ePaper
PoliticsBusinessEducationTechEntertainmentSportsEditorialHealthHealthTravelingBeauty TipsRecipes Tips

ಪುಷ್ಪಾ ಚಿತ್ರವನ್ನು ಹಿಂದಿಕ್ಕಿದ ‘ಕಾಂತಾರ’

ಬೆಂಗಳೂರು, ೧೭- ರಿಷಬ್ ಶೆಟ್ಟಿ ನಟಿಸಿ ನಿರ್ದೇಶಿಸಿರುವ ಕಾಂತಾರ ಸಿನಿಮಾ ಇದೀಗ ಮತ್ತೊಂದು ದಾಖಲೆ ಬರೆದಿದೆ ಕಳೆದ ವರ್ಷ ಡಿಸೆಂಬರ್ ನಲ್ಲಿ ಬಿಡುಗಡೆಯಾಗಿದ್ದ ಅಲ್ಲು ಅರ್ಜುನ್ ಅಭಿನಯದ ‘ಪುಷ್ಪಾ ದಿ ರೈಸ್ ಚಿತ್ರ’ ಬಾಕ್ಸ್ ಆಫೀಸ್ ನಲ್ಲಿ 365 ಕೋಟಿ ರೂಪಾಯಿ ಕಲೆಕ್ಷನ್ ಮಾಡಿತ್ತು. ಇದೀಗ ‘ಕಾಂತಾರ’ ಸಿನಿಮಾ ಸುಮಾರು 375 ಕೋಟಿ ಗಳಿಕೆ ಮಾಡಿದ್ದು 400ರ ಸಮೀಪದಲ್ಲಿದೆ. ಕರ್ನಾಟಕದಲ್ಲಿ ಹೆಸರು ಮಾಡಿದ್ದ ರಿಷಭ್ ಶೆಟ್ಟಿ ಇದೀಗ ಭಾರತದಲ್ಲೆಡೆ ಸಾಕಷ್ಟು ಅಭಿಮಾನಿ ಬಳಗ ಹೊಂದಿದ್ದಾರೆ.

ಹೊಂಬಾಳೆ ಫಿಲ್ಮ್ ಬ್ಯಾನರ್ ವಿಜಯ ಕಿರಗಂದೂರು ನಿರ್ಮಾಣ ಮಾಡಿದ್ದ ಈ ಚಿತ್ರದಲ್ಲಿ ರಿಷಬ್ ಶೆಟ್ಟಿ ಸೇರಿದಂತೆ ಸಪ್ತಮಿ ಗೌಡ, ಕಿಶೋರ, ಅಚ್ಚುತ ಕುಮಾರ, ನವೀನ ಡಿ ಪಾಟೀಲ, ಪ್ರಮೋದ ಶೆಟ್ಟಿ, ಮಾನಸಿ ಸುಧೀರ, ದೀಪಕ ರಾಯ ಪಣಜೆ, ರಾಜೀವ ಶೆಟ್ಟಿ ಅಭಿನಯಿಸಿದ್ದು ಅಜನೀಶ ಲೋಕನಾಥ ಸಂಗೀತ ಸಂಯೋಜನೆ ನೀಡಿದ್ದಾರೆ.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.