚ್ಚಿದೆ. ದೇಶದ ಆರ್ಥಿಕತೆ ವಿಶ್ವದಲ್ಲಿ ನಾಲ್ಕನೇ ಸ್ಥಾನಕ್ಕೇರಿದೆ. ಜಮ್ಮು–ಕಾಶ್ಮೀರದಲ್ಲಿ ಅಶಾಂತಿ ಕಡಿಮೆಯಾಗಿ ಶಾಂತಿ ನೆಲೆಸುತ್ತಿದೆ. ದೇಶದ ಅಭಿವೃದ್ಧಿಗಾಗಿ ದಿನದ 24 ಗಂಟೆಯೂ ಶ್ರಮಿಸುವ ನಾಯಕ ನರೇಂದ್ರ ಮೋದಿ’ ಎಂದು ಶ್ಲಾಘಿಸಿದರು.

‘ಮೋದಿ ಅವರು ಕಳೆದ 12 ವರ್ಷಗಳಿಂದ ದೇಶದ ಸಮಗ್ರ ಅಭಿವೃದ್ಧಿಗಾಗಿ ನಿರಂತರವಾಗಿ ಶ್ರಮಿಸುತ್ತಿದ್ದಾರೆ. ಆದರೆ, ಆಡಳಿತ ನಡೆಸಿದ ಅನುಭವವಿಲ್ಲದ ಲೋಕಸಭೆ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ ಅವರು ದುರುದ್ದೇಶದಿಂದ ಮೋದಿ ಅವರನ್ನು ಟೀಕಿಸುತ್ತಿದ್ದಾರೆ. ಬಿಜೆಪಿ ವಿರುದ್ಧ ಟೀಕಿಸಲು ಕಾಂಗ್ರೆಸ್ ಬಳಿ ಸೂಕ್ತ ವಿಷಯಗಳಿಲ್ಲ. ಹೀಗಾಗಿ ಆಧಾರರಹಿತ ಆರೋಪಗಳನ್ನು ಮಾಡುತ್ತಿದೆ’ ಎಂದು ದೂರಿದರು.

ಶಾಸಕ ಅಭಯ ಪಾಟೀಲ ಮಾತನಾಡಿ, ‘ಬೆಳಗಾವಿ ಜಿಲ್ಲೆಯಲ್ಲಿ ಈ ಯಾತ್ರೆಯ ಮೂಲಕ ಪ್ರಧಾನಿಯವರ ವಿಕಸಿತ ಭಾರತದ ಕನಸನ್ನು ಸಾಕಾರಗೊಳಿಸುವ ಸಂಕಲ್ಪವನ್ನು ಪ್ರತಿಯೊಬ್ಬ ಬಿಜೆಪಿ ಕಾರ್ಯಕರ್ತರೂ ಮಾಡಬೇಕು. ಜಿಲ್ಲೆಯಲ್ಲಿ ತಳಮಟ್ಟದಿಂದ ಪಕ್ಷದ ಸಂಘಟನೆಯನ್ನು ಬಲಪಡಿಸಬೇಕು. ಮೋದಿ ಅವರ ಸಂದೇಶ ಹಾಗೂ ಸರ್ಕಾರದ ಕಾರ್ಯಕ್ರಮಗಳನ್ನು ಜನರಿಗೆ ತಲುಪಿಸಲು ಕಾರ್ಯಕರ್ತರು ಶ್ರಮಿಸಬೇಕು’ ಎಂದರು.

‘ಸಂಶಯಾಸ್ಪದ ಮತದಾರರ ಕುರಿತು ಮಾಹಿತಿ ನೀಡಿದ ಬಿಜೆಪಿ ಕಾರ್ಯಕರ್ತರ ವಿರುದ್ಧ ಕೆಲವು ಪೊಲೀಸ್ ಅಧಿಕಾರಿಗಳು ಸುಳ್ಳು ಪ್ರಕರಣಗಳನ್ನು ದಾಖಲಿಸುತ್ತಿದ್ದಾರೆ. ಅಂತಹ ಅಧಿಕಾರಿಗಳು ಕಾಂಗ್ರೆಸ್ ಪರವಾಗಿ ವರ್ತಿಸುತ್ತಿದ್ದಾರೆ. ಎಸ್‌ಐಆರ್ ಪ್ರಕ್ರಿಯೆಗೆ ಸಂಬಂಧಿಸಿದಂತೆ ಕಾರ್ಯಕರ್ತರು ತಮ್ಮ ಜವಾಬ್ದಾರಿಯನ್ನು ಕಟ್ಟುನಿಟ್ಟಾಗಿ ನಿರ್ವಹಿಸಬೇಕು. ಯಾವುದೇ ಒತ್ತಡಕ್ಕೂ ಹೆದರಬಾರದು’ ಎಂದು ಅಭಯ ಪಾಟೀಲ ಕರೆ ನೀಡಿದರು.

ಮಾಜಿ ಶಾಸಕ ಪಿ. ರಾಜೀವ್ ಮಾತನಾಡಿ, ‘ಹಿಂದೆ ವಿದೇಶಗಳಲ್ಲಿ ಭಾರತದ ಬಗ್ಗೆ ಬಡ ರಾಷ್ಟ್ರ ಎಂಬ ಅಭಿಪ್ರಾಯವಿತ್ತು. ಈಗ ಆ ದೃಷ್ಟಿಕೋನ ಬದಲಾಗಿದ್ದು, ವಿಶ್ವದ ಗಮನ ಭಾರತದತ್ತ ಸೆಳೆಯುತ್ತಿದೆ. ಈ ಬದಲಾವಣೆಗೆ ಮೋದಿ ಅವರ ನಾಯಕತ್ವ ಕಾರಣ’ ಎಂದು ಹೇಳಿದರು.

‘ಇಲ್ಲಿಂದ ವಿವಿಧ ಕ್ಷೇತ್ರಗಳಿಗೆ ತೆರಳುವ ಜ್ಯೋತಿ ಯಾತ್ರೆಯನ್ನು ಯಶಸ್ವಿಗೊಳಿಸಲು ಕಾರ್ಯಕರ್ತರು ಶ್ರಮಿಸಬೇಕು. ಮೋದಿ ಸರ್ಕಾರದ ಸಾಧನೆಗಳು ಮತ್ತು ಕಾರ್ಯಕ್ರಮಗಳನ್ನು ಮನೆಮನೆಗೆ ತಲುಪಿಸಬೇಕು. ವಿಕಸಿತ ಭಾರತ ನಿರ್ಮಾಣದ ಸಂಕಲ್ಪವನ್ನು ಸಾಕಾರಗೊಳಿಸಲು ಪ್ರತಿಯೊಬ್ಬರೂ ಕೈಜೋಡಿಸಬೇಕು’ ಎಂದರು.

ಶಾಸಕರಾದ ದುರ್ಯೋಧನ ಐಹೊಳೆ, ವಿಠ್ಠಲ ಹಲಗೇಕರ, ರಾಜ್ಯಸಭಾ ಮಾಜಿ ಸದಸ್ಯ ಈರಣ್ಣ ಕಡಾಡಿ, ವಿಧಾನ ಪರಿಷತ್ ಮಾಜಿ ಸದಸ್ಯ ಮಹಾಂತೇಶ ಕವಟಗಿಮಠ, ಮಾಜಿ ಶಾಸಕರಾದ ಅರವಿಂದ ಪಾಟೀಲ, ಮಹಾಂತೇಶ ದೊಡ್ಡಗೌಡರ, ಶ್ರೀಮಂತ ಪಾಟೀಲ, ಮಹೇಶ ಕುಮಠಳ್ಳಿ, ಸಂಜಯ ಪಾಟೀಲ, ಬಿಜೆಪಿ ರಾಜ್ಯ ಘಟಕದ ಉಪಾಧ್ಯಕ್ಷ ಅನಿಲ ಬೆನಕೆ ಹಾಗೂ ಮುಖಂಡರಾದ ಎಂ.ಬಿ. ಝಿರಲಿ, ಸುಭಾಷ ಪಾಟೀಲ, ಗೀತಾ ಸುತಾರ ಉಪಸ್ಥಿತರಿದ್ದರು.

Author
Samadarshi News
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಗ್ಯಾನೇಶ ಕುಮಾರ ರಾಜೀನಾಮೆ ನೀಡಿದರೂ ಹೋರಾಟ ನಿಲ್ಲದು: ಅ.10ಕ್ಕೆ ದೆಹಲಿಯಲ್ಲಿ ಬೃಹತ್ ಪ್ರತಿಭಟನೆ4 ತಿಂಗಳಲ್ಲಿ 4ನೇ ಬಾರಿ ಅಕ್ಕಿ ದರ ಏರಿಕೆರಾಜ್ಯದಲ್ಲಿ ಶೇ.90ರಷ್ಟು ಬೆಳೆ ಹಾನಿ : ಪರಮೇಶ್ವರದೆಹಲಿಯಲ್ಲಿ ಪ್ರತಿಭಟನೆ ತೀವ್ರ: ರಾಹುಲ್‌, ಪ್ರಿಯಾಂಕಾ ಮತ್ತೆ ಪೊಲೀಸ್ ವಶಕ್ಕೆಮೋದಿ ನಾಯಕತ್ವದಲ್ಲಿ ಭಾರತ ಬಲಾಢ್ಯ ರಾಷ್ಟ್ರ: ಜಗದೀಶ ಶೆಟ್ಟರ್ಅಣುಗಳ ‘ಕನ್ನಡಿ ರಹಸ್ಯ’ ಭೇದಿಸಿದ ವಿಜ್ಞಾನಿಗಳಿಗೆ ನೊಬೆಲ್‌ಗರ್ಭಿಣಿಯ ರೀತಿ ಎಸಿ ರಹಸ್ಯ ಕಾರ್ಯಾಚರಣೆ; ಅಂತರರಾಜ್ಯ ಭ್ರೂಣಲಿಂಗ ಪತ್ತೆ ಜಾಲ ಬಯಲು‘ಸ್ಟಿಂಗ್ ಆಪರೇಷನ್’ ಪ್ರಯತ್ನ: ಐವರು ಸಚಿವರಿಗೆ ಡಿ.ಕೆ. ಶಿವಕುಮಾರ ಎಚ್ಚರಿಕೆ‘ಮತ ಕಳ್ಳತನ’ ಆರೋಪದಲ್ಲಿ ಹುರುಳಿಲ್ಲ : ಕುಮಾರಸ್ವಾಮಿSIR ಅಕ್ರಮ ಬಯಲಾಗುವ ಭೀತಿಯಿಂದ ರಾಜಪಾಲರ ಮೊರೆ: ಬಿಜೆಪಿ–ಜೆಡಿಎಸ್ ವಿರುದ್ಧ ಡಿ.ಕೆ. ಶಿವಕುಮಾರ ವಾಗ್ದಾಳಿ