LIVE TV LocalCrimeNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes
State News

ಗಣೇಶ ಮೆರವಣಿಗೆಯಲ್ಲಿ ಅಸಭ್ಯ ವರ್ತನೆ: ಪೊಲೀಸರಿಂದ ಲಾಠಿ ಪ್ರಹಾರ

ಹುಬ್ಬಳ್ಳಿ, ಸೆ. 13 : (ಸಮದರ್ಶಿ ಸುದ್ದಿ) - ಗಣೇಶ ಮೂರ್ತಿ ಮೆರವಣಿಗೆ ವೇಳೆ ಮಹಿಳೆಯರೊಂದಿಗೆ ಕೆಲ ಯುವಕರು ಅಸಭ್ಯವಾಗಿ ವರ್ತಿಸಿದ ಹಿನ್ನೆಲೆಯಲ್ಲಿ ಪೊಲೀಸರು ಲಾಠಿ ಪ್ರಹಾರ ನಡೆಸಿ ಯುವಕರನ್ನು ಚದುರಿಸಿದ ಘಟನೆ ನಗರದಲ್ಲಿ ನಡೆದಿದೆ.

ಸೆ. 12ರಂದು ರಾತ್ರಿ ಸುಮಾರು 9.30ರ ವೇಳೆಗೆ ಮರಾಠ ಗಲ್ಲಿಯಿಂದ ಸಿಬಿಟಿ ಕಡೆಗೆ ತೆರಳುವ ರಸ್ತೆಯಲ್ಲಿ ಮೇದಾರ್ ಓಣಿಯ ಗಣಪತಿ ಹಾಗೂ ಕಲಾಲ್ ಓಣಿಯ ಗಣಪತಿ ಮೆರವಣಿಗೆಗಳು ಮುಖಾಮುಖಿಯಾಗಿದ್ದವು.

ಈ ವೇಳೆ ಗಣಪತಿ ಮೆರವಣಿಗೆಯ ಧ್ವನಿವರ್ಧಕದ ಮುಂದೆ ಕೆಲ ಯುವಕರು ಮಹಿಳೆಯರೊಂದಿಗೆ ಅಸಭ್ಯವಾಗಿ ವರ್ತಿಸುತ್ತಿರುವುದು ಕಂಡುಬಂದ ಹಿನ್ನೆಲೆಯಲ್ಲಿ ಪೊಲೀಸರು ತಕ್ಷಣ ಮಧ್ಯಪ್ರವೇಶಿಸಿದರು ಎನ್ನಲಾಗಿದೆ.

ಪರಿಸ್ಥಿತಿ ಕೈಮೀರುವುದನ್ನು ತಡೆಯಲು ಪೊಲೀಸರು 30 ಸೆಕೆಂಡ್‌ಗಳಿಗಿಂತ ಕಡಿಮೆ ಅವಧಿಯಲ್ಲಿ ಕನಿಷ್ಠ ಪ್ರಮಾಣದ ಬಲಪ್ರಯೋಗ ನಡೆಸಿ ಯುವಕರನ್ನು ಸ್ಥಳದಿಂದ ಚದುರಿಸಿ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತಂದರು ಎಂದು ತಿಳಿದುಬಂದಿದೆ.

Author
Samadarshi News
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಇನ್ಸಪೆಕ್ಟರ್ ಅಮಾನತಿಗೆ ಆಗ್ರಹಿಸಿ ಪ್ರತಿಭಟನೆ: ಅಶೋಕ, ಯದುವೀರ್ ಸೇರಿ ಬಿಜೆಪಿ ನಾಯಕರು ಪೊಲೀಸರ ವಶಕ್ಕೆಗೌರಿ-ಗಣೇಶೋತ್ಸವಕ್ಕೆ ಹಾವೇರಿ ಜಿಲ್ಲೆಯಲ್ಲಿ ಬಿಗಿ ಪೊಲೀಸ್ ಬಂದೋಬಸ್ತಆರೆಸ್ಸೆಸ್ ನೂರು ಸಲ ಹುಟ್ಟಿದರೂ ಬಹುತ್ವ ನಾಶವಾಗದು : ಬಿ.ಕೆ. ಹರಿಪ್ರಸಾದ2029ರೊಳಗೆ ಎನ್‌ಡಿಎ ಆಡಳಿತದ 21 ರಾಜ್ಯಗಳಲ್ಲಿ ಏಕರೂಪ ನಾಗರಿಕ ಸಂಹಿತೆ: ಅಮಿತ ಶಾಯೋಗಿಗೆ ಪ್ರಶ್ನೆ ಕೇಳಿದ ಪತ್ರಕರ್ತೆ ದಿವ್ಯಾ ಶ್ರೀವಾಸ್ತವಗೆ ಬೆದರಿಕೆಬೆದರಿಕೆಗೆ ಬಗ್ಗುವುದಿಲ್ಲ, ಇರಾನ್ ಶರಣಾಗುವುದಿಲ್ಲ: ಪೆಜೆಶ್ಕಿಯನ್ಗಣೇಶ ಮೆರವಣಿಗೆಯಲ್ಲಿ ಅಸಭ್ಯ ವರ್ತನೆ: ಪೊಲೀಸರಿಂದ ಲಾಠಿ ಪ್ರಹಾರಮನೆ ಬಾಗಿಲಿಗೇ ಜನನ, ಮರಣ ಪ್ರಮಾಣಪತ್ರಬ್ರಿಕ್ಸ್ ಯಾರ ವಿರುದ್ಧವೂ ಅಲ್ಲ, ಎಲ್ಲರನ್ನೂ ಒಟ್ಟಿಗೆ ಕರೆದೊಯ್ಯುವ ವೇದಿಕೆ: ಮೋದಿಭದ್ರತಾ ಮಂಡಳಿ ಸುಧಾರಣೆಗೆ ಕಾಲಮಿತಿ ನಿಗದಿಯಾಗಲಿ: ಮೋದಿ