ePaper
PoliticsBusinessEducationTechEntertainmentSportsEditorialHealthHealthTravelingBeauty TipsRecipes Tips

ಕೆಪಿಟಿಸಿಎಲ್ ಪ್ರಶ್ನೆಪತ್ರಿಕೆ ಅಕ್ರಮ : ಅಭ್ಯರ್ಥಿಗಳ ಜತೆಗೆ 8 ಲಕ್ಷಕ್ಕೆ ಒಪ್ಪಂದ 

ಬೆಳಗಾವಿ: ಕೆಪಿಟಿಸಿಎಲ್ ಕಿರಿಯ ಸಹಾಯಕ ಹುದ್ದೆಗೆ ನಡೆದ ಪರೀಕ್ಷೆಯಲ್ಲಿ ನಕಲು ವಿಚಾರ ಸಂಬಂಧ 4.5 ಲಕ್ಷಕ್ಕೆ ಪ್ರಶ್ನೆ ಪತ್ರಿಕೆ ಲೀಕ್ ಮಾಡಿ ಕಳುಹಿಸಲು ಗದಗ ಮುನ್ಸಿಪಲ್ ಕಾಲೇಜು ಉಪ ಪ್ರಾಂಶುಪಾಲ ಮಾರುತಿ ಜತೆಗೆ ಡೀಲ್ ಮಾಡಲಾಗಿತ್ತು ಎಂದು ತಿಳಿದು ಬಂದಿದೆ.

ಆರೋಪಿ ಮಾರುತಿ ಮಗ ಸಮಿತಕುಮಾರ ಸೋನವಣಿ ಪ್ರಶ್ನೆ ಪತ್ರಿಕೆ ಲೀಕ್ ಮಾಡಿದ್ದ. ಒಬ್ಬೊಬ್ಬ ಅಭ್ಯರ್ಥಿಗಳಿಗೆ ಎಂಟು ಲಕ್ಷಕ್ಕೆ ಡೀಲ್ ಮಾಡಿದ್ದು, ಕಿಂಗ್ ಪಿನ್ ಸಂಜು ಭಂಡಾರಿ ಜತೆಗೆ ಅಭ್ಯರ್ಥಿಗಳು ಹಣದ ವ್ಯವಹಾರ ಮಾಡಿದ್ದರು ಎನ್ನಲಾಗಿದೆ.

ಪತ್ರಿಕೆ ಕೀ ಆನ್ಸರ್ ಬಂದ ಕೂಡಲೇ ಮೂರು ಲಕ್ಷ, ರಿಸಲ್ಟ್ ಬಂದ ನಂತರ ಐದು ಲಕ್ಷ ನೀಡುವಂತೆ ಒಪ್ಪಂದ ಮಾಡಲಾಗಿತ್ತು. ಆರೋಪಿ ಸುನೀಲ ಭಂಗಿ ಪರೀಕ್ಷಾರ್ಥಿಗಳನ್ನು ಸಂಜು ಭಂಡಾರಿಗೆ ಪರಿಚಯ ಮಾಡ್ತಿದ್ದ. ಹೀಗೆ ಪರೀಕ್ಷೆ ಪಾಸ್ ಮಾಡಿಸಿ ಕೊಡುವ ಡೀಲ್ ಮಾಡಿ ಕಿಂಗ್ ಪಿನ್ ಸಂಜು ಕೋಟ್ಯಾಂತರ ಹಣ ಸಂಪಾದಿಸಿದ್ದ ಎನ್ನಲಾಗಿದೆ.

ಇನ್ನು ಕಳೆದ ವರ್ಷ ಸಿವಿಲ್ ಪೊಲೀಸ್ ಕಾನ್ಸಟೇಬಲ್ ಪರೀಕ್ಷೆಯಲ್ಲಿ ನಕಲು ಮಾಡಿಸಿ ಸಂಜು ಭಂಡಾರಿ ಬಂಧನ ಕೂಡ ಆಗಿದ್ದ.

ಜಾಮೀನು ಮೇಲೆ ಹೊರ ಬಂದು ಕೆಪಿಟಿಸಿಎಲ್ ಕಿರಿಯ ಸಹಾಯಕ ಪರೀಕ್ಷೆಯಲ್ಲೂ ನಕಲು ಮಾಡಿದ್ದು, ಸದ್ಯ ತಲೆಮರೆಸಿಕೊಂಡಿರುವ ಸಂಜು ಭಂಡಾರಿಗಾಗಿ ಶೋಧ ಕಾರ್ಯ‌ ಮುಂದುವರೆದಿದೆ.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.