LIVE TV LocalCrimeNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes
Sports News

ಫುಟಬಾಲ್ ಅಂತಿಮ ಪಂದ್ಯದ ವೇಳೆ ಬಟ್ಟೆ ಬಿಚ್ಚಿದ ತರುಣಿ; ಜೈಲುಶಿಕ್ಷೆ ಸಾಧ್ಯತೆ

ಲುಸೈಲ್‌: ರವಿವಾರ ನಡೆದ ಅತ್ಯಂತ ರೋಚಕ ವಿಶ್ವಕಪ್‌ ಫುಟಬಾಲ್ ಅಂತಿಮ‌ ಪಂದ್ಯದ  ವೇಳೆ ಅರ್ಜೆಂಟೀನಾದ ತರುಣಿಯೊಬ್ಬಳು ಕ್ರೀಡಾಂಗಣದಲ್ಲೇ ಬಟ್ಟೆ ಬಿಚ್ಚಿ ಟಾಪ್ ಲೆಸ್ ಆದ ಘಟನೆ ನಡೆಯಿತು.





ಫ್ರಾನ್ಸ ವಿರುದ್ದದ ರೋಚಕ ಹಣಾಹಣಿಯ ವೇಳೆ ಆರ್ಜೇಂಟಿನಾ ಪರ ಮೊಂಟಿಯೆಲ್ ಗೋಲು ಬಾರಿಸಿದ ನಂತರ ಮಹಿಳಾ ಅಭಿಮಾನಿ ಟಾಪ್​ ಲೆಸ್ ಆಗಿ ಕಾಣಿಸಿಕೊಂಡಿದ್ದು , ಇದು ​ ಟಿವಿ ಪರದೆಯ ಮೇಲೂ ಕಂಡು ಬಂತು. ಟಿವಿ ಕ್ಯಾಮರಾಗಳು ಅರ್ಜೆಂಟೀನಾ ಅಭಿಮಾನಿಗಳ ಸಂಭ್ರಮವನ್ನು ತೋರಿಸುವ ವೇಳೆ ಈಕೆಯ ಮೇರೆ ಮೀರಿದ ಸಂಭ್ರಮವೂ ಸೆರೆಯಾಗಿದೆ.



ಉತ್ಸಾಹದಲ್ಲಿ ಮೈಮರೆತಿದ್ದ ಮಹಿಳಾ ಅಭಿಮಾನಿಗೆ ಜೈಲು ಸೇರುವ ಭೀತಿ ಎದುರಾಗಿದೆ. ವಿಶ್ವಕಪ್ ಆರಂಭದ ಮುನ್ನವೇ ಸಂಪ್ರದಾಯವಾದಿ ಇಸ್ಲಾಮಿಕ್ ರಾಷ್ಟ್ರ ಕತಾರ್‌ ಮಹಿಳೆಯರ ಧಿರಿಸುಗಳಿಗೆ ಸಂಬಂಧಿಸಿ ಕೆಲವೊಂದು ನಿಯಮಗಳನ್ನು ಕಡ್ಡಾಯ ಮಾಡಿತ್ತು. ವಿಶ್ವದ ಹಲವು ರಾಷ್ಟ್ರಗಳ ಅಭಿಮಾನಿಗಳು ಪಾಲ್ಗೊಳ್ಳುವ ಪಂದ್ಯಾವಳಿಯಲ್ಲಿ ಪುರುಷರು ಮತ್ತು ಮಹಿಳೆಯರು ತಮ್ಮ ಭುಜಗಳು ಮತ್ತು ಮೊಣಕಾಲುಗಳನ್ನು ಮುಚ್ಚಿರುವುದನ್ನು ಖಚಿತಪಡಿಸಿಕೊಳ್ಳಲು ಸೂಚಿಸಿತ್ತು. ಸ್ಥಳೀಯ ಸಂಸ್ಕೃತಿಗೆ ಗೌರವವನ್ನು ತೋರಿಸಬೇಕು. ಆ ದೇಶದ ನಿಯಮಗಳನ್ನು ಉಲಂಘನೆ ಮಾಡಿದರೆ ಭಾರಿ ದಂಡ ಅಥವಾ ಜೈಲು ವಿಧಿಸುವುದಾಗಿ ಕತಾರ್ ಪ್ರವಾಸೋದ್ಯಮ ಪ್ರಾಧಿಕಾರವು ಹೇಳಿತ್ತು.



ಟಿವಿ ಸಂದರ್ಶನದಲ್ಲಿ ಕ್ರೊಯೇಷಿಯಾ ಫುಟ್‌ಬಾಲ್ ಅಭಿಮಾನಿ, ಮಾಡೆಲ್ ಇವಾನಾ ನಾಲ್ ಅವರೂ ಹಾಟ್ ಅವತಾರದಲ್ಲಿ ಕಾಣಿಸಿ ಸುದ್ದಿಯಾಗಿ ಕತಾರ್ ನಲ್ಲಿ ಆಕ್ರೋಶಕ್ಕೆ ಗುರಿಯಾಗಿದ್ದರು.



Author
Samadarshi News
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಕಾಡುಹಂದಿಗಳ ದಾಳಿಗೆ ಕಬ್ಬು ಬೆಳೆ ನಾಶಗದ್ದಲದ ನಡುವೆಯೇ ಮುಕ್ತಾಯ ಕಂಡ ಸಂಸತ್ ಅಧಿವೇಶನ: ಚರ್ಚೆಯಿಲ್ಲದೆ 11 ಮಸೂದೆಗಳ ಅಂಗೀಕಾರ300 ಅಡಿ ಕುಸಿದ ವಿಮಾನ, ಪೈಲಟ್ ಗಾಂಜಾ ಸೇವನೆ ಪತ್ತೆ!ಮಾನವ ಹಕ್ಕುಗಳ ಪಾಠ ನಿಲ್ಲಿಸಿ; ಫ್ರಾನ್ಸ್ ವಿರುದ್ಧ ಇರಾನ್ ಕಿಡಿ25 ಬಿಜೆಪಿ ನಾಯಕರು, ಹಿಂದುತ್ವ ಕಾರ್ಯಕರ್ತರ ವಿರುದ್ಧದ ಪ್ರಕರಣ ಹಿಂಪಡೆಯಲು ನ್ಯಾಯಾಲಯದ ಅನುಮತಿ!ದೇಶಕ್ಕೇ ಮಾದರಿಯಾಗುವಂತೆ ಗಣೇಶೋತ್ಸವ ಆಚರಿಸೋಣಪರಪ್ಪನ ಅಗ್ರಹಾರದಲ್ಲಿ ಪ್ರಜ್ವಲ್‌ ರೇವಣ್ಣ ಬಳಿ ಮೊಬೈಲ್‌, ಪೆನ್‌ಡ್ರೈವನಲ್ಲಿ ಅಶ್ಲೀಲ ವಿಡಿಯೋ ಪತ್ತೆ ; ವಿಐಪಿ ಸೆಲ್‌ನಿಂದ ಸಾಮಾನ್ಯ ಬ್ಯಾರಕ್‌ಗೆ ಸ್ಥಳಾಂತರಲಡಾಖ್‌ನ ಲೇಹ್‌ನಲ್ಲಿ 5.5 ತೀವ್ರತೆಯ ಭೂಕಂಪದೇಶಭಕ್ತಿಯ ಸರ್ಟಿಫಿಕೇಟ್ ನೀಡುವ ಮುನ್ನ ಆರ್‌ಎಸ್‌ಎಸ್‌ ತ್ರಿವರ್ಣ ಧ್ವಜದ ಇತಿಹಾಸ ಹೇಳಲಿ: ಪ್ರಿಯಾಂಕ್ ಖರ್ಗೆಖರ್ಗೆ ರ‍್ಯಾಲಿ ನಡೆದ ಸ್ಥಳದಲ್ಲಿ ‘ಶುದ್ಧೀಕರಣ’ ಹವನ; ಬಿಜೆಪಿ–ಕಾಂಗ್ರೆಸ್ ನಡುವೆ ವಾಕ್ಸಮರ