ePaper
PoliticsBusinessEducationTechEntertainmentSportsEditorialHealthHealthTravelingBeauty TipsRecipes Tips

ಅತ್ಯಾಚಾರ ನಡೆಸಿ, ಬಾಲಕಿಯರನ್ನು ಮರಕ್ಕೆ ನೇಣು ಹಾಕಿದರು!

ಲಖಿಮಪುರ ಖೇರಿ : ಉತ್ತರ ಪ್ರದೇಶದ ನಿಘಾಸನ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪರಿಶಿಷ್ಟ ಸಮುದಾಯದ ಇಬ್ಬರು ಸಹೋದರಿಯರ ಮೃತದೇಹಗಳು ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿವೆ.

ಅಪ್ರಾಪ್ತ ಸಹೋದರಿಯರ ಶವಗಳ ಮರಣೋತ್ತರ ಪರೀಕ್ಷೆ ನಡೆಸಲಾಗಿದ್ದು ಅವರ ಮೇಲೆ ಅತ್ಯಾಚಾರ ಮಾಡಿ ಕತ್ತು ಹಿಸುಕಿ ಕೊಲೆ ಮಾಡಿದ ವರದಿ ಬಂದಿದೆ. ಸತ್ತ ಆ ಸಹೋದರಿಯರನ್ನು ನಂತರ ಮರಕ್ಕೆ ನೇಣು ಹಾಕಿ ಆತ್ಮಹತ್ಯೆಯ ರೂಪ ನೀಡಲು ಪ್ರಯತ್ನಿಸಲಾಗಿದೆ.



ಸಂತ್ರಸ್ತೆಯ ತಾಯಿ ಪೊಲೀಸರನ್ನು ಸಂಪರ್ಕಿಸಿ ದೂರು ನೀಡಿದ ನಂತರ ಆರು ಆರೋಪಿಗಳನ್ನು ಪೊಲೀಸ್ ವಶಪಡಿಸಿಕೊಂಡಿದ್ದಾರೆ.

ಎಫ್ಐಆರ್ ಪ್ರಕಾರ, ಪ್ರಮುಖ ಆರೋಪಿ ಛೋಟು ತನ್ನ ಸ್ನೇಹಿತರೊಂದಿಗೆ ಸಂತ್ರಸ್ತರ ಮನೆಗೆ ನುಗ್ಗಿ ಅವರ ತಾಯಿಯನ್ನು ಥಳಿಸಿ, ಬಲವಂತವಾಗಿ ಇಬ್ಬರೂ ಬಾಲಕಿಯರನ್ನು ಅಪಹರಿಸಿ ಬೈಕ್ ನಲ್ಲಿ ಕರೆದೊಯ್ದರು. ಆರೋಪಿಗಳು ಇಬ್ಬರೂ ಸಹೋದರಿಯರ ಮೇಲೆ ಅತ್ಯಾಚಾರ ಮಾಡಿದರು ಮತ್ತು ಅವರ ದೇಹಗಳನ್ನು ಮರಕ್ಕೆ ನೇತು ಹಾಕಿದರು ಎಂದು ಎಫ್ಐಆರ್ ನಲ್ಲಿ ತಿಳಿಸಲಾಗಿದೆ.

ಆರೋಪಿಗಳ ವಿರುದ್ಧ ಭಾರತೀಯ ದಂಡ ಸಂಹಿತೆ 302, 323, 452, 376 ರ ಅಡಿಯಲ್ಲಿ ಕೊಲೆ ಮತ್ತು ಅತ್ಯಾಚಾರಕ್ಕೆ ಸಂಬಂಧಿಸಿದಂತೆ ಮತ್ತು ಲೈಂಗಿಕ ಅಪರಾಧಗಳಿಂದ ಮಕ್ಕಳನ್ನು ರಕ್ಷಿಸುವ ಕಠಿಣ ಕಾಯ್ದೆಯ ಅಡಿಯಲ್ಲಿ ಆರೋಪ ಹೊರಿಸಲಾಗಿದೆ ಎನ್ನಲಾಗಿದೆ.

 
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.