LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureEditorialBeautyRecipes

ಪೋಕ್ಸೊ ಪ್ರಕರಣ : ಆರೋಪಿಗೆ ಕಠಿಣ ಶಿಕ್ಷೆ

ಬೆಳಗಾವಿ : ಅಪ್ರಾಪ್ತ ವಯಸ್ಸಿನ ಬಾಲಕಿ ಮೇಲೆ ಲೈಂಗಿಕವಾಗಿ ಅತ್ಯಾಚಾರ ಎಸಗಿದ ಆರೋಪಿಗೆ 30 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆ ಮತ್ತು ದಂಡ ವಿಧಿಸಿ ಬೆಳಗಾವಿಯ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ವಿಶೇಷ ಶೀಘ್ರಗತಿ ಪೋಕ್ಸೊ ನ್ಯಾಯಾಲಯ-01 ಮಹತ್ವದ ತೀರ್ಪು ನೀಡಿದೆ.



ಬೆಳಗಾವಿಯ ಸಮರ್ಥನಗರ ನಾಲ್ಕನೇ ಕ್ರಾಸಿನ

ನಿಂಗಪ್ಪ /ವಿಶಾಲ ಭೈರಪ್ಪ ಹೊಸಮನಿ (23)ಶಿಕ್ಷೆಗೊಳಗಾದ ಆರೋಪಿ. ನೊಂದ ಬಾಲಕಿ ಅಪ್ರಾಪ್ತ ವಯಸ್ಸಿನವಳು ಎಂದು ಗೊತ್ತಿದರೂ

ಆರೋಪಿ ಬಾಲಕಿಗೆ ದಿನಾಂಕ 22-04-2022 ರಂದು ಮಧ್ಯಾಹ್ನ 12:30 ಗಂಟೆಗೆ ತನ್ನ ಮನೆಗೆ ಕರೆದುಕೊಂಡು ಹೋಗಿ ಅವಳಿಗೆ ಮನೆಯಲ್ಲಿ ಅಕ್ರಮವಾಗಿ ಕೂಡಿಟ್ಟು ಲೈಂಗಿಕ ಅತ್ಯಾಚಾರ ಮಾಡಿದಲ್ಲದೆ ದಿನಾಂಕ 21-04-2024 ರಂದು ಮಹಾರಾಷ್ಟ್ರದ ಒಂದು ಲಾಡ್ಜ್ ದಲ್ಲಿ ದಿನಾಂಕ 13-05-2024 ರವರೆಗೆ ಕೂಡಿಟ್ಟು ನಿರಂತರ ಅತ್ಯಾಚಾರ ಮಾಡಿದ್ದ. ಈ ಅಪರಾಧಕ್ಕಾಗಿ ದಾಖಲಾಧಿಕಾರಿ ಮಾರ್ಕೆಟ್ ಪಿಎಸ್ ಐ ಮಹಾಂತೇಶ ಮಠಪತಿ ಪ್ರಕರಣ ದಾಖಲಿಸಿಕೊಂಡಿದ್ದರು. ಮುಂದಿನ ಕ್ರಮವನ್ನು ತನಿಖಾಧಿಕಾರಿ ಸಿಪಿಐ ಮಹಾಂತೇಶ ಕೆ. ಧಾಮಣ್ಣನವರ ಕೈಗೊಂಡಿದ್ದರು. ಪ್ರಕರಣದ ಮುಂದಿನ ತನಿಖೆ ಮಾಡಿ ಪ್ರಕರಣವನ್ನು ಮಾನ್ಯ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ವಿಶೇಷ ಶೀಘ್ರಗತಿ ಪೋಕ್ಸೊ ನ್ಯಾಯಾಲಯ-01 ಬೆಳಗಾವಿ ನ್ಯಾಯಾಲಯಕ್ಕೆ ದೋಷಾರೋಪಣೆ ಪಟ್ಟಿ ಸಲ್ಲಿಸಿದ್ದು, ನ್ಯಾಯಾಧೀಶೆ ಸಿ.ಎಂ. ಪುಷ್ಪಲತಾ ಇವರು ಪ್ರಕರಣವನ್ನು ವಿಚಾರಣೆ ಮಾಡಿ, ಒಟ್ಟು 09 ಸಾಕ್ಷಿಗಳ ವಿಚಾರಣೆ ಮೇಲಿಂದ ಹಾಗೂ, 51 ದಾಖಲೆಗಳು, 2 ಮುದ್ದೆಮಾಲು ಆಧಾರದಲ್ಲಿ ಆರೋಪಿ ಮೇಲಿನ ಆರೋಪಣೆಗಳು ಸಾಬೀತಾಗಿವೆ ಎಂದು ತೀರ್ಪು ನೀಡಿದ್ದಾರೆ. ಆರೋಪಿತನಿಗೆ ಪೋಕ್ಸೊ ಕಲಂ 6 ರ ಪ್ರಕಾರ 30 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆ, ದಂಡ ಒಂದು ಲಕ್ಷ ರೂಪಾಯಿ, ದಂಡದ ಹಣ ತುಂಬದೇ ಇದ್ದ ಕಾಲಕ್ಕೆ 2 ವರ್ಷಗಳ ಶಿಕ್ಷೆ ವಿಧಿಸಿ ಪ್ರಕರಣದ ತೀರ್ಪು ನೀಡಿದ್ದಾರೆ.



ನೊಂದ ಬಾಲಕಿಗೆ ಜಿಲ್ಲಾ ಕಾನೂನು ಪ್ರಾಧಿಕಾರದಿಂದ ರೂ. 4 ಲಕ್ಷಗಳನ್ನು ಪರಿಹಾರ ಧನವನ್ನು ಪಡೆಯಲು ನ್ಯಾಯಾಲಯ ಆದೇಶಿಸಿರುತ್ತದೆ. ಪ್ರಕರಣದಲ್ಲಿ ಸರಕಾರದ ಪರವಾಗಿ ವಿಶೇಷ ಸರಕಾರಿ ಅಭಿಯೋಜಕ ಎಲ್. ವಿ.ಪಾಟೀಲ ಪ್ರಕರಣ ನಡೆಸಿ ಹಾಗೂ ವಾದ ಮಂಡಿಸಿದ್ದರು.
Author
A B Dharwadkar
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಲಾಠಿಚಾರ್ಜ ವಿಡಿಯೋ ನೋಡಲು ಸಮಯವಿಲ್ಲ : ಸುಪ್ರೀಮ ಕೋರ್ಟರೈತ ಹುತಾತ್ಮರ ದಿನಾಚರಣೆಯಲ್ಲಿ ಕಳಸಾ–ಬಂಡೂರಿ ಯೋಜನೆಗೆ ವೇಗ ನೀಡುವಂತೆ ಆಗ್ರಹವಾಟ್ಸಪ್ ಮದುವೆ ಆಹ್ವಾನದ ಎಪಿಕೆ ಫೈಲ್ ಕ್ಲಿಕ್ ಮಾಡಿ ₹10 ಲಕ್ಷ ಕಳೆದುಕೊಂಡ ಅಧಿಕಾರಿಮುಖ್ಯಮಂತ್ರಿ ಪ್ರವಾಸದಲ್ಲಿ ವೈದ್ಯಕೀಯ ಭದ್ರತಾ ಲೋಪ: ಡಿಎಚ್ಒಗೆ ಶೋಕಾಸ್ ನೋಟಿಸ್ಗಡಿ ಕನ್ನಡ ಶಾಲೆಗಳ ದುಸ್ಥಿತಿಗೆ ತುರ್ತು ಸ್ಪಂದನೆ ಅಗತ್ಯ: ಸಮಿತಿ ಶಿಫಾರಸುಪ್ರಧಾನಿ ನಿವಾಸದ ಎದುರು ಕಾಂಗ್ರೆಸ್‌ ಧರಣಿ: ರಾಹುಲ್ ಸೇರಿ ವಿಪಕ್ಷ ನಾಯಕರು ಪೊಲೀಸ ವಶಕ್ಕೆಪ್ರತಿಭಟನಾಕಾರರಿಗೆ ಎಎಪಿ ನೆರವು: ಕಾನೂನು, ವೈದ್ಯಕೀಯ ಸಹಾಯಕ್ಕೆ ಸಹಾಯವಾಣಿ ಆರಂಭ112ಗೆ ಕರೆ ಬಂದರೆ ಠಾಣೆ ವ್ಯಾಪ್ತಿಯ ನೆಪ ಬೇಡವಿದ್ಯಾರ್ಥಿಗಳ ಥಳಿತ ಭಾರತೀಯ ಸಂಸ್ಕೃತಿಯಲ್ಲ: ಮೋದಿ, ಅಮಿತ ಶಾ ಕ್ಷಮೆಯಾಚಿಸಲಿಮೇದಾಂತ ಆಸ್ಪತ್ರೆಗೆ ಸೋನಮ್ ವಾಂಗ್ಚುಕ ಸ್ಥಳಾಂತರಕ್ಕೆ ಹೈಕೋರ್ಟ ಅನುಮತಿ