LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureEditorialBeautyRecipes

ಮಟಕಾ, ಗಾಂಜಾ ಪ್ರಕರಣ : ಮೂವರನ್ನು ಗಡಿಪಾರು ಮಾಡಿದ ಪೊಲೀಸರು

ಬೆಳಗಾವಿ : ಮಟಕಾ, ಗಾಂಜಾ ಪ್ರಕರಣದಲ್ಲಿ ಭಾಗಿಯಾಗುತ್ತಿದ್ದ ಮೂವರನ್ನು ಬೆಳಗಾವಿ ಪೊಲೀಸರು ಬೆರೆ ಜಿಲ್ಲೆಗಳಿಗೆ ಗಡಿಪಾರು ಮಾಡಿದ್ದಾರೆ.


ನಿರಂತರವಾಗಿ ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿ ಸಾರ್ವಜನಿಕರ ನೆಮ್ಮದಿ ಹಾಳು ಮಾಡುತ್ತಿದ್ದ ಈ ಮೂವರನ್ನು ಬೆಳಗಾವಿ ಪೊಲೀಸರು ಬಂಧಿಸಿ ಕ್ರಮಕ್ಕೆ ಮುಂದಾಗಿದ್ದಾರೆ.
ಶಹಾಪುರದ ಸರ್ಫರಾಜ ಶಬ್ಬೀರ ಅಹ್ಮದ್ ಶೇಖ್, ಟಿಳಕವಾಡಿ ಅಯೋಧ್ಯಾ ನಗರದ ವಿನಾಯಕ ಪ್ರಕಾಶ ಕೊಲ್ಲಾಪುರಿ ಮತ್ತು ಶಹಾಪುರ ಹೊಸೂರ ಬಸವನಗಲ್ಲಿಯ ಸಾಗರ ಪಾಂಡುರಂಗ ಸಾಲಗುಡೆ ಬಂಧಿತರು. 


ಪದೇಪದೇ ಕಾನೂನು ಬಾಹಿರ ಕೃತ್ಯಗಳಲ್ಲಿ ತೊಡಗಿ ಸಾರ್ವಜನಿಕ ನೆಮ್ಮದಿ ಹಾಳು ಮಾಡುತ್ತಿದ್ದ ಆರೋಪದ ಮೇಲೆ ಬೆಳಗಾವಿ ನಗರದ ವಿವಿಧ ಪೊಲೀಸ್ ಠಾಣೆಗಳಲ್ಲಿ ಪ್ರಕರಣ ದಾಖಲಾಗಿತ್ತು. ಸರ್ಫರಾಜ್ ಮೇಲೆ ವಿವಿಧ ಪೊಲೀಸ್ ಠಾಣೆಗಳಲ್ಲಿ ಇಸ್ಪೀಟ್ ಆಟ ಆಡಿಸುವುದು ಮತ್ತು ಇತರ ಅಪರಾಧಗಳಿಗೆ ಸಂಬಂಧಿಸಿ ಒಟ್ಟು 16 ಪ್ರಕರಣ ದಾಖಲಾಗಿವೆ. 


ವಿನಾಯಕ ಮೇಲೆ ಗಾಂಜಾ ಮಾರಾಟ ಮತ್ತು ಇತರ ಅಪರಾಧಗಳಿಗೆ ಸಂಬಂಧಿಸಿ ಐದು ಪ್ರಕರಣ ದಾಖಲಾಗಿದೆ. ಸಾಗರ ಮೇಲೆ ಇಸ್ಪೀಟ್ ಮತ್ತು ಇತರ ಅಪರಾಧಗಳಿಗೆ ಸಂಬಂಧಿಸಿದ ಆರು ಪ್ರಕರಣ ದಾಖಲಾಗಿದೆ.


ಇವರನ್ನು ಮುಂದಿನ ಐದು ತಿಂಗಳ ಅವಧಿಗೆ ವಿಜಯಪುರ , ಕಾರವಾರ ಮತ್ತು ಯಾದಗಿರಿ ಜಿಲ್ಲೆಗಳಿಗೆ ಇವರನ್ನು ಗಡಿಪಾರು ಮಾಡಿ ಆದೇಶಿಸಿದ್ದಾರೆ.

Author
A B Dharwadkar
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST