ePaper
PoliticsBusinessEducationTechEntertainmentSportsEditorialHealthHealthTravelingBeauty TipsRecipes Tips

ಬೆಳಗಾವಿ ಬಳಿ ವಿಮಾನ ಅಪಘಾತ; ತುರ್ತು ಭೂಸ್ಪರ್ಶ

ಬೆಳಗಾವಿ: ತಾಲೂಕಿನ ಹೊನ್ನಿಹಾಳ ಹಾಗೂ ಬಾಗೇವಾಡಿ ಮಾರ್ಗದ ಮಧ್ಯೆ ಇರುವ ಹೊಲವೊಂದರಲ್ಲಿ ಮಂಗಳವಾರ ಬೆಳಿಗ್ಗೆ ತರಬೇತಿ ವಿಮಾನವೊಂದು ಭೂಸ್ಪರ್ಶವಾಗಿದೆ.

ಸಮೀಪದ ಸಾಂಬ್ರಾ ಗ್ರಾಮದ ಬಳಿ ಇರುವ ಬೆಳಗಾವಿ ವಿಮಾನ ನಿಲ್ದಾಣದಿಂದ ತರಬೇತಿ ನಡೆಸುತ್ತಿದ್ದ ಪುಟ್ಟ ವಿಮಾನವೊಂದು ತಾಲೂಕಿನ ಹೊನ್ನಿಹಾಳ ಹೊರವಲಯದ ಮೋದಗಾ- ಬಾಗೇವಾಡಿ ರಸ್ತೆ ಸಮೀಪ ತುರ್ತು ಭೂಸ್ಪರ್ಶವಾಗಿದೆ. ಘಟನೆಯಲ್ಲಿ ತರಬೇತುದಾರನ ಕಾಲಿಗೆ ಗಾಯವಾಗಿದ್ದು ಅದೃಷ್ಟವಶಾತ್ ಪ್ರಾಣ ಹಾನಿ ಸಂಭವಿಸಿಲ್ಲ.

'ರೆಡ್ ಬರ್ಡ್ ' ಹೆಸರಿನ ಈ ತರಬೇತಿ ವಿಮಾನದಲ್ಲಿ ಓರ್ವ ಚಾಲಕ ಮತ್ತು ತರಬೇತುದಾರ ಇದ್ದರೆನ್ನಲಾಗಿದೆ. ವಿಮಾನ ತರಬೇತಿ ಕೇಂದ್ರ ಮತ್ತು ಪೊಲೀಸರು ಪ್ರತ್ಯೇಕ ತನಿಖೆ ನಡೆಸುತ್ತಿದ್ದಾರೆ.

ಅಪಘಾತವಾದ ತಕ್ಷಣ ಜನಜಂಗುಳಿ ತಡೆಯಲು ಪೊಲೀಸರು ಬಿದ್ದಿದ್ದ ವಿಮಾನದ ಸುತ್ತಲೂ ಹಗ್ಗದ ಬ್ಯಾರಿಕೇಡ್ ಹಾಕಿದರು. ಮುಂಜಾಗ್ರತಾ ಕ್ರಮವಾಗಿ ಅಗ್ನಿ ಶಾಮಕದಳದ ವಾಹನಗಳೂ ಸನ್ನದ್ಧವಾಗಿದ್ದವು.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.